ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

Saakshatv Author Special – ಮರು ಅವಕಾಶ ಭಾಗ -4 ( ಧಾರಾವಾಹಿ)

Namratha Rao by Namratha Rao
November 5, 2022
in ಮಾರ್ಜಲ ಮಂಥನ, Marjala Manthana, Newsbeat
saakshatv author special , maru avakasha 1 , saakshatv
Share on FacebookShare on TwitterShare on WhatsappShare on Telegram

Saakshatv Author Special ( ಇದು ಧಾರಾವಾಹಿಯಾಗಿದ್ದು , ಪ್ರತಿ ದಿನ Saakshatv Authour Special ವಿಭಾಗದಲ್ಲಿ ಸಂಜೆ 6.30 ಕ್ಕೆ ಒಂದೊಂದು ಅಧ್ಯಾಯಗಳನ್ನ ಹಾಕುತ್ತಾ ಹೋಗುವೆ.. – ನಿಹಾರಿಕಾ ರಾವ್ )

ಅಧ್ಯಾಯ 2 ರ ಲಿಂಕ್

Saakshatv Author special : ಮರು ಅವಕಾಶ ಭಾಗ -2 (ಧಾರವಾಹಿ)

Related posts

shukravara-deeparadhane-mahalakshmi-kataksha-dhanaprapti-kannada

Astro- ಈ ಒಂದು ದೀಪವನ್ನು ಮನೆಯಲ್ಲಿ ಎರಡು ಶುಕ್ರವಾರದಂದು ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…..||

July 31, 2026
ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

July 31, 2026

ಅಧ್ಯಾಯ -3 ರ ಲಿಂಕ್ – 

Saakshatv Author Special – ಮರು ಅವಕಾಶ ಭಾಗ -3 ( ಧಾರಾವಾಹಿ)

 

ಅಧ್ಯಾಯ -4 

ರಾಯ್ ಹಾಗೂ ದೀಪಾಲಿಗಾಗಿ ಕೆಳಗೆ ಕಾಯ್ತಾ ಇರುತ್ತಾರೆ.. ದೀಪಾಲಿ ಸಿಂಪಲ್ ಒನ್ ಪೋಸ್ ಗೌನ್ ಧರಿಸಿ‌ ಫ್ರೀ ಹೇರ್ಸ್ ನಲ್ಲಿ ಕೆಳಗೆ ಬರುತ್ತಾಳೆ.. ಇಷ್ಟು‌ ಸಿಂಪಲ್ ಲುಕ್ ನಲ್ಲೂ ರಾಜಕುಮಾರಿ ತರಾನೆ ಕಾಣಿಸ್ತಿದ್ದ ಅವಳ ಅಂದಕ್ಕೆ ರಾಯ್‌ ಮಾರಿ ಹೋಗ್ತಾನೆ.. ಅಲ್ಲಿ ಅವನ ಕಸಿನ್ಸ್ ಮತ್ತೆ ಸ್ನೇಹಿತರು ಅವನ ಭಾವನೆ ನೋಡಿ ಸೈಲೆಂಟ್ ಆಗೆ‌ ಕಾಲೆಳೆಯುತ್ತಾ ಇರುತ್ತಾರೆ.. ಅದ್ರಲ್ಲೂ ರಿಕ್ಕಿ ರಾಯ್ ಕಿವಿಯಲ್ಲಿ ” ಓಯ್ ಅತ್ತಿಗೆ ಸೂಪರ್ ” ಅಂತಿದ್ದಂತೆ ರಾಯ್ ಅವನ ತಲೆ ಮೇಲೆ ಬಾರಿಸುತ್ತಾ ಮತ್ತೆ ಅವನತ್ತ ನೋಡ್ತಾನೆ ಕೆನ್ನೆಗಳು ಕೆಂಪಾಗಿರುತ್ವೆ.. ಅವಳನ್ನೇ ನೋಡ್ತಾ ಲೋಕ ಮರೆತು‌ಹೋಗಿರುತ್ತಾನೆ.. ದೀಪಾಲಿ ಬಂದ ತಕ್ಷಣ ರಾಯ್ ಅವರ ಅಮ್ಮ ದೇವರಿಗೆ ದೀಪ ಹಚ್ಚುವುದಕ್ಕೆ ಹೇಳ್ತಾರೆ.. ಆದರೆ ದೀಪಾಲಿಗೆ ಇದು ಇಷ್ಟ ವಿರೋದಿಲ್ಲ.. ಇನ್ ಫ್ಯಾಕ್ಟ್ ಅವಳು ಇನ್ಮೂಂದೆ ದೇವರನ್ನೇ‌ನಂಬ ಬಾರದು ಅಂತ ನಿರ್ಧರಿಸಿ ಆಗಿರುತ್ತೆ.

ಅವಳಿಗೆ ಯಾವುದರ ಮೇಲೂ ಚಿಂತೆ ಕೇರ್ ಇರಲಿಲ್ಲ.. ಆದರೆ ಅವರ ತಾಯಿಗೋಸ್ಕರ‌ ಹೋಗಿ ಮನಸಿಲ್ಲದೇ ಇದ್ರು‌ ದೇವರಿಗೆ ದೀಪ‌ ಹಚ್ಚಿ ಆರತಿ ಬೆಳಗಿ ಎಲ್ಲರಿಗೂ‌ ಮಂಗಳಾರತಿ‌ ಕೊಟ್ಟಳು.. ಈಗಲೂ ಅವರ ತಂದೆಗೆ ಆರತಿ‌‌ ಕೊಡದೇ ಅವರ ಅಮ್ಮನಿಗೆ ತಟ್ಟೆ ಕೊಟ್ಟು‌ ಹೋಗಿ‌ ಒಂದು ಸೈಡ್ ಗೆ ನಿಂತಳು.. ಅವರ ತಂದೆಗೆ ಮತ್ತಷ‌್ಟು‌‌ ನೋವಾಯ್ತು.. ಎಲ್ಲರಿಗೂ ಇದು ಸ್ವಲ್ಪ ಬೇಜಾರ್ ಮೂಡಿಸಿತು.. ರಿದಿಮಾ ಸನ್ನಿಧಿ , ರಾಯ್ ಗೂ ಸಹ..

ಆದ್ರೂ ಎಲ್ಲರೂ ಸುಮ್ನಾಗ್ತಾರೆ.. ರಾಯ್ ತಾಯಿ ತಕ್ಷಣ ತಾವು ತಂದಿದ್ದ ಬ್ಯಾಗ್ ನಿಂದ ಒಂದು ಒಡವೆಯ ಬಾಕ್ಸ್ ತೆಗೆದು ದೀಪಾ ಬಾ ಇಲ್ಲಿ ಅಂತ ಕರೆಯುತ್ತಲೇ ದೀಪಾಲಿ ಅವರ ಬಳಿ ಹೋಗ್ತಾಳೆ..

ರಾಯ್ ತಾಯಿ ಬಾಕ್ಸ್ ನಿಂದ ಒಂದು ತುಂಬಾ ಸುಂದರವಾದ ಚಿನ್ನದ ನೆಕ್ ಲೆಸ್ ತೆಗೆದು ಅವಳ ಕತ್ತಿಗೆ ಹಾಕುತ್ತಾ ಹೇಳುತ್ತಾರೆ.. ಇದು ನನ್ನ ಅತ್ತೆ ನನಗೆ ಕೊಟ್ಟಿದ್ದು ಇದನ್ನ ನೀನು ಜೋಪಾನ ಮಾಡ್ಬೇಕಮ್ಮ … ಇದು ನಮ್ಮ ಪರಿವಾರದ ಗೌರವ ಅಂತ ಹೇಳ್ತಾರೆ..

ದೀಪಾಲಿಗೆ ಸ್ವಲ್ಪ ಇರಿಸು ಮುರಿಸು ಆಗುತ್ತೆ.. ಅವಳು ನೆಕ್ ಲೆಸ್ ಬೇಡ ಅಂತ ಹೇಳ್ತಾ ಅದನ್ನ ವಾಪಸ್ ಕೊಡೋಕೆ ಹೋಗುತ್ತಾಳೆ.. ಆದ್ರೆ ರಾಯ್ ತಾಯಿ ವಾಪಸ್ ತೆಗೆದುಕೊಳ್ಳದೇ ಬಲವಂತವಾಗಿ ದೀಪಾಲಿಗೆ
ಕೊಡ್ತಾರೆ.. ರಾಯ್ ಇದನ್ನೆಲ್ಲಾ ನೋಡ್ತಾ ಒಂದೇ ಸಮನೇ‌ ಮುಗುಳುನಗುತ್ತಾ ದೀಪಾಲಿಯನ್ನೇ ನೋಡ್ತಾ ನಿಂತಿರುತ್ತಾನೆ..

ಶಾಸ್ತ್ರಗಳೆಲ್ಲಾ ಮುಗಿಯುತ್ತೆ.. ಕೊನೆದಾಗಿ ಉಳಿದಿದ್ದ ”  ಪ್ರಸ್ತದ ಶಾಸ್ತ್ರ” ಇತ್ತ ರಾಯ್ ಸ್ನೇಹಿತರು ಅವನ‌ ಕಾಲೆಳೆಯುತ್ತಾ ರೇಗಿಸ್ತಾಯಿರುತ್ತಾರೆ.. ಅತ್ತ ದೀಪಾಲಿ ಈ ಲೋಕದವಳು ನಾನಲ್ಲ ಅನ್ನೋ ಹಾಗೆ ಕೂತಿದ್ರೆ , ಮೇಲೆ ರಾಯ್ ಕಸಿನ್ಸ್ ಕೀರ್ತಿ , ಶ್ರೀಯ ಪ್ರಸ್ತದ ಕೋಣೆಯನ್ನ ತುಂಬ ಸುಂದರವಾಗಿ ಆಕರ್ಶಕವಾಗಿ ಅಲಂಕಾರ ಮಾಡಿ ಬೆಡ್ ಮೇಲೆ ಹಾರ್ಟ್ ಶೇಪ್ ನಲ್ಲಿ‌ ಗುಲಾಬಿಗಳನ್ನ ಜೋಡಿಸಿ ಸುತ್ತಲೂ ಹೂಗಳಿಂದ ಅಲಂಕರಿಸಿ , ಸುಗಂಧ ಕ್ಯಾಂಡಲ್ ಗಳನ್ನ ಹಚ್ಚಿ ರೆಡಿ ಮಾಡಿರುತ್ತಾರೆ‌‌.. ಇಷ್ಟೆಲ್ಲಾ ಆಗೋದ್ರೊಳಗೆ ರಾತ್ರಿ ಆಗಿ‌ಬಿಡುತ್ತೆ..

ಎಲ್ಲರೂ‌ ಬಲವಂತವಾಗಿ ದೀಪಾಳನ್ನ ಕರೆದುಕೊಂಡು ಹೋಗಿ ತಯಾರು ಮಾಡ್ತಾರೆ.. ತುಂಬಾ ಸಿಂಪಲ್ ಆದ ಎಂದು ಯಲ್ಲೋ ಸೀರಿಯನ್ನ ಉಟ್ಟು ಕೂದಲಿಗೆ ಚಿಕ್ಕ ಕ್ಲಿ ಪ್ ಹಾಕಿದ್ದ ದೀಪಾಲಿಯನ್ನ ಅವರ ಸ್ನೇಹಿತರು ಕಸಿನ್ ಸಿಸ್ಟರ್ ಗಳು ಕರೆದುಕೊಂಡು ಬಂದು ರೂಮ್ ಗೆ ಕಳುಹಿಸುತ್ತಾರೆ..

ದೀಪಾಲಿಗೆ ಇದೆಲ್ಲಾ ಸ್ವಲ್ಪವೂ ‌ಕೂಡ ಇಷ್ಟ ಇರೋದಿಲ್ಲ.. ಸಿಟ್ಟಲ್ಲಿದ್ದ ಅವಳಿಗೆ ಆ ರೂಮ್ ನ‌ ಡೆಕೊರೇಷನ್‌ ನೋಡಿ ಕೋಪ ನೆತ್ತಿಗೇರಿರುತ್ತೆ…  ಹೋಗಿ ಕೋಪದಲ್ಲೇ ಬೆಡ್  ಮೇಲೆ ಕೂರ್ತಾ ಇನ್ನೂ ಅದೇನ್ ಕರ್ಮ ನೋಡಬೇಕೋ ಅಂತ‌ ಅಂದುಕೊಂಡು ತಲೆ ಚೆಚ್ಚಿಕೊಳ್ಳುವಳು‌..

ಕೋಪದಲ್ಲಿ ಕೂತಿರೋವಾಗ್ಲೇ  ಬಾಗಿಲು ತೆಗೆಯೋ ಶಬ್ಧವಾಗುತ್ತೆ.. ಒಳಗೆ ರಾಜ್ ಪ್ರವೇಸುತ್ತಾ ಡೋರ್ ಲಾಕ್ ಮಾಡುತ್ತಾನೆ..

ಮನೆ ಮಂದಿ ಎಲ್ಲಾ ರಾಯ್ ದೀಪಾಲಿ ಮನೆಯಿಂದ ಹೊರಟಿರುತ್ತಾರೆ.. ಇವರಿಬ್ಬರನ್ನ ಬಿಟ್ಟು ಆ ಮನೆಯಲ್ಲಿ ಮತ್ಯಾರೂ ಇರೋದಿಲ್ಲ..

ರಾಯ್ ಸ್ವಲ್ಪ ಭಯದಲ್ಲಿ ನರ್ವಸ್ ಆಗ್ತಾ ಬಂದು ದೀಪಾಲಿ ಪಕ್ಕ‌  ಕೂರುತ್ತಾನೆ.. ದೀಪಾಲಿ ಈಗಲೂ ಒಂದೂ ಅಕ್ಷರ ಮಾತನಾಡದೇ ತನ್ನ ಎರೆಡೂ ಕೈಗಳನ್ನ ಕಿವಿಚಿಕೊಳ್ತಾ ನರ್ವಸ್ ಆಗಿ ಆಕಡೆ ತಿರುಗಿಯೇ ಕುಳಿತಿರುತ್ತಾಳೆ..

ರಾಯ್ : ಹಾಯ್… ದೀಪಾಲಿ ಸಂದರ್ಭ , ಸಮಯ , ಏನೇನೋ ಕಾರಣಗಳಿಂದ ನಾವು ಸರಿಯಾಗಿ‌ ಮಾತನಾಡೋಕು ಆಗಿಲ್ಲ… ಇನ್ ಫ್ಯಾಕ್ಟ್ ಒಂದೇ ವಾರದಲ್ಲೇ ಮದ್ವೆ ಮಾತುಕತೆ ನಡೆಸಿ ಮದ್ವನೂ ಮಾಡಿಬಿಟ್ರೂ.. ನನಗೆ ಗೊತ್ತು‌ ನಮಗೆ ಸರಿಯಾಗಿ ಒಬ್ರನ್ನ‌ ಒಬ್ರು ಅರ್ಥ ಮಾಡಿಕೊಳ್ಳೋಕು ಟೈಮ್ ಸಿಗ್ಲಿಲ್ಲ.. ನಮ್ ಮನೆ ಅವರು ಹತ್ತಿರ ಇದ್ರೂ ನಾವಿಬ್ರೂ ಅಷ್ಟು ಮಿಂಗಲ್ ಆಗೋಕೆ ಆಗಲೇ ಇಲ್ಲ.. ನಾನೂ ಪಿಯುಸಿಲಿ ಅಬ್ರಾಡ್ ಗೆ ಹೋಗ್ಬಿಟ್ಟೆ ಓದೋದಕ್ಕೆ.. ಸೋ ಅಷ್ಟು ಬಾಂಡಿಂಗ್ ಬರಲಿಲ್ಲ..‌ ಆಮೆಲೆ ಬಂದ್ರೂ ನೀನು ನಿನ್ ಕೆರಿಯರ್‌ ನಾನು‌ ಕೆರಿಯರ್ ಕಡೆ‌ ಗಮನ ಹರಿಸಿದ್ವಿ..   ಆದ್ರೆ‌ ಡೋಂಟ್ ವರಿ‌ ನನಗೆ ಗೊತ್ತು ನೀನಗೆ ಈಗ ಬೇಜಾರಾಗಿದೆ.. ಎಲ್ಲಾ ಕಷ್ಟ ಆಗ್ತಿದೆ.. ಅಂತ.. ಆದ್ರೆ ಮುಂದೆ ನಾವು ಅರ್ಥ ಮಾಡಿಕೊಂಡು‌ ಮುಂದೆ ಹೋಗೋಣ‌. ನಮ್ಮ‌ ಬಳಿ ಜೀವನ ಪೂರ್ತಿ‌ ಟೈಮ್ ಇದೆ‌ ಅಂತ ಹೇಳ್ತಾ‌ ಹೇಳ್ತಾ

ದೀಪಾಲಿ ಮದ್ಯದಲ್ಲೇ ಅವನ ಮಾತು ನಿಲ್ಲಿಸಿ ನುಡಿಯುತ್ತಾಳೆ…  ಎಷ್ಟೇ ಟೈಮ್ ಇದ್ರು ನೀನು‌ ನಾನು ಯಾವತ್ತೂ ಗಂಡ ಹೆಂಡತಿ‌ ರೀತಿ ಇರೋಕೆ ಸಾಧ್ಯವಿಲ್ಲ…

– ನಿಹಾರಿಕಾ ರಾವ್ –

ಲೇಖಕರ ಮಾತು..!!

 

( ಕಥೆ ಇಷ್ಟವಾದಲ್ಲಿ ಕಾಮೆಂಟ್ ಮಾಡಿ.. ಸಾಧ್ಯವಾದಲ್ಲಿ ಈ ಲೇಖನದ ಲೇಖಕಿಯಾದ ನಾನು ನಿಹಾರಿಕಾ ಅಲ್ಲಿ ನಿಮ್ಮ ಕಾಮೆಂಟ್ ಗೆ ಪ್ರತಿಕ್ರಿಯಿಸುವ ಪ್ರಯತ್ನ ಮಾಡುವೆ… )

( ಇದನ್ನ ಈ ಹಿಂದೆ ಎಲ್ಲಾದ್ರೂ ಓದಿದ್ದೀರಾ ಎಂದಾದರೆ ಅದು ನನ್ನದೇ ರಚನೆಯಾಗಿರುತ್ತೆ – ಪ್ರತಿಲಿಪಿಯಲ್ಲಿ ನಾನು ‘Niharika Rao Nammu’ ಅಲ್ಲಿಯೇ ನನ್ನ ಈ ಬರಹವನ್ನ ನೀವು ಓದಿರುತ್ತೀರಿ ಎಂದರ್ಥ.. ಹಾಗೆಯೇ ಇನ್ನಷ್ಟು ನನ್ನ ಧಾರಾವಾಹಿಗಳು ಬೇಕೆನಿಸಿದರೆ ಕಾಮೆಂಟ್ ಮಾಡಿ ನಾನು ಇಲ್ಲಿ ಇನ್ನು ಒಂದಷ್ಟು ಕಥೆಗಳನ್ನ ಹಾಕುತ್ತಾ ಹೋಗುವೆ.. ಹಾಗೆಯೇ ನೀವು ಪ್ರತಿಲಿಪಿಯಲ್ಲಿದ್ದರೆ ಅಲ್ಲಿ ಬೇಕಿದ್ದರೂ ನನ್ನ ಕಥೆಗಳನ್ನ ಓದಬಹುದು,,  )

ಈ ರೀತಿಯಾದ  ಇಂಟರೆಸ್ಟಿಂಗ್ ಕಂಟೆಂಟ್ ಗಾಗಿ ನಮ್ಮ Saakshatv.com ಫಾಲೋ ಮಾಡಿ…

Tags: #saakshatvmarjala manthanamaru avkasha 4Saakshatv Author special
ShareTweetSendShare
Join us on:

Related Posts

shukravara-deeparadhane-mahalakshmi-kataksha-dhanaprapti-kannada

Astro- ಈ ಒಂದು ದೀಪವನ್ನು ಮನೆಯಲ್ಲಿ ಎರಡು ಶುಕ್ರವಾರದಂದು ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…..||

by admin
July 31, 2026
0

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯು ತ್ತದೆ. ಪ್ರತಿಯೊಬ್ಬ ಮನುಷ್ಯನೂ ಮುಂದುವರಿಯಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ...

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

by Shwetha
July 31, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ...

ದೇಶದ ಶ್ರೇಷ್ಠ ವಿಜ್ಞಾನಿಗೆ ಗೋಮೂತ್ರ ತಜ್ಞ ಎಂಬ ಹಣೆಪಟ್ಟಿ:ರಾಜಕೀಯಕ್ಕಾಗಿ ವಿಜ್ಞಾನಿಯ ಸಾಧನೆಗೆ ಮಸಿ ಬಳಿಯಬೇಡಿ- ಪ್ರಿಯಾಂಕಾ ಗಾಂಧಿ ವಿರುದ್ಧ ತಿರುಗಿಬಿದ್ದ  ಸಂಶೋಧನಾ ತಜ್ಞರು

ದೇಶದ ಶ್ರೇಷ್ಠ ವಿಜ್ಞಾನಿಗೆ ಗೋಮೂತ್ರ ತಜ್ಞ ಎಂಬ ಹಣೆಪಟ್ಟಿ:ರಾಜಕೀಯಕ್ಕಾಗಿ ವಿಜ್ಞಾನಿಯ ಸಾಧನೆಗೆ ಮಸಿ ಬಳಿಯಬೇಡಿ- ಪ್ರಿಯಾಂಕಾ ಗಾಂಧಿ ವಿರುದ್ಧ ತಿರುಗಿಬಿದ್ದ ಸಂಶೋಧನಾ ತಜ್ಞರು

by Shwetha
July 31, 2026
0

ಲೋಕಸಭೆಯಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರ...

ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

by Shwetha
July 31, 2026
0

ದೆಹಲಿ ಜಂತರ್ ಮಂತರ್ ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾರೆ ಎನ್ನಲಾದ ವ್ಯಕ್ತಿಗಳಿಗೆ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಸುಪ್ರೀಂ...

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

by Shwetha
July 31, 2026
0

ರಾಜ್ಯಸಭೆಯ ನಿನ್ನೆ ಕಲಾಪವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಯಿತು. ದೆಹಲಿ ಗಲಭೆ ಸೇರಿದಂತೆ ದೇಶದ ಪ್ರಮುಖ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram