ಬಿಸ್ಕೂಟ್ ರೊಟ್ಟಿ
ಬೇಕಾಗುವ ಸಾಮಾಗ್ರಿಗಳು:
ಮೈದಾ – 1 ಕಪ್
ತೆಂಗಿನಕಾಯಿತುರಿ – 3/4 ಕಪ್
ರವಾ – ಅರ್ಧ ಕಪ್
ಕಡಲೇಹಿಟ್ಟು – 3 ಟೀ ಚಮಚ
ಮೆಣಸಿನ ಪುಡಿ – 1/2 ಚಮಚ
ಅರಶಿನ – ಚಿಟಿಕೆಯಷ್ಟು
ಕರಿಯಲು ಎಣ್ಣೆ
ಉದ್ದಿನ ಬೇಳೆ – 1/2 ಚಮಚ
ಸಾಸಿವೆ – 1/2 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ

ಮೊದಲು ಮೈದಾಗೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ ಸೇರಿಸಿ. ನಂತರ 2 ಚಮಚ ಬಿಸಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಹಿಟ್ಟು ತಯಾರಿಸಿಕೊಂಡು ಚೆನ್ನಾಗಿ ನಾದಿ. ಬಳಿಕ 10 ನಿಮಿಷ ಇದನ್ನು ಹಾಗೆಯೇ ಮುಚ್ಚಿಡಿ.
ಈಗ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ ಸೇರಿಸಿ ಸಿಡಿದ ಬಳಿಕ, ಉದ್ದಿನಬೇಳೆ, ಕರಿಬೇವು ಸೊಪ್ಪು, ಚಿಟಿಕೆಯಷ್ಟು ಇಂಗು ಹಾಕಿ. ನಂತರ ಇದಕ್ಕೆ ಕಡಲೇಹಿಟ್ಟು, ರವಾ ಹಾಕಿ ಹುರಿಯಿರಿ. ಬಳಿಕ ತೆಂಗಿನಕಾಯಿತುರಿ ಸೇರಿಸಿ. ನಂತರ ಮೆಣಸಿನ ಪುಡಿ, ಅರಶಿನ ಪುಡಿ ಹಾಕಿ ಚೆನ್ನಾಗಿ ಬೆರೆಸಿ.
ನಂತರ ಇದನ್ನು ತಣ್ಣಗಾದ ಬಳಿಕ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
ಈಗ ತಯಾರಿಸಿಟ್ಟುಕೊಂಡ ಮೈದಾ ಹಿಟ್ಟಿನ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ ಲಟ್ಟಿಸಿಕೊಳ್ಳಿ. ನಂತರ ಮಾಡಿಟ್ಟುಕೊಂಡ ಉಂಡೆಯನ್ನು ಮಧ್ಯದಲ್ಲಿ ಇಟ್ಟು ಮುಚ್ಚಿ. ನಂತರ ಪೂರಿ ತರಹ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಯಾದ ಬಿಸ್ಕೂಟ್ ರೊಟ್ಟಿ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಅನ್ನ ಸೇವನೆ ಬಳಿಕ ಅಲಸ್ಯ ಏಕೆ ಸಂಭವಿಸುತ್ತದೆ?#rice https://t.co/0E2OLSEhCE
— Saaksha TV (@SaakshaTv) August 27, 2021
ಬಾಳೆಕಾಯಿಯ ಆರೋಗ್ಯ ಪ್ರಯೋಜನಗಳೇನು? https://t.co/y3TcGfhBDo
— Saaksha TV (@SaakshaTv) August 28, 2021
ಏನಿದು ಪ್ರತಿಕಾಯ/ ಆಂಟಿಬಾಡಿ ಪರೀಕ್ಷೆ? ಕೊರೋನಾ ವಿರುದ್ಧದ ಹೋರಾಟದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ?#Antibodytest #corona https://t.co/ZnV66B4ZBP
— Saaksha TV (@SaakshaTv) August 28, 2021
ಶ್ಯಾವಿಗೆ ಆಲೂ ಬೋಂಡಾ https://t.co/908TAdCzds
— Saaksha TV (@SaakshaTv) August 28, 2021
#Saakshatv #biscuitrotti







