ADVERTISEMENT
Wednesday, June 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ವಿವಿಧ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

Namratha Rao by Namratha Rao
October 23, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

5 ವಿವಿಧ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

1. ಮಂಗಳೂರು ಬನ್ಸ್ 

ಬೇಕಾಗುವ ಪದಾರ್ಥಗಳು

Related posts

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

June 24, 2026
ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

June 24, 2026

ಮೈದಾ ಹಿಟ್ಟು – 3 ಕಪ್
ಸಕ್ಕರೆ – ಅರ್ಧ ಕಪ್
ಮೊಸರು – ಅರ್ಧ ಕಪ್
ಅಡುಗೆ ಸೋಡಾ – 1 ಚಿಟಿಕೆ
ಚೆನ್ನಾಗಿ ಹಣ್ಣಾದ ಬಾಳೆಹಣ್ಣು – 2
ಜೀರಿಗೆ – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ

Saakshatv cooking recipes buns

ಒಂದು ಪಾತ್ರೆಯಲ್ಲಿ ಬಾಳೆಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿಕೊಳ್ಳಿ (ಅಥವಾ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿ) ಇದಕ್ಕೆ ಸಕ್ಕರೆ, ಜೀರಿಗೆ, ಅಡಿಗೆ ಸೋಡಾ, ಉಪ್ಪು, ಮೊಸರು ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ. ಸಕ್ಕರೆ ಪೂರ್ತಿ ಕರಗಿದ ಬಳಿಕ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.

ಕಲಸಿದ ಹಿಟ್ಟನ್ನು ಸುಮಾರು 8-10 ಗಂಟೆಗಳ ಕಾಲ ಹಾಗೆಯೇ ನೆನೆಯಲು ಬಿಡಿ. ನಂತರ ಸಣ್ಣ ಲಿಂಬೆ ಹಣ್ಣು ಗಾತ್ರದ ಉಂಡೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೈದಾ ಪುಡಿ ಸೇರಿಸಿ ಸ್ವಲ್ಪ ದಪ್ಪ ಇರುವಂತೆ ಲಟ್ಟಿಸಿಕೊಳ್ಳಿ.
Saakshatv cooking recipes buns

ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಕಾಯಿಸಿ. ಇತ್ತ ಎಣ್ಣೆ ಕಾದ ಬಳಿಕ ಲಟ್ಟಿಸಿದ ಬನ್ಸ್ ನ್ನು ಎಣ್ಣೆಯಲ್ಲಿ‌ ಬಿಡಿ. ಸ್ವಲ್ಪ ಹೊತ್ತಿನ ಬಳಿಕ ಬನ್ಸ್ ಉಬ್ಬುತ್ತದೆ. ಕಂದು ಬಣ್ಣ ಬರುವವರೆಗೆ ಹುರಿದು ತೆಗೆಯಿರಿ.
ಈಗ ರುಚಿಯಾದ ಬಿಸಿ ಬನ್ಸ್ ತಿನ್ನಲು ರೆಡಿ.

2. ಬ್ರೆಡ್ ಗುಲಾಬ್ ಜಾಮೂನ್ 

ಪದಾರ್ಥಗಳು

1 ಕಪ್ ಸಕ್ಕರೆ
1/2 ಕಪ್ ನೀರು
1 1/2 ಟೀಸ್ಪೂನ್ ಏಲಕ್ಕಿ ಪುಡಿ
3 ಟೀಸ್ಪೂನ್ ನಟ್ಸ್( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ)
1 ಟೀಸ್ಪೂನ್ ಗುಲ್ಕಂಡ್ / ರೋಸ್ ಪೆಟಲ್ ಜಾಮ್
6 ಬ್ರೆಡ್ ಚೂರುಗಳು
ಒಂದು ಪಿಂಚ್ ಅಡಿಗೆ ಸೋಡಾ
ಅಗತ್ಯವಿರುವಷ್ಟು ಹಾಲು Saakshatv cooking recipes Gulabjamun
Saakshatv cooking recipes Gulabjamun

ಪ್ಯಾನ್ ಅನ್ನು ಹೆಚ್ಚಿನ ಶಾಖದಲ್ಲಿ ಬಿಸಿ ಮಾಡಿ.ಸಕ್ಕರೆ ಮತ್ತು ನೀರು ಸೇರಿಸಿ. ಚೆನ್ನಾಗಿ ಬೆರೆಸಿ.
ಸಕ್ಕರೆ ಕರಗಿದಾಗ ಮತ್ತು ಸಿರಪ್ ಕುದಿ ಬರಲು ಪ್ರಾರಂಭವಾದಾಗ ತಾಪಮಾನವನ್ನು ಕಡಿಮೆ ಮಾಡಿ.

ಸಿರಪ್ ಅನ್ನು 7-8 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಕೆಳಗಿಳಿಸಿ.
ಏಲಕ್ಕಿ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಸಕ್ಕರೆ ಪಾಕ ರೆಡಿಯಾಗಿದೆ.‌

ಒಂದು ಪಾತ್ರೆಯಲ್ಲಿ ಗುಲ್ಕಂಡ್ (ಗುಲಾಬಿ ದಳಗಳ ಜಾಮ್) ತೆಗೆದುಕೊಳ್ಳಿ. ಅದಕ್ಕೆ ನಟ್ಸ್ ಗಳನ್ನು ( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ) ಸೇರಿಸಿ.

ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದರ ಸಣ್ಣ ಉಂಡೆಗಳನ್ನಾಗಿ ಮಾಡಿ. ಇದನ್ನು ಸ್ವಲ್ಪ ಸಮಯದವರೆಗೆ ರೆಫ್ರಿಜರೇಟರ್ನಲ್ಲಿ ಇರಿಸಿ.

ಬ್ರೆಡ್ ತುಂಡುಗಳನ್ನು ತೆಗೆದುಕೊಳ್ಳಿ. ಬ್ರೆಡ್ ನ ಅಂಚುಗಳನ್ನು ಕತ್ತರಿಸಿ. ಈಗ ಬ್ರೆಡ್‌ ಅನ್ನು ಸಣ್ಣ ತುಂಡುಗಳನ್ನು ಮಾಡಿ ಪುಡಿ ಮಾಡಿ.
ಅಡಿಗೆ ಸೋಡಾ ಸೇರಿಸಿ. ಹಾಲನ್ನು ಸೇರಿಸಿ ಮಿಶ್ರಣ ಮಾಡಿ.
ಬ್ರೆಡ್‌ನ ತಾಜಾತನಕ್ಕೆ ಅನುಗುಣವಾಗಿ ಹಾಲಿನ ಪ್ರಮಾಣವನ್ನು ಹೊಂದಿಸಿ. ಅರೆ ಮೃದುವಾದ ಹಿಟ್ಟನ್ನು ತಯಾರಿಸಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ.
ರೆಫ್ರಿಜರೇಟರ್ನಲ್ಲಿ ಇರಿಸಿದ ಮಿಶ್ರಣವನ್ನು ಬೆರೆಸಿಕೊಳ್ಳಿ. ಇದನ್ನು ಸಣ್ಣ ಚೆಂಡುಗಳನ್ನಾಗಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಗುಲಾಬ್ ಜಾಮೂನ್‌ಗಳನ್ನು ಕಡಿಮೆ ಶಾಖದಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
Saakshatv cooking recipes Gulabjamun

ಗುಲಾಬ್ ಜಾಮೂನ್‌ಗಳನ್ನು ಹುರಿದ ನಂತರ, ಅವುಗಳನ್ನು ಬೆಚ್ಚಗಿನ ಸಕ್ಕರೆ ಪಾಕದಲ್ಲಿ ಬಿಡಿ. ಸಿರಪ್ ನಲ್ಲಿ 2-3 ಗಂಟೆಗಳ ಕಾಲ ಬಿಡಿ. ಈಗ ಸಕ್ಕರೆ ಪಾಕದ ಜೊತೆಗೆ ಬ್ರೆಡ್ ಗುಲಾಬ್ ಜಾಮೂನ್‌ಗಳನ್ನು ಸವಿಯಿರಿ.

3. ದಿಢೀರ್ ಸೆಟ್ ದೋಸೆ

ಬೇಕಾಗುವ ಸಾಮಗ್ರಿಗಳು

1 ಕಪ್ ರವೆ
1/2 ಕಪ್ ಅವಲಕ್ಕಿ
1/2 ಕಪ್ ಮೊಸರು
ಚಿಟಕಿ ಅಡುಗೆ ಸೋಡಾ
1.25 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ/ ತುಪ್ಪ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ನೀರಿನಲ್ಲಿ ತೊಳೆಯಿರಿ. ನಂತರ ಅದಕ್ಕೆ ರವೆ ಮತ್ತು ನೀರು ಸೇರಿಸಿ. ಅದಕ್ಕೆ ಮೊಸರು ಬೆರೆಸಿ.‌ ಹತ್ತು ನಿಮಿಷ ನೆನೆಯಲು ಬಿಡಿ
ಬಳಿಕ ಮಿಕ್ಸಿಯಲ್ಲಿ ನುಣ್ಣಗಾಗುವಂತೆ ಅರೆಯಿರಿ.
ಅದಕ್ಕೆ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ನೀರು ಸೇರಿಸಿ. ಉದ್ದಿನ ದೋಸೆ ಹಿಟ್ಟಿನ ಹದದಂತೆ ಇರಲಿ.
ಈಗ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಾವಲಿಗೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
ಮುಚ್ಚಳ ಮುಚ್ಚಿ ಬೇಯಿಸಿ.
Saakshatv cooking recipes set dosa
ಹತ್ತು ಸೆಕೆಂಡುಗಳ ನಂತರ ದೋಸೆಯ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಎರಡೂ ಬದಿಯೂ ಕಾಯಿಸಿ.
ದೋಸೆಯನ್ನು ತವೆಯಿಂದ ತೆಗೆದು, ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಸೇವಿಸಿ.

4. ಮಂಗಳೂರು ಬಿಸ್ಕೂಟ್ ಅಂಬಡೆ

ಬೇಕಾಗುವ ಸಾಮಗ್ರಿಗಳು:

1¼ ಕಪ್ ಸ್ವಚ್ಛಗೊಳಿಸಿದ ಉದ್ದಿನ ಬೇಳೆ

ನುಣ್ಣಗೆ ಕತ್ತರಿಸಿದ 2 – 3 ಹಸಿರು ಮೆಣಸಿನಕಾಯಿಗಳು
ಸಣ್ಣದಾಗಿ ಕತ್ತರಿಸಿದ 1 ಇಂಚಿನ ಶುಂಠಿ ತುಂಡು
ಕರಿಬೇವಿನ ಸೊಪ್ಪು ಸುಮಾರು 10 – 12 ಎಲೆಗಳು ಚಿಕ್ಕದಾಗಿ ಕತ್ತರಿಸಿ ಇಟ್ಟು ಕೊಳ್ಳಿ. Mangalore biscuit ambade recipes

1/2 ಟೀಸ್ಪೂನ್ ತಾಜಾ ಕರಿಮೆಣಸು ಹುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಟೀಸ್ಪೂನ್ ತುರಿದ ಕೊಬ್ಬರಿ
ಹುರಿಯಲು ಸಾಕಷ್ಟು ಎಣ್ಣೆ

ಮಾಡುವ ವಿಧಾನ :

ಸ್ವಚ್ಛಗೊಳಿಸಿದ ಉದ್ದಿನ ಬೇಳೆಯನ್ನು ಕನಿಷ್ಠ 2 – 3 ಗಂಟೆಗಳ ಕಾಲ ನೆನೆಸಿ, ನಂತರ ನೀರನ್ನು ಬಸಿಯಿರಿ.

ಬ್ಲೆಂಡರ್ ಅಥವಾ ಗ್ರೈಂಡರ್ನಲ್ಲಿ, ಉದ್ದಿನ ಬೇಳೆಯನ್ನು ಉಪ್ಪಿನೊಂದಿಗೆ ಹೆಚ್ಚು ನೀರು ಸೇರಿಸದೆ ಚೆನ್ನಾಗಿ ರುಬ್ಬಿ.
ನಂತರ ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕರಿಮೆಣಸು ಹುಡಿ ಮತ್ತು ಕೊಬ್ಬರಿ ತುರಿ ಉದ್ದಿನ ಬೇಳೆ ಹಿಟ್ಟಿಗೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು 30 ನಿಮಿಷಗಳ ಕಾಲ ಹಾಗೆ ಬಿಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ . (ಹಿಟ್ಟಿಗೆ ನೀರು ಹೆಚ್ಚಾದರೆ ಅಕ್ಕಿ ಹುಡಿ ಸೇರಿಸಿಕೊಳ್ಳಬಹುದು) ಈಗ ದೊಡ್ಡ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
Saakshatv cooking recipes biscuit ambade

ಆಳವಾದ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.‌ ನಂತರ ಹಿಟ್ಟಿನ ಉಂಡೆಗಳನ್ನು ಎಣ್ಣೆಯಲ್ಲಿ ಹುರಿಯಿರಿ. ಎರಡೂ ಬದಿಯೂ ಹೊಂಬಣ್ಣಕ್ಕೆ ಬರುವವರೆಗೆ ಗರಿಗರಿಯಾಗುವವರೆಗೆ ಹುರಿದು ತೆಗೆಯಿರಿ. ಮಂಗಳೂರು ಬಿಸ್ಕೂಟ್ ಅಂಬಡೆ ರೆಡಿಯಾಗಿದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ

5. ಬಾಳೆ ಹಣ್ಣಿನ ಮಿಲ್ಕ್ ಶೇಕ್ ಮಾಡುವ 3 ವಿಧಾನಗಳು – ಸಿಂಪಲ್ ಅಂಡ್ ಟೇಸ್ಟಿ..! ರಿಫ್ರೆಶ್ಶಿಂಗ್..!

ಕೆಲವೊಮ್ಮೆ ತುಂಬ ಸುಸ್ತಾಗಿ ಮನೆಗೆ ಬಂದು ಕೂತಿರುತ್ತೇವೆ. ಒಂದ್ ಕಡೆ ಹೊಟ್ಟೆ ಹಸಿವು ಇರುತ್ತೆ. ಮತ್ತೊಂದ್ ಕಡೆ ಏನಾದ್ರೂ ಟೇಸ್ಟಿ ಮತ್ತೆ ರಿಫ್ರೆಶಿಂಗ್ ಡ್ರಿಂಕ್ಸ್ ಕುಡಿಬೇಕು ಅಂತ ಅನ್ಸುತ್ತೆ. ಆಗ ನೀವು ನಿಮ್ಮ ಮನೆಯಲ್ಲಿ ಸಿಗುವ ಕೆಲವೇ ಕೆಲವೇ ಪದಾರ್ಥಗಳಿಂದ ಸುಲಭವಾಗಿ ಈ ಬಾಳೆಹಣ್ಣಿನ ಮಿಲ್ಕ್ ಸೇಕ್ ಗಳನ್ನ ಮಾಡಿ ಕುಡಿಯಬಹುದು. ಬಾಳೆಹಣ್ಣು ಟೇಸ್ಟ್, ರಿಫ್ರೆಶ್ ಮೆಂಟ್ ಜೊತೆಗೆ ಹಸಿವನ್ನೂ ಇನ್ಸ್ ಟೆಂಟ್ ಆಗಿ ತಡೆಯುತ್ತೆ.
ಮೊದಲನೇ ವಿಧಾನಕ್ಕೆ ಬೇಕಾದ ಪದಾರ್ಥಗಳು
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್ ( ನಿಮ್ಮ ರುಚಿಗೆ ತಕ್ಕಷ್ಟು)
ಮಾಡುವ ವಿದಾನ – ಮೊದಲಿಗೆ ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ 1 ರೌಂಡ್ ಹಾಗೇ ರಫ್ ಆಗಿ ಗ್ರೈಂಡ್ ಮಾಡಿ. ನಂತರ ಮತ್ತೆ ಒಂದು 10 ಸೆಕೆಂಡ್ಸ್ ರುಬ್ಬಿ. ಬಾಳೆ ಹಣ್ಣು ಬೇಗ ನುಣ್ಣಗಾಗುವುದ್ರಿಂದ ಅದು ಬೇಗ ಲೋಳೆಯಂತಾಗುವ ಚಾನ್ಸ್ ಸ್ ತುಂಬಾನೆ ಇರುತ್ತೆ ಹೀಗಾಗಿ ನೋಡಿಕೊಂಡು ರುಬ್ಬಬೇಕು. ಇದಾದ ಬಳಿಕ ಹಾಲು ತೆಗೆದುಕೊಂಡಿದ್ದ ಕಪ್ ನಲ್ಲಿ 2 ಕಪ್ ನೀರು ಹಾಕಿ ಮತ್ತೊಮ್ಮೆ 10 ಸೆಕೆಂಡ್ ಗ್ರೈಂಡ್ ಮಾಡಿ ಟೆಕ್ಚರ್ ಸ್ಮೂತಿ ರೀತಿಯಲ್ಲಿ ಇರುತ್ತೆ. ಈಗ ಒಂದು ಗ್ಲಾಸ್ ಗೆ ಹಾಕಿ ನಿಮಗೆ ಬೇಕಿದ್ರೆ, ಅದರ ಜೊತೆಗೆ ಐಸ್ ಕ್ಯೂಬ್ಸ್ ಹಾಕಿ ಕುಡಿಯಬಹುದು.

2ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ಏಲಕ್ಕಿ – 2-3 ಏಲಕ್ಕಿ
ಕಾಮ ಕಸ್ತೂರಿ ಬೀಜ / ತಂಪಿನ ಬೀಜ
ಪೆಪ್ಪರ್ ಪೌಡರ್.

ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ ಒಂದು ಸುತ್ತು ರುಬ್ಬಿ. ನಂತರ ಏಲಕ್ಕೆ ಚಚ್ಚಿ ಪುಡಿ ಹಾಕಿ, ನಂತರ ಹಾಲು ಹಾಕಿದ ಕಪ್ ನಲ್ಲಿ 2.30 ಇಂದ 3 ಕಪ್ ನೀರನ್ನ ಹಾಕಿ ಗ್ರೈಂಡ್ ಮಾಡಿ 10 -15 ಸೆಕೆಂಡ್ ಗಳ ವರೆಗೆ. ಬಳಿಕ ನೆನೆಯಿಟ್ಟ ಕಾಮಕಸ್ತೂರಿ ಬೀಜವನ್ನ 1 ಚಿಕ್ಕ ಚಮಚ ಒಂದು ಗ್ಲಾಸ್ ಗೆ ಹಾಗಿ ಅದಕ್ಕೆ ಜ್ಯೂಸ್ ನ ಮಿಶ್ರಣ ಹಾಕಿ. ಐಸ್ ಕ್ಯೂಬ್ಸ್ ಇಷ್ಟ ಇದ್ರೆ ಹಾಕಿಕೊಳ್ಳಬಹುದು. ನಂತರ ಇದಕ್ಕೆ ಪೆಪ್ಪರ್ ಪೌಡರ್ ಹಾಕಿ ಸವೆಯಿರಿ. ಇದೇನಪ್ಪ ವಿಚಿತ್ರ ಪೆಪ್ಪರ್ ಪೌಡರ್ ಆ ಅಂತ ಯೋಚನೆ ಮಾಡ್ಬೇಡಿ ಒಂದ್ ಸಲ ಟ್ರೈ ಮಾಡಿ ನೀವೇ ಡೆಫಿನೇಟ್ಲಿ ಇಷ್ಟ ಪಡ್ತೀರ.
3ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ವೆನ್ನಿಲ್ಲಾ ಎಸೆನ್ಸ್

ಮೊದಲೆರೆಡು ವಿದಾನಗಳಂತೆಯೇ ಬಾಳೆಹಣು, ಸಕ್ಕರೆ, ಹಾಲು ಹಾಕಿ ಒಂದು ರೌಂಡ್ ಗ್ರೈಂಡ್ ಮಾಡಿ. ಬಳಿಕ ಇದಕ್ಕೆ 2 ಕಪ್ ಗಳಷ್ಟು ನೀರನ್ನ ಹಾಕಿ 2 ಡ್ರಾಪ್ ವೆನಿಲ್ಲಾ ಎಸೆನ್ಸ್ ಹಾಕಿ. ಈ ಹೌಂತದಲ್ಲಿ ಐಸ್ ಕ್ಯೂಬ್ಸ್ ನ ಬೇಕಿದ್ರೆ ಇದರ ಜೊತೆಗೆ ಹಾಕಿ ಗ್ರೈಂಡ್ ಮಾಡಬಹುದು. ಇದು ಆಪ್ಶನಲ್. ಗ್ರೈಂಡ್ ಮಾಡಿದ ನಂತರ ಬಾಳೆಹಣ್ಣಿನ ಜ್ಯೂಸ್ ಅನ್ನ ಗ್ಲಾಸ್ ಗೆ ಹಾಕಿ ಸವಿಯಿರಿ ಎಂಜಾಯ್ ಮಾಡಿ.
ತಪ್ಪದೇ ಈ 3 ವಿದಾನದಲ್ಲಿ ಬಾಳೆಹಣ್ಣಿನ ಜ್ಯೂಸ್ ಮನೆಯಲ್ಲೇ ಟ್ರೈ ಮಾಡಿ. ನಿಮಗೆ 100 % ಇಷ್ಟ ಆಗುತ್ತೆ.

Tags: #saakshatvcookingFoodfood recipies
ShareTweetSendShare
Join us on:

Related Posts

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ

by Shwetha
June 24, 2026
0

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಎಡವಟ್ಟು; ಮಹಾಲೇಖಪಾಲರ ಕಚೇರಿಯಿಂದ ಸ್ಪಷ್ಟನೆ ಕೋರಿದ ಸರ್ಕಾರ

by Shwetha
June 24, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಈ ಕುರಿತು ಮಹಾಲೇಖಪಾಲರ ಕಚೇರಿ (CAG) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಸ್ಪಷ್ಟನೆ...

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

ಈಶ್ವರಪ್ಪಗೆ ಮಾನಸಿಕ ಸ್ಥಿಮಿತ ತಪ್ಪಿದೆ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ: ಭ್ರಷ್ಟಾಚಾರದ ಇತಿಹಾಸ ಇಟ್ಟುಕೊಂಡು ಬೇರೆಯವರನ್ನು ಟೀಕಿಸಬೇಡಿ – ಶಿವರಾಮ್ ಹೆಬ್ಬಾರ್ ಆಕ್ರೋಶ

by Shwetha
June 24, 2026
0

ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣವಾಗಿ ರಾಜಕೀಯ ದಿವಾಳಿತನಕ್ಕೆ ತಲುಪಿದ್ದಾರೆ ಎಂದು ಶಾಸಕ ಶಿವರಾಮ್ ಹೆಬ್ಬಾರ್...

ಡಿಕೆಶಿ ತಂತ್ರಕ್ಕೆ ಬಿಜೆಪಿ ತತ್ತರ: ಕೈ ಅಭ್ಯರ್ಥಿ ಗೆಲುವಿನ ಹಿಂದೆ ಅಡಗಿದೆಯೇ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ; ವಿಜಯೇಂದ್ರ ಮತ್ತು ಅಶೋಕ ನಾಯಕತ್ವಕ್ಕೆ ಎದುರಾಯ್ತು ಗಂಡಾಂತರ!

ಅಡ್ಡಮತದಾನ ವಿಚಾರ; ಧರ್ಮಸ್ಥಳದಲ್ಲಿ ಸಭೆ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ: ಆರ್. ಅಶೋಕ್

by Shwetha
June 24, 2026
0

ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದ ವಿಚಾರವಾಗಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ...

CM ಪಟ್ಟದ ಫೈಟ್ : 3 ವರ್ಷದ ಅಭಿವೃದ್ಧಿ ಮಂತ್ರ ಪಠಿಸಿದ ಮುಖ್ಯಮಂತ್ರಿ

ರಾಜೀನಾಮೆಯ ಬಳಿಕ ವಿಶ್ರಾಂತಿಗೆ ಮಾಜಿ ಸಿಎಂ ಸಿದ್ದರಾಮಯ್ಯ; ಕೇರಳದ ರೆಸಾರ್ಟ್‌ಗೆ ಭೇಟಿ

by Shwetha
June 24, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಆಪ್ತರೊಂದಿಗೆ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram