ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿನ ಕೋಲ್ಡ್ ಸ್ಟೋರೇಜ್ ನಲ್ಲಿ ಗ್ಯಾಸ್ ಲೀಕ್ ಆಗಿ ಎರಡು ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಹಣ್ಣು ಸಂಗ್ರಹಿಸುವ ಕೋಲ್ಡ್ ಸ್ಟೋರೇಜ್ ಗೆ ಬೆಂಕಿ ಬಿದ್ದಿದ್ದು, ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಅಲ್ಲದೇ, ರಮೇಶ್ ಎಲೆಕ್ಟ್ರಿಕಲ್ ಅಂಗಡಿಗೆ ಕೂಡ ಬೆಂಕಿ ತಗುಲಿದೆ. ಪರಿಣಾಮ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ನಾಶವಾಗಿವೆ.
ಎಂ.ಕೆ.ಅಕ್ಬರ ಸಾಬ ಎಂಬುವರಿಗೆ ಸೇರಿದ ಕೋಲ್ಡ್ ಸ್ಟೋರೇಜ್, ರಮೇಶ ಎಂಬುವರ ಎಲೆಕ್ಟ್ರಿಕಲ್ ಅಂಗಡಿ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.








