ಭೋಪಾಲ್ : ದೇಶದಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಭಕ್ತರು ಮಹಾದೇವನನ್ನು ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ಉಪವಾಸದ ಮೊರೆ ಹೋಗಿದ್ದಾರೆ. ದೇಶದ ಶಿವನ ಎಲ್ಲಾ ದೇವಾಲಯಗಳಲ್ಲಿ ಮುಂಜಾನೆಯಿಂದಲೂ ಪೂಜೆ ಪುನಸ್ಕಾರಗಳು ನೆರವೇರುತ್ತಿವೆ. ಈ ನಡುವೆ ಶಿವರಾತ್ರಿ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ ನ ಪೊಲೀಸ್ ಠಾಣೆಯೇ ಮಹಾದೇದನ ಮಂದಿರವಾಗಿ ಬದಲಾಗಿದೆ.
ಹೌದು, ಮಧ್ಯಪ್ರದೇಶದ ಭೋಪಾಲ್ ನ ಭೈರಾಗರ್ ನಲ್ಲಿರೋ ಸಂತ ಹಿರ್ದರಾಮ್ ನಗರ ಠಾಣೆಯೇ ಇದೀಗ ಥಾಣೇಶ್ವರ ಮಹಾದೇವ ಮಂದಿರವಾಗಿ ಬದಲಾಗಿದೆ. ಮಹಾಶಿವರಾತ್ರಿ ಪ್ರಯುಕ್ತ ಠಾಣೆಯ ಆವರಣದಲ್ಲಿದ್ದ ಶಿವಲಿಂಗಕ್ಕೆ ಪೂಜೆ ಮಾಡಲಾಗಿತ್ತು. ನಂತರ ಪೊಲೀಸರು ಠಾಣೆಯ ಹೆಸರನ್ನು ಥಾಣೇಶ್ವರ ಮಹಾದೇವ ಮಂದಿರ ಠಾಣಾ ಎಂದು ಬದಲಾಯಿಸಿದ್ದಾರೆ.
ಕೊಟ್ಟ ಮಾತು ತಪ್ಪಿದ್ರೆ ನಿಮ್ಮ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಿಜೆಪಿ ಸೆನ್ಸೇಷನ್ ಇರ್ಫಾನ್ ನೇರ ಎಚ್ಚರಿಕೆ
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಬೀದಿಬದಿ ವ್ಯಾಪಾರಿ ಮೊಹಮ್ಮದ್ ಇರ್ಫಾನ್ ಈಗ ವಿಪಕ್ಷ...








