ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಸಿಂಪಲ್ , ವೆರೈಟಿ ಅಡುಗೆ ರೆಸಿಪಿಗಳು – ಒಮ್ಮೆ ಇವನ್ನ ಟ್ರೈ ಮಾಡಿ

Namratha Rao by Namratha Rao
November 11, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

ಸಿಂಪಲ್ , ವೆರೈಟಿ ಅಡುಗೆ ರೆಸಿಪಿಗಳು – ಒಮ್ಮೆ ಇವನ್ನ ಟ್ರೈ ಮಾಡಿ

ತರಕಾರಿ ಅಕ್ಕಿ ಮಸಾಲೆ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು

ಅಕ್ಕಿ ಹಿಟ್ಟು – 2 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ತುರಿದ/ಸಣ್ಣಗೆ ಕತ್ತರಿಸಿದ ತರಕಾರಿಗಳು (ಕ್ಯಾರೆಟ್, ಅಲೂಗಡ್ಡೆ , ಸೌತೆಕಾಯಿ, ಬೀನ್ಸ್) – 1 ಕಪ್
ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ – 2
ಶುಂಠಿ ಪೇಸ್ಟ್ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಸಬ್ಸಸಿಗೆ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು – 2 ಟೀಸ್ಪೂನ್
ಜೀರಿಗೆ – 1 ಚಮಚ
ಕಿಚನ್ ಕಿಂಗ್ ಪೌಡರ್ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು

Related posts

r-ashoka-disabled-persons-honorarium-release-demand-karnataka

ವಿಕಲಚೇತನರ ಗೌರವಧನ ತಡೆ ಅಮಾನವೀಯ ಎಂದ ಪ್ರತಿಪಕ್ಷದ ನಾಯಕ ಅಶೋಕ್ ಆಕ್ರೋಶ

October 8, 2026
ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ರಸ್ತೆಯಲ್ಲಿ ಕೂಗಿದರೆ ಚುನಾವಣಾ ಆಯೋಗದ ಅಧ್ಯಕ್ಷರನ್ನು ತೆಗೆದುಹಾಕಲು ಆಗುವುದಿಲ್ಲ, ಸರಿಯಾದ ಪ್ರಕ್ರಿಯೆ ಅನುಸರಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

October 8, 2026

Saakshatv cooking recipe masala akki rotti

ಮಾಡುವ ವಿಧಾನ

ಮೊದಲಿಗೆ ‌ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಈರುಳ್ಳಿ, ತರಕಾರಿಗಳು, ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಸಬ್ಸಸಿಗೆ ಸೊಪ್ಪು , ಮೆಂತ್ಯ ಸೊಪ್ಪು, ಜೀರಿಗೆ, ಕಿಚನ್ ಕಿಂಗ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ.
ನಂತರ ಈ ಮಿಶ್ರಣಕ್ಕೆ ಉಗುರು ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ, ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ನಂತರ 15 ನಿಮಿಷ ಹಾಗೆಯೇ ಬಿಡಿ.
ಬಳಿಕ ತವಾ ವನ್ನು ಬಿಸಿ ಮಾಡಿ. ತೆಳುವಾಗಿ ರೊಟ್ಟಿ ತಟ್ಟಿ, ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ಬರುವವರೆಗೆ ಕಾಯಿಸಿ ತೆಗೆಯಿರಿ. ‌ರುಚಿಯಾದ ತರಕಾರಿ ಅಕ್ಕಿ ಮಸಾಲೆ ರೊಟ್ಟಿ ಸವಿಯಲು ಸಿದ್ಧ.

ಧಿಡೀರ್ (instant) ಟೊಮೆಟೊ ದೋಸೆ

ಬೇಕಾಗುವ ಪದಾರ್ಥಗಳು

1 ಕಪ್ ಅಕ್ಕಿ
1 ಟೀಸ್ಪೂನ್ ಉದ್ದಿನ ಬೇಳೆ
3 ಟೊಮೆಟೊ
1/2 ಕ್ಯಾರೆಟ್
3 ಒಣಗಿದ ಕೆಂಪು ಮೆಣಸು
8 ಕರಿಬೇವಿನ ಎಲೆಗಳು
1/2 ಇಂಚು ಶುಂಠಿ
3 ಟೀಸ್ಪೂನ್ ತೆಂಗಿನಕಾಯಿ ತುರಿ
ರುಚಿಗೆ ತಕ್ಕಷ್ಟು ಉಪ್ಪು
1/4 ಚಮಚ ಜೀರಿಗೆ
2 ಟೀಸ್ಪೂನ್ ಅಡುಗೆ ಎಣ್ಣೆ

Saakshatv cooking recipe how to prepare tomato dose

ಮಾಡುವ ವಿಧಾನ

ಮೊದಲು ಅಕ್ಕಿ ಮತ್ತು ಬೇಳೆಯನ್ನು ತೊಳೆದು ‌3 ಗಂಟೆಗಳ ಕಾಲ ನೆನೆಸಿಡಿ. ನಂತರ ಎಲ್ಲಾ ತರಕಾರಿಗಳನ್ನು ಕತ್ತರಿಸಿ ( ಒಣಗಿದ ಕೆಂಪು ಮೆಣಸಿನಕಾಯಿ ಇಲ್ಲದಿದ್ದರೆ 1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ ಬಳಸಿ)

ಮೊದಲು ಎಲ್ಲಾ ತರಕಾರಿಗಳು ಮತ್ತು ತೆಂಗಿನಕಾಯಿ ತುರಿಯನ್ನು ನೀರು ಸೇರಿಸದೆ ರುಬ್ಬಿ.

ಇದಕ್ಕೆ ಅಕ್ಕಿ, ಬೇಳೆ ಮತ್ತು ಸ್ವಲ್ಪ ನೀರು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿ.

ನಂತರ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಉಪ್ಪು ಮತ್ತು ಜೀರಿಗೆ ಸೇರಿಸಿ. 30 ನಿಮಿಷಗಳ ಕಾಲ ಹಿಟ್ಟನ್ನು ಹಾಗೆಯೇ ‌ಇಡಿ.

ಬಳಿಕ ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ಹಾಕಿ ವೃತ್ತಾಕಾರವಾಗಿ ಹರಡಿ. ಮಧ್ಯಮ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ.

ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆಯನ್ನು ಚಿಮುಕಿಸಿ. ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ ತೆಗೆಯಿರಿ. ‌

ತೆಂಗಿನಕಾಯಿ ಚಟ್ನಿ ಅಥವಾ ಪುದೀನ ಚಟ್ನಿಯೊಂದಿಗೆ ಬಿಸಿಯಾದ ದೋಸೆಯನ್ನು ಸವಿಯಿರಿ.

ಸುಲಭವಾಗಿ ತಯಾರಿಸಿ ಕೇರಳ ಸ್ಟೈಲ್ ಚಿಕನ್ ಫ್ರೈ

ಬೇಕಾಗುವ ಸಾಮಾಗ್ರಿಗಳು

ಚಿಕನ್ – 1/2 kg

ಜೀರಿಗೆ ಪುಡಿ 2 ಟೀಸ್ಪೂನ್

ಕೆಂಪು ಮೆಣಸು – 5 ರಿಂದ 6

ಬೆಳ್ಳುಳ್ಳಿ 5 ರಿಂದ 6 ಎಸಳುಗಳು

ಕರಿಬೇವು – ಸ್ವಲ್ಪ

ರುಚಿಗೆ ತಕ್ಕಷ್ಟು ಉಪ್ಪು

ಹುರಿಯಲು ತೆಂಗಿನ ಎಣ್ಣೆ
Saakshatv cooking recipe chicken fry

ಮಾಡುವ ವಿಧಾನ

ಮೊದಲಿಗೆ ಕೆಂಪು ಮೆಣಸನ್ನು ನೀರಿನಲ್ಲಿ ನೆನೆಸಿ. ನಂತರ ಕೆಂಪು ಮೆಣಸನ್ನು ನೀರಿನಿಂದ ತೆಗೆದು ಜೀರಿಗೆ ಪುಡಿ, ಬೆಳ್ಳುಳ್ಳಿ ಉಪ್ಪು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ.
ಚಿಕ್ಕದಾಗಿ ಕತ್ತರಿಸಿದ ಚಿಕನ್ ತುಂಡುಗಳನ್ನು ಈ ಪೇಸ್ಟ್ ನಲ್ಲಿ ನೆನೆಸಿ ಮತ್ತು ಅದನ್ನು ಒಂದು ಗಂಟೆ ನೆನೆಸಿಡಿ.
Saakshatv cooking recipe chicken fry

ನಂತರ ಕಡಾಯಿಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಮಸಾಲೆಯೊಂದಿಗೆ ಚೆನ್ನಾಗಿ ಬೆರೆತ ಕೋಳಿ ಮಾಂಸವನ್ನು ಎಣ್ಣೆಯಲ್ಲಿ ಬಿಡಿ. ಅದನ್ನು ಎಣ್ಣೆಯಲ್ಲಿ 10 ನಿಮಿಷಗಳ ಕಾಲ ಹೊಂಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ ತೆಗೆಯಿರಿ.
ಈಗ ರುಚಿಯಾದ ಕೇರಳ ಚಿಕನ್ ಫ್ರೈ ಸವಿಯಲು ರೆಡಿಯಾಗಿದೆ.

ನೀವು ಅದನ್ನು ತೆಂಗಿನ ಎಣ್ಣೆಯಲ್ಲಿ ಹುರಿಯುವಾಗ ಇದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಸೇರಿಸಿ. ರೆಡಿಮೇಡ್ ಚಿಕನ್ ಫ್ರೈ ಮಸಾಲಾಗೆ ಹೋಲಿಸಿದರೆ ಇದು ತುಂಬಾ ರುಚಿಕರವಾಗಿರುತ್ತದೆ. ಕೋಳಿ ಮಾಂಸವು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಸ್ನಾಯುಗಳ ಬೆಳವಣಿಗೆಗೆ ಈ ಪ್ರೋಟೀನ್‌ಗಳು ಅತ್ಯಗತ್ಯ.

ಹಲಸಿನ ಹಣ್ಣಿನ ಮುಳಕ

ಬೇಕಾಗುವ ಸಾಮಗ್ರಿಗಳು

ಹಲಸಿನ ಹಣ್ಣಿನ ತೊಳೆ – 1/2 ಕಪ್
ಬೆಲ್ಲದ ಪುಡಿ – 6 ಚಮಚ
ಅಕ್ಕಿ ಹುಡಿ – 4 ಚಮಚ
ಮೈದಾ ಹುಡಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನSaakshatv cooking recipe jackfruit muluka

ಮೊದಲಿಗೆ ಹಲಸಿನ ಹಣ್ಣಿನ ತೊಳೆಯನ್ನು ತರಿ ತರಿಯಾಗಿ ರುಬ್ಬಿ. ನಂತರ ಇದಕ್ಕೆ ಅಕ್ಕಿ ಹುಡಿ, ಮೈದಾ ಹುಡಿ, ಉಪ್ಪು, ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ‌ಇದನ್ನು ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದು ಎಣ್ಣೆಯಲ್ಲಿ ಬಿಡಿ. (ಇದನ್ನು ಉಂಡೆ ಮಾಡುವ ಅಗತ್ಯ ಇಲ್ಲ) ಕೆಂಪಗಾಗುವವರೆಗೆ ಹುರಿದು ತೆಗೆಯಿರಿ. ಬಿಸಿ ಬಿಸಿ ಹಲಸಿನ ಹಣ್ಣಿನ ಮುಳಕ ಸವಿಯಲು ‌ಸಿದ್ಧ.

ಆಪಲ್( ಸೇಬು) ಜಿಲೇಬಿ

ಬೇಕಾಗುವ ಸಾಮಗ್ರಿಗಳು
ಆಪಲ್ 1
ಉದ್ದಿನ ಬೇಳೆ 1/2 ಕಪ್
ಹುಳಿ ಮೊಸರು 2 ಟೇಬಲ್ ಸ್ಪೂನ್
ಅಡಿಗೆ ಸೋಡಾ 1 ಪಿಂಚ್
ಸಕ್ಕರೆ 1 ಕಪ್
ನೀರು 3/4 ಕಪ್
ಕೇಸರಿ – 3-4 ಎಳೆಗಳು
ಹುರಿಯಲು‌ ಎಣ್ಣೆ
Saakshatv cooking recipe apple jelebi

ಮಾಡುವ ವಿಧಾನ
ಉದ್ದಿನ ಬೇಳೆ 2 ಗಂಟೆ ನೆನೆಸಿ. ನಂತರ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ. ಅದಕ್ಕೆ ಹುಳಿ ಮೊಸರು ಮತ್ತು ಅಡಿಗೆ ಸೋಡ ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಕಲಸಿ.
ನಂತರ ಸೇಬನ್ನು ‌ವೃತ್ತಾಕಾರವಾಗಿ ತೆಳುವಾಗಿ ಕತ್ತರಿಸಿ. ಸೇಬಿನ ಮಧ್ಯದಿಂದ ಬೀಜವನ್ನು ತೆಗೆಯಿರಿ.

ಸಕ್ಕರೆ ಪಾಕ
ಪ್ಯಾನ್ ತೆಗೆದುಕೊಳ್ಳಿ ಸಕ್ಕರೆ ಮತ್ತು ನೀರು ಸೇರಿಸಿ. ಕುದಿಯಲು ಬಿಡಿ. ನಂತರ ಕೇಸರಿ ಎಳೆಗಳನ್ನು ಸೇರಿಸಿ. ಚೆನ್ನಾಗಿ ಕುದಿ ಬರಿಸಿ.‌ ನಿಂಬೆ ರಸವನ್ನು ಹಿಂಡಿ. ಚೆನ್ನಾಗಿ ಮಿಶ್ರ ಮಾಡಿ.
Saakshatv cooking recipe apple jelebi

ಬಳಿಕ ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ ಎಣ್ಣೆ ಬಿಸಿ ಮಾಡಿ. ವೃತ್ತಾಕಾರವಾಗಿ ಕತ್ತರಿಸಿದ ಸೇಬಿನ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಗರಿಗರಿಯಾಗುವ ತನಕ ಡೀಪ್ ಫ್ರೈ ಮಾಡಿ. ನಂತರ ಎಣ್ಣೆಯಿಂದ ತೆಗೆದು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ. ಬಡಿಸುವ ಮೊದಲು ಹೆಚ್ಚು ಸಕ್ಕರೆ ಪಾಕವನ್ನು ಸೇರಿಸಿ. ಸಿಹಿಯಾದ ಅಪಲ್ ಜಿಲೇಬಿ‌ ಸವಿಯಲು ಸಿದ್ಧ.

Tags: #saakshatvcookingFoodindia
ShareTweetSendShare
Join us on:

Related Posts

r-ashoka-disabled-persons-honorarium-release-demand-karnataka

ವಿಕಲಚೇತನರ ಗೌರವಧನ ತಡೆ ಅಮಾನವೀಯ ಎಂದ ಪ್ರತಿಪಕ್ಷದ ನಾಯಕ ಅಶೋಕ್ ಆಕ್ರೋಶ

by admin
October 8, 2026
0

ತಕ್ಷಣ ಗೌರವಧನ ಬಿಡುಗಡೆಗೆ ಆಗ್ರಹ; ಆಂಧ್ರ ಮಾದರಿಯಲ್ಲಿ 5 ಸಾವಿರಕ್ಕೆ ಹೆಚ್ಚಿಸಿ ಎಂದು ಒತ್ತಾಯ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಸೇವಾ ಭದ್ರತೆಗೆ ಆಗ್ರಹಿಸಿ ಅಶೋಕ...

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ರಸ್ತೆಯಲ್ಲಿ ಕೂಗಿದರೆ ಚುನಾವಣಾ ಆಯೋಗದ ಅಧ್ಯಕ್ಷರನ್ನು ತೆಗೆದುಹಾಕಲು ಆಗುವುದಿಲ್ಲ, ಸರಿಯಾದ ಪ್ರಕ್ರಿಯೆ ಅನುಸರಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 8, 2026
0

ಚಿತ್ರದುರ್ಗ, ಚುನಾವಣಾ ಆಯೋಗದ ಅಧ್ಯಕ್ಷರನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಸುದೀರ್ಘವಾಗಿ ಚರ್ಚೆಯಾಗಿ ಬಹುಮತ ಸಾಬೀತಾಗಿ ರಾಷ್ಟ್ರಪತಿಯ ಬಳಿಗೆ ಹೋಗಬೇಕಾಗುತ್ತದೆ. ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ನಾನು ರಸ್ತೆಯಲ್ಲಿ ಕೂಗಿದ...

parks-land-use-bill-withdrawn-bjp-victory-r-ashoka-seven-day-assembly

‘ಹನಿ ಟ್ರ್ಯಾಪ್’ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಸತ್ಯವನ್ನು ಬಹಿರಂಗಪಡಿಸಿ: ಆರ್. ಅಶೋಕ್

by admin
October 8, 2026
0

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮೇಲೆಯೇ ಹಾಗೂ ತಮ್ಮ ಸಂಪುಟದ ಐದಾರು ಸಚಿವರ ಮೇಲೆ ‘ಹನಿ ಟ್ರ್ಯಾಪ್’ ಪ್ರಯತ್ನ ನಡೆದಿದೆ ಎಂದು ಹೇಳುತ್ತಿದ್ದಾರೆ....

samudra-manthana-skanda-ashok-police-officer-kannada-movie

ಸಮುದ್ರ ಮಂಥನ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾದ ನಟ ಸ್ಕಂದ ಅಶೋಕ್

by admin
October 8, 2026
0

  ಯಶ್ವಂತ್ ಕುಮಾರ್ ಮತ್ತು ಮಂದಾರ ಬತ್ತಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸಮುದ್ರ ಮಂಥನ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸ್ಕಂದ...

bhavanthara-tanvi-rao-lakshmi-baramma-sandalwood-debut

ಸ್ಯಾಂಡಲ್‌ವುಡ್ ನಾಯಕಿಯಾಗಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್: ‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ

by admin
October 8, 2026
0

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮ' ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ 'ರಾಧೇಶ್ಯಾಮ'...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram