ಮೊಬೈಲ್ ನಂಬರ್ ಇಲ್ಲದೆ ಆಧಾರ್ ಕಾರ್ಡ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು?
ಆಧಾರ್ ಕಾರ್ಡ್ ಇಂದಿನ ಪ್ರಮುಖ ಡಾಕ್ಯುಮೆಂಟ್ ಆಗಿದ್ದು, ಅದು ಇಲ್ಲದೆ ಅನೇಕ ಕೆಲಸಗಳು ಸಾಧ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಪಾಸ್‌ಪೋರ್ಟ್ ಪಡೆಯುವವರೆಗೆ ಆಧಾರ್ ಕಾರ್ಡ್ ಅಗತ್ಯವಿದೆ.
ಆದ್ದರಿಂದ, ಆಧಾರ್‌ಗೆ ಸಂಬಂಧಿಸಿದ ಪ್ರತಿಯೊಂದು ವಿಷಯದ ಬಗ್ಗೆಯೂ ಜಾಗೃತರಾಗಿರಬೇಕು.

ಹಲವು ಬಾರಿ ಆಧಾರ್ ಕಾರ್ಡ್ ಕಳೆದುಹೋಗಿರುತ್ತದೆ ಮತ್ತು ಇದ್ದಕ್ಕಿದ್ದಂತೆ ಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಕಾರ್ಡ್ ಅನ್ನು ತಕ್ಷಣವೇ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಆದರೆ ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗದೇ ಇದ್ದರೆ ಸಮಸ್ಯೆ ಉಂಟಾಗುತ್ತದೆ. ಆಗ ನೀವು ಆಧಾರ್ ಕಾರ್ಡ್ ಡೌನ್‌ಲೋಡ್ ಆಗುವುದಿಲ್ಲ ಎಂದು ಭಾವಿಸುತ್ತೀರಿ. ಆದರೆ ಇದೀಗ ಯೂನಿಕ್ ಐಡೆಂಟಿಟಿ ಅಥಾರಿಟಿ ಆಫ್ ಇಂಡಿಯಾ (UIDAI) ಬಳಕೆದಾರರಿಗಾಗಿ ವಿಶೇಷ ಸೌಲಭ್ಯವನ್ನು ನೀಡಿದೆ. ಇದರಲ್ಲಿ ಮೊಬೈಲ್ ಸಂಖ್ಯೆಗಳಿಲ್ಲದೆ ಆಧಾರ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಬಹುದು.
ಆಧಾರ್ ಕಾರ್ಡ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು
ಯುಐಡಿಎಐ ನೀಡಿದ ಮಾಹಿತಿಯ ಪ್ರಕಾರ, ಯಾವುದೇ ವ್ಯಕ್ತಿಯು ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಅಂದರೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಲ್ಲ.
ನೋಂದಾಯಿತ ಫೋನ್ ಸಂಖ್ಯೆ ಇಲ್ಲದೆ ಸುಲಭವಾಗಿ ಆಧಾರ್ ಅನ್ನು ಡೌನ್ಲೋಡ್ ಮಾಡುವ ವಿಧಾನ
1. ಮೊದಲಿಗೆ ನೀವು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು https://uidai.gov.in/
2. ಮುಖಪುಟದಲ್ಲಿ ‘ನನ್ನ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಿ
3. ನಂತರ ‘ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
4. ನಂತರ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಅಥವಾ ನಿಮ್ಮ 16 ಅಂಕಿಗಳ ವರ್ಚುವಲ್ ಗುರುತಿನ ಸಂಖ್ಯೆ (VID) ನಮೂದಿಸಿ
5. ನೀವು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಭದ್ರತಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ
6. ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಡೌನ್‌ಲೋಡ್ ಮಾಡಲು ನೀವು ‘ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಿಲ್ಲ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು
7. ನಂತರ ನೀವು ನಿಮ್ಮ ಪರ್ಯಾಯ ಸಂಖ್ಯೆ ಅಥವಾ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
8. ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು ‘OTP ಕಳುಹಿಸಿ’ ಕ್ಲಿಕ್ ಮಾಡಬೇಕು
9. ನಂತರ OTP ನಮೂದಿಸಿದ ನಂತರ, ಅಂತಿಮವಾಗಿ ಸಲ್ಲಿಸು ಬಟನ್ ಕ್ಲಿಕ್ ಮಾಡಿ
10. ಈಗ ನೀವು ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಬೇಕು ಮತ್ತು ಈಗ ನೀವು ಪಿಡಿಎಫ್ ಡೌನ್‌ಲೋಡ್ ಮಾಡಲು ನಿಮ್ಮ ಡಿಜಿಟಲ್ ಸಹಿಯನ್ನು ಸಲ್ಲಿಸಬೇಕು.
ಇವೆಲ್ಲ ಮಾಡಿದ ನಂತರ, ನೀವು ಅಂತಿಮವಾಗಿ ಸೇವಾ ವಿನಂತಿಯ ಸಂಖ್ಯೆಯನ್ನು (SRN) SMS ಮೂಲಕ ಪಡೆಯುತ್ತೀರಿ. ಈ ಮೂಲಕ, ನಿಮ್ಮ ಆಧಾರ್‌ನ ಸ್ಥಿತಿಯನ್ನು ನೀವು ತಿಳಿದುಕೊಳ್ಳಬಹುದು.
ಪಿವಿಸಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ
ಪ್ರತಿಯೊಬ್ಬರ ಕಾರ್ಡ್‌ನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಯುಐಡಿಎಐ ಆಧಾರ್ ಪಿವಿಸಿ ಕಾರ್ಡ್ ಅನ್ನು ಪ್ರಾರಂಭಿಸಿದೆ. ಈ ಕಾರಣದಿಂದಾಗಿ, ಯಾವುದೇ ಬಳಕೆದಾರರು UIDAI ವೆಬ್‌ಸೈಟ್‌ನಿಂದ ಹೊಸ PVC ಕಾರ್ಡ್ ಅನ್ನು ಆರ್ಡರ್ ಮಾಡಬಹುದು.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಹಸಿ ಬೆಳ್ಳುಳ್ಳಿ ಅಥವಾ ಹೆಚ್ಚು ಬೆಳ್ಳುಳ್ಳಿ ಸೇವಿಸುವುದರ ದುಷ್ಪರಿಣಾಮಗಳು#Saakshatv #garlic https://t.co/mIxleAvTJY
— Saaksha TV (@SaakshaTv) September 7, 2021
ಅವಲಕ್ಕಿ ಲಡ್ಡು https://t.co/gV54PKVHOw
— Saaksha TV (@SaakshaTv) September 7, 2021
ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಗಿಡಮೂಲಿಕೆಗಳು/ಮಸಾಲೆಗಳು https://t.co/7L3i9zpXQY
— Saaksha TV (@SaakshaTv) September 6, 2021
ರೈಲ್ವೆ ಪ್ರಯಾಣಿಕರಿಗೆ ಇನ್ನು ಈ ವಿಶೇಷ ಸೌಲಭ್ಯ ಪಡೆಯಲು ಸಾಧ್ಯವಿಲ್ಲ https://t.co/0qqT2kqApa
— Saaksha TV (@SaakshaTv) September 6, 2021
#Download #Aadhaar #mobilenumber








