ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಪಾಕ್ ಕ್ರಿಕೆಟ್ ನ ಮುಖ್ಯ ಆಯ್ಕೆಗಾರರಾಗಿ ಇಂಜುಮಾಮ್ ನೇಮಕ

ಪಾಕ್ ನ ಮಾಜಿ ಆಟಗಾರ ಇಂಜುಮಾಮ್ ಉಲ್ ಹಕ್ ಆಯ್ಕೆ

Author2 by Author2
August 7, 2023
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಪ್ರಸಕ್ತ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ತಂಡ ತಯಾರಿ ಆರಂಭಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆಗಾರರಾಗಿ ಮಾಜಿ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ನೇಮಕಗೊಂಡಿದ್ದಾರೆ.

ಈ ಹಿಂದೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆಗಾರನಾಗಿ 2016ರಿಂದ 2019ರವರೆಗೆ ಕಾರ್ಯನಿರ್ವಹಿಸಿದ್ದ ಇಂಜಮಾಮ್‌, ರಾಷ್ಟ್ರೀಯ ತಂಡದಲ್ಲಿ ಉಂಟಾದ ಕ್ಲಿಷ್ಟಕರ ಪರಿಸ್ಥಿತಿಯ ಕಾರಣದಿಂದ ಅವಧಿಗೂ ಮುನ್ನವೇ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ 2023ರ ಏಕದಿನ ವಿಶ್ವಕಪ್‌ ಟೂರ್ನಿಗೆ ಕೆಲವೇ ತಿಂಗಳು ಬಾಕಿಯಿರುವ ಬೆನ್ನಲ್ಲೇ ತಂಡದ ಮುಖ್ಯ ಆಯ್ಕೆಗಾರರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

Related posts

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

May 25, 2026
RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

May 18, 2026

ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಂಜಮಾಮ್‌, ತಮ್ಮ ಮೊದಲ ಕರ್ತವ್ಯವಾಗಿ ಇದೇ ತಿಂಗಳ 22ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪಾಕಿಸ್ತಾನ ತಂಡವನ್ನ ಆಯ್ಕೆ ಮಾಡುವುದಾಗಿದೆ. ಇದಾದ ನಂತರದಲ್ಲಿ ಏಷ್ಯಾಕಪ್‌ ಟೂರ್ನಿಗೆ ಹಾಗೂ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ತಂಡವನ್ನ ಆಯ್ಕೆ ಮಾಡಬೇಕಾದ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ 2019ರಲ್ಲಿ ಇಂಜಮಾಮ್‌, ಏಕದಿನ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದ್ದರು.

ಇತ್ತೀಚೆಗಷ್ಟೇ ಝಾಕಾ ಅಶ್ರಫ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಈ ನಿರ್ಧಾರಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಇಂಜಮಾಮ್ ಅವರನ್ನು ತಂಡದ ಆಯ್ಕೆ ಮಂಡಳಿ ಚೀಫ್‌ ಆಗಿ ಮರು ನೇಮಕ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಜಿ ಕ್ರಿಕೆಟಿಗ ಇಂಜಮಾಮ್‌ ಅವರೊಂದಿಗೆ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಮತ್ತು ಮುಖ್ಯ ಕೋಚ್ ಗ್ರಾಂಟ್ ಬ್ರಾಡ್ಬರ್ನ್ ಕೂಡ ಆಯ್ಕೆ ಸಮಿತಿಯಲ್ಲಿದ್ದಾರೆ.

Tags: Injumam appointed as Chief Selector of Pakistan CricketInzamam-ul-HaqMen's CricketPakistansports karnataka
ShareTweetSendShare
Join us on:

Related Posts

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

by Shwetha
May 25, 2026
0

ಬೆಂಗಳೂರು: ಭಾರತೀಯ ಟಿ20 ಕ್ರಿಕೆಟ್ ತಂಡದಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸುತ್ತಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್...

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

by Shwetha
May 18, 2026
0

ಐಪಿಎಲ್ 2026ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸರ್ವತೋಮುಖ...

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

by Shwetha
May 17, 2026
0

ದಾಖಲೆಗಳ ಸರದಾರ, ಟೀಮ್ ಇಂಡಿಯಾದ ರನ್ ಮಷಿನ್ ಮತ್ತು ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕಿಂಗ್ ವಿರಾಟ್ ಕೊಹ್ಲಿ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಕ್ರಿಕೆಟ್ ಭವಿಷ್ಯ...

ನನ್ನ ಕಣ್ಣೀರು ಹರ್ಭಜನ್ ಪಾಲಿಗೆ ಬ್ಯುಸಿನೆಸ್ : ಭಜೀ ಜೊತೆಗಿನ ಸ್ನೇಹಕ್ಕೆ ಎಳ್ಳುನೀರು ಬಿಟ್ಟ ಶ್ರೀಶಾಂತ್ ; ಹರ್ಭಜನ್ ಸಿಂಗ್ ವಿರುದ್ಧ ಸಿಡಿದೆದ್ದ ಕೇರಳ ಎಕ್ಸ್‌ಪ್ರೆಸ್

ನನ್ನ ಕಣ್ಣೀರು ಹರ್ಭಜನ್ ಪಾಲಿಗೆ ಬ್ಯುಸಿನೆಸ್ : ಭಜೀ ಜೊತೆಗಿನ ಸ್ನೇಹಕ್ಕೆ ಎಳ್ಳುನೀರು ಬಿಟ್ಟ ಶ್ರೀಶಾಂತ್ ; ಹರ್ಭಜನ್ ಸಿಂಗ್ ವಿರುದ್ಧ ಸಿಡಿದೆದ್ದ ಕೇರಳ ಎಕ್ಸ್‌ಪ್ರೆಸ್

by Shwetha
April 26, 2026
0

ಐಪಿಎಲ್ ಇತಿಹಾಸದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ 2008ರ ಕಪಾಳಮೋಕ್ಷ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸುಮಾರು 16 ವರ್ಷಗಳ ನಂತರ ಮಾಜಿ ವೇಗಿ ಶ್ರೀಶಾಂತ್...

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

ಐಪಿಎಲ್‌ನಲ್ಲಿ ಚಕ್ಕಿಂಗ್ ವಿವಾದ: ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಕಾನೂನುಬಾಹಿರವೇ? ಬಿಸಿಸಿಐಗೆ ದೂರು ನೀಡಲಿದೆಯೇ ಸಿಎಸ್‌ಕೆ?

by Shwetha
April 10, 2026
0

ಐಪಿಎಲ್ 2026ರ ಆವೃತ್ತಿಯು ರೋಚಕ ಪಂದ್ಯಗಳ ಜೊತೆಗೆ ಇದೀಗ ಹೊಸದೊಂದು ವಿವಾದಕ್ಕೆ ಸಾಕ್ಷಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram