IPL 2022 : ರಿಷಿ ಧವನ್ ಗಾಗಿ ಮುಗಿಬೀಳಲಿವೆ ಫ್ರಾಂಚೈಸಿಗಳು..
ಹಿಮಾಚಲ ಪ್ರದೇಶ ಇದೇ ಮೊದಲ ಬಾರಿಗೆ ವಿಜಯ್-ಹಜಾರೆ ಟ್ರೋಫಿ ಗೆದ್ದು ಸಂಚಲನ ಮೂಡಿಸಿದೆ. ಹಿಮಾಚಲ ಪ್ರದೇಶದ ಅದ್ಭುತ ಗೆಲುವಿನಲ್ಲಿ ತಂಡದ ನಾಯಕ ರಿಷಿ ಧವನ್ ಪ್ರಮುಖ ಪಾತ್ರ ವಹಿಸಿದ್ದರು.
ಈ ಟೂರ್ನಿಯಲ್ಲಿ ರಿಷಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಐದು ಪಂದ್ಯಗಳಲ್ಲಿ 16 ವಿಕೆಟ್ ಕಬಳಿಸಿದ್ದರು.
ಅದೇ ರೀತಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದ್ದರು. ಹಾಗೇ ವಿಜಯ್ ಹಜಾರೆಯಲ್ಲಿ 458 ರನ್ ಗಳಿಸಿ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು..
ಈ ಹಿನ್ನೆಲೆಯಲ್ಲಿ ಇಂದಿನ ಐಪಿಎಲ್ ಮೆಗಾ ಹರಾಜಿನಲ್ಲಿ ಅವರನ್ನು ಪಡೆಯಲು ಹಲವು ತಂಡಗಳು ಪೈಪೋಟಿ ನಡೆಸುವ ಸಾಧ್ಯತೆ ಇದೆ.
ಅದರಲ್ಲೂ ಮೂರು ತಂಡಗಳು ರಿಷಿಗಾಗಿ ಪೈಪೋಟಿಗೆ ಬೀಳಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹರಾಜಿನಲ್ಲಿ ಅವರಿಗೆ ಪೈಪೋಟಿ ನಡೆಸುವ ಸಾಧ್ಯತೆಯಿದೆ.









