ಅಕ್ರಮ ಮರಳು ಅಡ್ಡೆ ಮೇಲೆ ದಾಳಿ : ಪೊಲೀಸರ ವಿರುದ್ಧ ರೇಣುಕಾಚಾರ್ಯ ಗರಂ
ದಾವಣಗೆರೆ : ದೊಡ್ಡ ಹೀರೋ ಏನ್ರಿ, ಮಟ್ಕಾ ಆಡೋರನ್ನ ಜೂಜಾಡೋರನ್ನ ಹಿಡೀರಿ, ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ ಎಂದು ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿಸಿದ್ದಕ್ಕಾಗಿ ನೂತನ ಎಸ್ಪಿ ರಿಷ್ಯಂತ್ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗರಂ ಆಗಿದ್ದಾರೆ.
ದಾವಣಗೆರೆ ಎಸ್ಪಿ ರಿಷ್ಯಂತ್ ಅವರ ಸೂಚನೆಯಂತೆ ಮರಳು ಅಡ್ಡೆಗಳ ಮೇಲೆ ಭಾನುವಾರ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದರು.
ಈ ವಿಚಾರ ತಿಳಿದ ರೇಣುಕಾಚಾರ್ಯ, ಹೊನ್ನಾಳಿ ಸಿಪಿಐ ದೇವರಾಜ್ಗೆ ಕರೆ ಮಾಡಿ ಎಸ್ಪಿ ವಿರುದ್ಧ ಗರಂ ಆಗಿದ್ದಾರೆ.
ಅವರೇನು ದೊಡ್ಡ ಹೀರೋ ಏನ್ರಿ, ಮಟ್ಕಾ ಆಡೋರನ್ನ ಜೂಜಾಡೋರನ್ನ ಹಿಡೀರಿ, ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ.
ಮರಳು ಗಣಿಗಾರಿಕೆ ಮಾಡೋರು ಅತ್ಯಾಚಾರ ಕೊಲೆ ಮಾಡಿದ್ದಾರಾ?, ಹೊಟ್ಟೆ ಪಾಡಿಗೆ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ.
ಅವರ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ. ತಾಖತ್ ಇದ್ರೆ ಸೀಜ್ ಮಾಡ್ರಿ ಎಂದು ಸಿಪಿಐ ದೇವರಾಜ್ ಜೊತೆ ಮಾತನಾಡುತ್ತಾ ಎಸ್ಪಿಗೆ ರೇಣುಕಾಚಾರ್ಯ ಆವಾಜ್ ಹಾಕಿದ್ದಾರೆ.









