ಕೋಪಾ ಅಮೆರಿಕಾ ಕಪ್ ಎತ್ತಿ ಹಿಡಿದ ಮೆಸ್ಸಿ ಬಾಯ್ಸ್
ಬೆಜಿಲ್ : ಇಲ್ಲಿನ ರಿಯೋ ಡಿ ಜನೇರಿಯೋದಲ್ಲಿ ನಡೆದ ಕೋಪಾ ಅಮೆರಿಕಾ ಟ್ರೋಫಿ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅಜೆರ್ಂಟೀನಾ ಜಯಭೇರಿ ಬಾರಿಸಿದೆ.
ಅಜೆರ್ಂಟೀನಾ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು 1-0ಯಿಂದ ಮಣಿಸಿ ಕೋಪಾ ಅಮೆರಿಕಾ ಟ್ರೋಫಿ ಎತ್ತಿ ಹಿಡಿದಿದೆ.
ಅಜೆರ್ಂಟೀನಾದ 28 ವರ್ಷಗಳ ಪ್ರಶಸ್ತಿಬರವನ್ನು ಪಂದ್ಯದ 22ನೇ ನಿಮಿಷದಲ್ಲಿ ಏಂಜಲ್ ಡಿ ಮರಿಯಾ ಗೋಲು ಬಾರಿಸುವ ಮೂಲಕ ನೀಗಿಸಿದರು. 1993ರ ನಂತರ ಅಜೆರ್ಂಟೀನಾ ಗೆದ್ದ ಪ್ರಮುಖ ಟ್ರೋಫಿ ಇದಾಗಿದೆ.
ಮುಖ್ಯವಾಗಿ ಫುಟ್ ಬಾಲ್ ಪ್ರಪಂಚದ ಶ್ರೇಷ್ಠ ಆಟಗಾರ ಎಂದೇ ಕರೆಯಲ್ಪಡುವ ಲಿಯೋನಲ್ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪ್ರತಿಷ್ಠಿತ ಪ್ರಶಸ್ತಿ ಗೆದ್ದಿಲ್ಲ ಎನ್ನುವ ಅಪವಾದವಿತ್ತು. ಆದ್ರೆ ಈ ಟ್ರೋಪಿ ಗೆಲ್ಲುವ ಮೂಲಕ ಆ ಕೊರಗು, ಅಪವಾದ ದೂರವಾಗಿದೆ.
ಇನ್ನು ಅಜೆರ್ಂಟೀನಾ ಕೋಪಾ ಅಮೆರಿಕಾ ಇತಿಹಾಸದಲ್ಲಿ ತನ್ನ 15ನೇ ಟ್ರೋಫಿ ಗೆಲ್ಲುವ ಮೂಲಕ ಉರುಗ್ವೆ ಜೊತೆಗೆ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಹಂಚಿಕೊಂಡಿದೆ.