ಪ್ರೇಯಸಿಯ ನಗ್ನ ಫೋಟೋ ಸ್ಟೇಟಸ್ ಗೆ ಹಾಕಿ ವಿಕೃತಿ ಮೆರೆದ ಸೈಕೋ..!
ಹುಬ್ಬಳ್ಳಿ : ವಿಕೃತ ಮನಸ್ಕನೊಬ್ಬ ತಾನು ಪ್ರೀತಿ ಮಾಡ್ತಿದ್ದ ಯುವತಿಯನ್ನ ಪುಸಲಾಯಿಸಿ ನಗ್ನ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದಾನೆ.. ಆತನ ಮಾತು ನಂಬಿದ್ದ ಯುವತಿಯೂ ಕೂಡ ನಗ್ನ ವಿಡಿಯೋ ಕಾಲ್ ಮಾಡಿದ್ದಾಳೆ.. ನಂತರ ಆಕೆಯ ನಗ್ನ ಫೋಟೋ ಎಡಿಟ್ ಮಾಡಿ ಅದನ್ನ ಸ್ಟೇಟಸ್ ಗೆ ಹಾಕಿ ವಿಕೃತಿ ಮೆರೆದಿದ್ದಾನೆ.. ಇಂತಹ ಘಟನೆ ಹುಬ್ಬಿಳ್ಳಿಯಲ್ಲಿ ನಡೆದಿದೆ..
ಮಹಾರಾಷ್ಟ್ರದ ಶಿರಡಿ ಮೂಲದ ಈತ ಈ ರೀತಿ ವಿಕೃತಿ ಮೆರೆದಿದ್ದಾನೆ. ವಾಟ್ಸಪ್ ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿರುವ ಈತನ ವಿರುದ್ಧ ಇದೀಗ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಈತ ಅದೇ ಕಾಲೇಜಿನ ಕಿರಿಯ ವಿದ್ಯಾರ್ಥಿನಿಯ ಜೊತೆಗೆ ಪರಿಚಯ ಬೆಳೆಸಿ, ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸಪ್ ನಂಬರ್ ಪಡೆದಿದ್ದ. ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ವೀಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ. ನವೆಂಬರ್11 ರಂದು ಆಕೆಯ ನಗ್ನ ಫೋಟೋ ಎಡಿಟ್ ಮಾಡಿ ಸ್ಟೇಟಸ್‍ಗೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಆದ್ರೆ ಅಷ್ಟಕ್ಕೂ ಈ ಸೈಕೋ ಪ್ರೇಮಿ ಈ ರೀತಿ ಮಾಡಿದ್ದು ಯಾಕೆ ಅನ್ನೋದು ಮಾತ್ರ ಗೊತ್ತಾಗಿಲ್ಲ.. ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಾಯಿದ್ಧಾರೆ..








