ಅನ್ಯಗ್ರಹ ಜೀವಿ ಎಂದು ಹೇಳಿಕೊಂಡು ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಬಂಧನ…
ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಓಡಾಡುತ್ತಿದ್ದಕ್ಕೆ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ ನಾನು ಬೇರೊಂದು ಭೂಮಿಯಿಂದ ಬಂದವನು ನನ್ನೇಕೆ ಬಂಧಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ ಈ ಘಟನೆ ನಡೆದಿರುವುದು ಅಮೇರಿಕಾದ ಪ್ಲೋರಿಡಾದಲ್ಲಿ.
ಈ ಸನ್ನೀವೇಶ ಕೇಳೆ ಬಾಲಿವುಡ್ ನ ಪಿಕೆ ಚಿತ್ರ ನೆನೆಪಾಗಿರುತ್ತದೆ. ಅದರಲ್ಲಿ ಅಮೀರ್ ಖಾನ್ ಬೆರೊಂದು ಭೂಮಿಯಿಂದ ಬಂದ ಏಲಿಯನ್ ಪಾತ್ರದಲ್ಲಿ ನಟಿಸಿದ್ದರು. ಇದೇ ರೀತಿ ಪ್ಲೋರಿಡಾದ ಪಾಮ್ ಬೀಚ್ ನಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಬಂದಿಸಿದ್ದಕ್ಕೆ ಪೊಲೀಸರ ಬಳಿ ನಾನು ಬೇರೊಂದು ಭೂಮಿಯಿಂದ ಬಂದವನು ಅನ್ಯಗ್ರಹ ಜೀವಿ ಎಂದು ವಾದಿಸಿದ್ದಾನೆ.
ಅಸಭ್ಯ ವರ್ತನೆ ಮತ್ತು ಬಂಧನವನ್ನ ವಿರೋಧಿಸಿದ ಆರೋಪದ ಮೇಲೆ 44 ವರ್ಷದ ಜೇಸನ್ ಸ್ಮಿತ್ ಅವರನ್ನ ಪೊಲೀಸರು ಬಂಧಿಸಿದ್ದಾರೆ. ವರ್ತ್ ಅವೆನ್ಯೂನಲ್ಲಿರುವ ರೆಸ್ಟಾರೆಂಟ್ನ ಹಿಂದೆ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿದ್ದನ್ನ ಗಮನಿಸಿ ವ್ಯಕ್ತಿಯೊಬ್ಬ ಪೊಲೀಸರಿಗೆ ವಿಷಯ ತಿಳಿಸಿದ್ದನೆ.
ಸ್ಮಿತ್ ತಮ್ಮ ಹೆಸರು ಅಥವಾ ಜನ್ಮ ದಿನಾಂಕವನ್ನು ನೀಡಲು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ದ ನಂತರ ತನ್ನ ಹೆಸರನ್ನ ಬಾಯ್ಬಿಟ್ಟಿದ್ದಾನೆ. ಆದರೇ ತನ್ನ ಬಳಿ ಸಾಮಾಜಿಕ ಭದ್ರತಾ ಸಂಖ್ಯೆ ಅಥವಾ ಗುರುತಿನ ಚೀಟಿ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸಧ್ಯಕ್ಕೆ ಸ್ಮಿತ್ ಪಾಮ್ ಬೀಚ್ ಕೌಂಟಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
man in america was walking around naked without clothes. pretends to be an alien