Dilip Tirkey | ಹಾಕಿ ಇಂಡಿಯಾ ಅಧ್ಯಕ್ಷರಾಗಿ ದಿಲೀಪ್ ಟಿರ್ಕೆ ಅವಿರೋಧ ಆಯ್ಕೆ
ಹಾಕಿ ಇಂಡಿಯಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಭಾರತ ಹಾಕಿ ತಂಡದ ಮಾಜಿ ನಾಯಕ ದಿಲೀಪ್ ಟಿರ್ಕೆ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಹಾಕಿ ಇಂಡಿಯಾ ಸಂಸ್ಥೆಯ ನೂತನ ಪದಾಧಿಕಾರಿಗಳ ಚುನಾವಣೆ ಅಕ್ಟೋಬರ್ 1ರಂದು ನಿಗದಿಯಾಗಿತ್ತು.
ಆದ್ರೆ ಫಲಿತಾಂಶ ಮಾತ್ರ ಚುನಾವಣೆಗೆ ಮುನ್ನವೇ ಹೊರಬಿದ್ದಿದೆ. ಯಾಕಂದ್ರೆ ಹಾಕಿ ಇಂಡಿಯಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಹುದ್ದೆಗೆ ಪ್ರತಿಸ್ಪರ್ಧೆಯೇ ಇಲ್ಲ. ಹೀಗಾಗಿ ಎಲ್ಲಾ ಹುದ್ದೆಗಳ ಪದಾಧಿಕಾರಿಗಳು ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ.
ಹಾಗೇ ನೋಡಿದ್ರೆ ಅಧ್ಯಕ್ಷ ಸ್ಥಾನಕ್ಕೆ ದಿಲೀಪ್ ಟಿರ್ಕೆ ಜೊತೆ ಉತ್ತರ ಪ್ರದೇಶ ಹಾಕಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಕಟ್ಯಾಲ್, ಜಾರ್ಖಾಂಡ್ ಹಾಕಿ ಸಂಸ್ಥೆಯ ಅಧ್ಯಕ್ಷ ಭೋಲಾನಾಥ್ ಸಿಂಗ್ ಅವರು ನಾಮಪತ್ರ ಸಲ್ಲಿಸಿದ್ರು.

ಆದ್ರೆ ಕೊನೆಯ ಕ್ಷಣದಲ್ಲಿ ಭೋಲಾನಾಥ್ ಸಿಂಗ್ ಮತ್ತು ರಾಕೇಶ್ ಕಟ್ಯಾಲ್ ಅವರು ನಾಮಪತ್ರವನ್ನು ಹಿಂಪಡೆದುಕೊಂಡ್ರು. ಪರಿಣಾಮ ದೀಲಿಪ್ ಟಿರ್ಕೆ ಅವರ ಅಧ್ಯಕ್ಷ ಗಾದಿಯ ಹಾದಿ ಸುಗಮವಾಯ್ತು.
ಇನ್ನು ಹಾಕಿ ಇಂಡಿಯಾದ ಕಾರ್ಯದರ್ಶಿಯಾಗಿ ಭೋಲಾನಾಥ್ ಸಿಂಗ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೀಗ ಹಾಕಿ ಇಂಡಿಯಾದ ನೂತನ ಪದಾಧಿಕಾರಿಗಳ ತಂಡವನ್ನು ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಕೂಡ ಮಾನ್ಯತೆ ಮಾಡಿದೆ.
ದಿಲೀಪ್ ಟಿರ್ಕೆ ಅವರು ಒರಿಸ್ಸಾ ಹಾಕಿ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಬಿಜೆಡಿ ಪಕ್ಷದ ರಾಜ್ಯ ಸಭಾ ಸದಸ್ಯರೂ ಕೂಡ ಆಗಿದ್ದಾರೆ. 1999ರಲ್ಲಿ ದಿಲೀಪ್ ಟಿರ್ಕೆ ಅವರು ಭಾರತ ಹಾಕಿ ತಂಡವನ್ನು ಸೇರಿಕೊಂಡಿದ್ದರು.
ಇನ್ನು ಹಾಕಿ ಇಂಡಿಯಾದ ಕಾರ್ಯದರ್ಶಿಯಾಗಿ ಭೋಲಾನಾಥ್ ಸಿಂಗ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.








