CSK vs SRH Match | ಹೈದರಾಬಾದ್ ತಂಡದ ಪ್ಲೇಯಿಂಗ್ 11
ಪ್ಲೇ ಆಫ್ಸ್ ಕನಸಿನಲ್ಲಿರುವ ಕೇನ್ ವಿಲಿಯಂ ಸನ್ ಸಾರಥ್ಯದ ಸನ್ ರೈಸರ್ಸ್ ತಂಡ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಇದು ಐಪಿಎಲ್ ನ 46ನೇ ಪಂದ್ಯ ಇದಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಹೊಸ ಜೋಷ್ ನೊಂದಿಗೆ ಕಣಕ್ಕಿಳಿಯಲಿದೆ.
ಎಂ.ಎಸ್.ಧೋನಿ ಮತ್ತೆ ತಂಡದ ಚುಕ್ಕಾಣಿ ಹಿಡಿದಿರೋದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಹೀಗಾಗಿ
ಎಂಸಿಎ ಅಂಗಳದಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಅಂದಹಾಗೆ ಈ ಸೀಸನ್ ನಲ್ಲಿ ಈ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿ ಆಗುತ್ತಿವೆ.
ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಹೈದರಬಾದ್ ತಂಡ ಗೆಲುವು ಸಾಧಿಸಿತ್ತು.
ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇಡು ತೀರಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಕೇನ್ ವಿಲಿಯಮ್ ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ.
ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಿತ್ತು.
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಐದು ವಿಕೆಟ್ ಗಳಿಂದ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಈ ಎರಡೂ ತಂಡಗಳು ಈವರೆಗೂ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಮೇಲು ಗೈ ಸಾಧಿಸಿದೆ.
ಚೆನ್ನೈ ತಂಡ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೇ ಹೈದರಾಬಾದ ತಂಡ ಐದು ಪಂದ್ಯಗಳಲ್ಲಿ ಗೆದ್ದಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದ್ರೆ
ಸನ್ ರೈಸರ್ಸ್ ಹೈದರಾಬಾದ್ ವಿಚಾರಕ್ಕೆ ಬಂದರೇ ಸನ್ ರೈಸರ್ಸ್ ತಂಡಕ್ಕೆ ಯುವಕರ ಮತ್ತು ಅನುಭವಿಗಳ ಬಲವಿದೆ. ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ ಮತ್ತು ಏಡಿಯನ್ ಮಾರ್ಕ್ ರಾಂ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಶಶಾಂಕ್ ಸಿಂಗ್ ಸೇರ್ಪಡೆ ಬ್ಯಾಟಿಂಗ್ ಲೈನ್ ಅಪ್ ಗೆ ಹೊಸ ಆಯಾಮ ತಂದುಕೊಟ್ಟಿದೆ. ಆದ್ರೆ ಕೇನ್ ವಿಲಿಯಂ ಸನ್, ನಿಕೋಲಸ್ ಪೂರನ್ ಅವರಿಂದ ದೊಡ್ಡ ಇನ್ನಿಂಗ್ಸ್ ಬಾಕಿ ಇದೆ. ವಾಷಿಂಗ್ ಟನ್ ಸುಂದರ್ ಆಲ್ ರೌಂಡರ್ ಆಟ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಮುಖ್ಯವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವು ನಿಂತಿರೋದೇ ಬೌಲಿಂಗ್ ವಿಭಾಗದ ಮೇಲೆ. ಆರಂಭದಲ್ಲಿ ಭುವನೇಶ್ವರ್ ಕುಮಾರ್, ಟಿ ನಟರಾಜನ್ ಎದುರಾಳಿಗಳ ವಿಕೆಟ್ ಪಡೆದು ತಂಡಕ್ಕೆ ಬ್ರೇಕ್ ನೀಡುತ್ತಿದ್ದಾರೆ. ಮಿಡಲ್ ಓವರ್ ಗಳಲ್ಲಿ ಉಮ್ರಾನ್ ಮಲಿಕ್ ಡೆತ್ ಓವರ್ ಗಳಲ್ಲಿ ಮಾರ್ಕೋ ಜಾನ್ಸನ್ ಘಾತಕ ಎಸೆತಗಳು ಪಂದ್ಯದ ಗತಿಯನ್ನ ಬದಲಿಸುತ್ತಿವೆ.
ಪ್ಲೇಯಿಂಗ್ ಇಲೆವೆನ್
ಕೇನ್ ವಿಲಿಯಂ ಸನ್
ಅಭಿಷೇಕ್ ಶರ್ಮಾ
ರಾಹುಲ್ ತ್ರಿಪಾಠಿ
ಏಡಿಯನ್ ಮಾರ್ಕ್ ರಾಂ
ನಿಕೋಲಸ್ ಪೂರನ್
ಶಶಾಂಕ್ ಸಿಂಗ್
ವಾಷಿಂಗ್ ಟನ್ ಸುಂದರ
ಭುವನೇಶ್ವರ್ ಕುಮಾರ್
ಟಿ ನಟರಾಜನ್
ಉಮ್ರನ್ ಮಲ್ಲಿಕ್
ಮಾರ್ಕೊ ಜಾನ್ಸನ್









