RCB ಕಿಂಗ್ ಇಸ್ ಬ್ಯಾಕ್.. ಅರ್ಧಶತಕ ಸಿಡಿಸಿದ ವಿರಾಟ್
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.
ಬ್ರೆಬೋರ್ನ್ ಅಂಗಳದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊಹ್ಲಿ 45 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಅಜೇಯ 50 ರನ್ ಗಳಿಸಿ ಮುನ್ನುಗ್ಗುತ್ತಿದ್ದಾರೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ಫಾಫ್ ಡುಪ್ಲಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆದ್ರೆ ಆರ್ ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಫಾಫ್ ಶೂನ್ಯಕ್ಕೆ ಔಟ್ ಆದ್ರು.
Welcome back @imVkohli 👊🏽 #GTvRCB #IPL2022 pic.twitter.com/fJ44Zb1K3v
— Wasim Jaffer (@WasimJaffer14) April 30, 2022
ಈ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಜತ್ ಪಟಿದಾರ್ ಮತ್ತು ವಿರಾಟ್ ಕೊಹ್ಲಿ ಶತಕದ ಜೊತೆಯಾಟವಾಡಿದರು.
ಇತ್ತ ವಿರಾಟ್ ಕೊಹ್ಲಿ ಈ ಋತುವಿನ ಮೊದಲ ಅರ್ಧ ಶತಕ ಸಿಡಿಸಿದರು.
ವಿರಾಟ್ ತಮ್ಮ ಇನ್ನಿಂಗ್ಸ್ ನಲ್ಲಿ 45 ಎಸೆತಗಳಲ್ಲಿ ಒಂದು ಸಿಕ್ಸರ್ ಆರು ಬೌಂಡರಿಗಳೊಂದಿಗೆ 50 ರನ್ ಗಳಿಸಿದರು.
15 ಇನ್ನಿಂಗ್ಸ್ ಗಳ ಬಳಿಕ ವಿರಾಟ್ ಅರ್ಶಶತಕ ಸಿಡಿಸಿದ್ದಾರೆ.
rcb-virat kohli half centurie








