ಎಂಟು ತಿಂಗಳ ಮಗುವನ್ನ ಗೋಡೆಗೆ ಎಸೆದು ಕೊಂದ ಸೋದರ ಮಾವ….
ಎಂಟು ತಿಂಗಳ ಕಂದನನ್ನ ಸೋದರ ಮಾವನೇ ಗೋಡೆಗೆ ಎಸೆದು ಹತ್ಯೆ ಮಾಡಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ನಡೆದಿದೆ. ಇಲ್ಲಿನ ಕನಕಗಿರಿ ನಿವಾಸಿ ರಾಜು(33) ಎಂಬಾತ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ರಾಜುವಿನ ತಂಗಿ ರಮ್ಯಾ, ಬಾಣಂತನಕ್ಕಾಗಿ ಬಂದವಳು, ತವರು ಮನೆಯಲ್ಲೇ ಇದ್ದಳು ಇದ್ದಳು ತಾಯಿ ಇಲ್ಲದಾಗ, ಬಾಗಿಲ ಚಿಲಕ ಹಾಕಿಕೊಂಡು ತಂಗಿಯ ಬಳಿ ಗಲಾಟೆ ಮಾಡಿದ್ದ, ಆತನ ಗಲಾಟೆಗೆ ಹೆದರಿದ ತಂಗಿ ಎದುರು ಮನೆಗೆ ಓಡಿಹೋಗಿದ್ದಾಳೆ. ಹೋಗುವಾಗ ಆಕೆ ಮಗುವನ್ನ ಮನೆಯಲ್ಲೇ ಬಿಟ್ಟಿದ್ದಾಳೆ. ಆಕೆ ಹೊರೆಗೆ ಹೋಗುತ್ತಿದ್ದಂತೆ ಇತ್ತ ಮಗುವನ್ನ ಎತ್ತಿಕೊಂಡು ಗೋಡೆಗೆ ಬಿಸಾಡಿದ್ದಾನೆ ಮಗುವಿನ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಈತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು,ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








