ಅಭಿಮಾನಿಗಳನ್ನ ಹುಚ್ಚೆಬ್ಬಿಸಿದ ರಾಧೇಶ್ಯಾಮ್ ಎರಡನೇ ಟ್ರೇಲರ್…
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಟ್ರೆಲರ್ ನಲ್ಲಿ ಪ್ರಭಾಸ್ ಸಖತ್ ಸ್ಟೈಲಿಶ್ ಆಗಿ ಕಾಣಿಸಕೊಂಡಿದ್ದಾರೆ. ಮೊದಲು ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕ ಬಳಿಕ ಚಿತ್ರದ ನಿರ್ಮಾಪಕರು ಎರಡನೇ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ.
ನಾಯಕ ನಾಯಕಿ ಒಂದಾಗಲು ಇಲ್ಲಿ ಪ್ರಕೃತಿಯೇ ವಿಲನ್ ಆಗಿ ಕಾಣಿಸಿಕೊಂಡಿದೆ. ಟ್ರೇಲರ್ ನಲ್ಲಿ ಸುನಾಮಿ. ಹಡಗು ಮಳುಗುವಿಕೆ ದೃಶ್ಯಗಳು ಮೈ ನವಿರೇಳಿಸುವಂತಿವೆ. 1.04 ನಿಮಿಷಗಳ ಅಲ್ಪ ಅವಧಿಯ ಟ್ರೇಲರ್ ನಲ್ಲಿ ಹಲವು ಕುತೂಹಲಕಾರಿ ಸಂಗತಿಯನ್ನು ಈ ಟ್ರೇಲರ್ ಹೊತ್ತುತಂದಿದೆ.
ಪ್ರಕೃತಿಯ ಅಡೆ-ತಡೆ ನಡುವೆ ಚಿತ್ರದ ನಾಯಕ ಮತ್ತು ನಾಯಕಿ ಹೇಗೆ ಒಂದಾಗಲಿದ್ದಾರೆ ಅನ್ನೋದನ್ನು ಈ ಟ್ರೇಲರ್ನಲ್ಲಿ ಕೇಂದ್ರೀಕರಿಸಲಾಗಿದೆ. ಖಳನಟರ ರೌದ್ರಾವತಾರ ಬಹುತೇಕ ಕಡಿಮೆ ಎಂಬುದನ್ನೂ ಸಹ ಹೇಳಿಕೊಟ್ಟಂತಿದೆ.
ಚಿತ್ರದ ನಾಯಕ-ನಾಯಕಿ ಪ್ರೀತಿಸಿ ಒಂದಾಗುವಲ್ಲಿ ಎದುರಾಗುವ ಪ್ರಕೃತಿಯ ವಿಕೋಪ, ಭೂಕಂಪ ಮತ್ತು ಸುನಾಮಿ ಹಿನ್ನೆಲೆಯಲ್ಲಿ ಈ ಚಿತ್ರ ಮೂಡಿಬಂದಿದೆ. ರಾಧೆ ಶ್ಯಾಮ್ ಚಿತ್ರವು ಬರುವ ಮಾರ್ಚ್ 11 ರಂದು ಸೇರಿ ಹಲವು ಭಾಷೆಯಲ್ಲಿ ಬಿಡುಗಡೆಯಾಲಿದೆ. ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ನಿರ್ದೇಶನ ಮಾಡಿದ್ದು ಇದರಲ್ಲಿ ಪ್ರಭಾಸ್ ಹಸ್ತಸಾಮುದ್ರಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಂಶಿ ಮತ್ತು ಪ್ರಮೋದ್ ನಿರ್ಮಾಣ ಮಾಡಿದ್ದಾರೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಾಧೆ ಶ್ಯಾಮ್ ಬಿಡುಗಡೆಯಾಗಲಿದೆ.








