IPL 2022 : ಟೀಂ ಇಂಡಿಯಾಗೆ ಸೆಲೆಕ್ಟ್ ಆಗೋ ಆಲ್ ರೌಂಡರ್ ಗಳು ಇವರೇ..
ಆಸ್ಟ್ರೇಲಿಯಾದಲ್ಲಿ ಈ ಬಾರಿಯ T20 ವಿಶ್ವಕಪ್ ಅಕ್ಟೋಬರ್ ನಲ್ಲಿ ತಿಳಿದಿರುವ ವಿಚಾರವೇ.
ಕಳೆದ ವರ್ಷ ತೀವ್ರ ನಿರಾಸೆ ಅನುಭವಿಸಿದ್ದ ಟೀಂ ಇಂಡಿಯಾದ ಈ ಬಾರಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲ್ಲು ಸಖತ್ ಪ್ಲಾನ್ ಮಾಡುತ್ತಿದೆ.
ಟಿ – 20 ವಿಶ್ವಕಪ್ ಗೆ ಇನ್ನೂ 6 ತಿಂಗಳು ಬಾಕಿ ಇದ್ದು, ಈಗಲೇ ಟೀಂ ಇಂಡಿಯಾದಲ್ಲಿ ಯಾರು ಯಾರು ಸ್ಥಾನ ಪಡೆಯುತ್ತಾರೆ ಅನ್ನೋ ಚರ್ಚೆ ನಡೆಯುತ್ತಿದೆ.
ಕ್ರಿಕೆಟ್ ತಜ್ಞರು ಮತ್ತು ಮಾಜಿ ಕ್ರಿಕೆಟಿಗರು ಈಗಾಗಲೇ ಈ ಮೆಗಾ ಈವೆಂಟ್‌ಗೆ ಭಾರತ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಅದರಂತೆ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮುಂಬರುವ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಟೀಂ ಇಂಡಿಯಾದಲ್ಲಿ ಸ್ಥಾನಪಡೆಯುವ ಆಲ್‌ರೌಂಡರ್ ಗಳನ್ನು ಆಯ್ಕೆ ಮಾಡಿದ್ದಾರೆ.

ಏಪ್ಯಕಪ್, ಟಿ 20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಆಲ್‌ರೌಂಡರ್‌ಗಳಾಗಿ ಆಯ್ಕೆಯಾಗಿದ್ದಾರೆ ಎಂದು ವಾಸೀಂ ಹೇಳಿದ್ದಾರೆ.
“ಹಾರ್ದಿಕ್ ಪಾಂಡ್ಯ ಎರಡು ಅಥವಾ ಮೂರು ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾದರೆ, ಅವರನ್ನು ಖಂಡಿತವಾಗಿಯೂ ಆಯ್ಕೆಗಾರರು ಆಯ್ಕೆ ಮಾಡುತ್ತಾರೆ.
ಆಲ್ ರೌಂಡರ್ ವಿಭಾಗದಲ್ಲಿ ಸಾಕಷ್ಟು ಬ್ಯಾಟ್ಸ್‌ಮನ್‌ಗಳಿದ್ದಾರೆ. ರವೀಂದ್ರ ಜಡೇಜಾ ಕೂಡ ಅತ್ಯುತ್ತಮ ಆಲ್‌ರೌಂಡರ್ ಆಗಿದ್ದಾರೆ.
ಜಡ್ಡುಗೆ ಬ್ಯಾಕ್ ಆಪ್ ಆಗಿ ನಾನು ಅಕ್ಸರ್ ಪಟೇಲ್ ಅವರನ್ನು ಆಯ್ಕೆ ಮಾಡುತ್ತೇನೆ. ಶರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನಪಡೆದೂ ಆಡುವ 11ರಲ್ಲಿ ಸ್ಥಾನ ಪಡೆಯೋದು ಕಷ್ಟ ಎಂದಿದ್ದಾರೆ.
ಅಲ್ಲದೇ ರಾಹುಲ್ ತೆವಾಟಿಯಾ ಕೂಡ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ.
ipl-2022-wasim-jaffer-pick-india-all-rounders-t20-world-cup








