ಗಣರಾಜ್ಯೋತ್ಸವದ ವೇಳೆ ವಿದ್ಯುತ್ ಅವಘಡ, ಓರ್ವ ಬಾಲಕ ಸಾವು
ಶಾಲೆಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಮಾಡುವಾಗ ಭಾವುಟದ ಕಂಬ ದಿಢೀರ್ ಆಗಿ ವಿದ್ಯುತ್ ತಂತಿ ಮೇಲೆ ಬಿದ್ದು ಓರ್ವ ಮಗು ಸಾವನ್ನಪ್ಪಿರುವ ಘಟನೆ . ಬಿಹಾರದ ಬಕ್ಸಾರ್ನ ಇಟಾರ್ಹಿ ಬ್ಲಾಕ್ನ ನಾಥ್ಪುರ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಓರ್ವ ಮಗು ಸಾವನ್ನಪ್ಪಿದ್ದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ತಕ್ಷಣ ಮೂವರು ಮಕ್ಕಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಮುಂದುವರೆದಿದ್ದು ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ.During the Republic Day, the death of a young boy by power accident
ಘಟನೆಯ ನಂತರ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ನಂತರ ಪೊಲಿಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದಿದ್ದಾರೆ.








