ಚುನಾವಣೆ : ಯುಪಿಯಲ್ಲಿ ಅಮೆರಿಕಾದಂತಹ ರಸ್ತೆ ನಿರ್ಮಾಣವಾಗುತ್ತೆ : ನಿತಿನ್ ಗಡ್ಕರಿ
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಆಡಳಿತ ಪಕ್ಷ ಬಿಜೆಪಿ , ಕಾಂಗ್ರೆಸ್ ಇತರೇ ಪಾರ್ಟಿಗಳು ಭರ್ಜರಿ ಪ್ರಚಾರ ಶುರು ಮಾಡಿಕೊಂಡಿವೆ.. ಭರಸವಸೆಗಳ ಸುರಿಮಳೆ ಗೈಯುತ್ತಾ , ಬಿಜೆಪಿ ಜನರಿಗೆ ಒಳ್ಳೋಳ್ಳೆ ಯೋಜನೆಗಳನ್ನ ನೀಡುತ್ತಾ ಮತದಾರರ ಸೆಳೆಯುವ ಪ್ರಯತ್ನ ಮಾಡ್ತಿದೆ.. ಇದೀಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಇಲ್ಲಿನ ರಸ್ತೆ ನಿರ್ಮಾಣ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ.. ಯುಪಿಯಲ್ಲಿ ಅಮೆರಿಕಾದಂತಹಹ ರಸ್ತೆಗಳು ನಿರ್ಮಾಣವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ..
ಜಗದೀಶ್‌ಪುರ, ಬಾಬುಗಂಜ್, ಉಂಚಹಾರ್, ಅಲ್ಲಾಪುರ್‌ನಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ನಿತಿನ್ ಗಡ್ಕರಿ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ, ಮುಂದಿನ ಐದು ವರ್ಷಗಳಲ್ಲಿ ಉತ್ತರ ಪ್ರದೇಶದ ರಸ್ತೆ ಯೋಜನೆಗಳಿಗಾಗಿ 5 ಲಕ್ಷ ಕೋಟಿ ರೂಪಾಯಿಗಳನ್ನ ಹೂಡಿಕೆ ಮಾಡಲಾಗುವುದು. ರಾಜ್ಯದ ರಸ್ತೆಗಳನ್ನು ಅಮೆರಿಕದ ರಸ್ತೆಗಳಷ್ಟು ಉತ್ತಮವಾಗಿ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಯೋಗಿ ಆದಿತ್ಯನಾಥ ಮತ್ತು ಕೇಶವ್ ಪ್ರಸಾದ್ ಮೌರ್ಯ ಅವರ ನೇತೃತ್ವದಲ್ಲಿ ಮುಂಬರುವ ಚುನಾವಣೆ ವೇಳೆ ಡಬಲ್ ಎಂಜಿನ್ ಸರ್ಕಾರಕ್ಕೆ ಮತ ನೀಡಿ. ಉತ್ತರ ಪ್ರದೇಶವನ್ನು ಅಮೆರಿಕದ ರಾಜ್ಯಗಳಂತೆ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದ್ದಾರೆ..








