Cooking : ಫಿಟ್ ನೆಸ್ , ಉತ್ತಮ ಆರೋಗ್ಯಕ್ಕಾಗಿ ಕ್ಯಾರೋಟ್ ಜ್ಯೂಸ್..!!
ಬೇಕಾಗಿರುವ ಸಾಮಗ್ರಿಗಳು :
ಕ್ಯಾರೆಟ್ – 4-5
ಶುಂಠಿ – 1 ಇಂಚು
ನಿಂಬೆ ಹಣ್ಣು – 1
ಪೆಪ್ಪರ್ ಪೌಡರ್ ಸ್ವಲ್ಪ,
ಪುದೀನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :
ಮೊದಲು ಕ್ಯಾರೆಟ್ ಗಳನ್ನು ಚೆನ್ನಾಗಿ ತೊಳೆದುಕೊಂಡು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅದನ್ನು ಜ್ಯೂಸರ್ ನಲ್ಲಿ ಹಾಕಿ, ನೀರು, ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಸೇರಿಸಿ ಚೆನ್ನಾಗಿ ರುಬ್ಬಿ.
cooking recipies – carrot juice , fitness , health
ನಂತರ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೋಸಿ. ಇದಕ್ಕೆ ಪೆಪ್ಪರ್ ಪೌಡರ್, ಉಪ್ಪು ಅನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕುಡಿಯಲು ಆರೋಗ್ಯಕರವಾದ ಕ್ಯಾರೆಟ್ ಜ್ಯೂಸ್ ರೆಡಿ.








