ಬಂಧುಗಳೇ, ದೇಶ ಮತ್ತೆ ಸಂಕಟದಲ್ಲಿದೆ ಒಂದಾಗುವ
✍
ಪೇತ್ರಿ ವಿಶ್ವನಾಥ ಶೆಟ್ಟಿ
ಕಳೆದ ಮಳೆಗಾಲದ ಅತಿವೃಷ್ಟಿ, ತದ ನಂತರದ, ಚೀನಾದ ಕೊಡುಗೆಯಾಗಿ ಬಂದ ಮಹಾಮಾರಿಯಿಂದ ದೇಶ,ಜಗತ್ತು ತತ್ತರಿಸಿ ಹೋಗಿರುವ ಹೊತ್ತಲ್ಲಿ ಗಡಿ ವಿವಾದ ತಗಾದೆ ತೆಗೆದು ಭಾರತವನ್ನು ಸಂಕಷ್ಟಕ್ಕೆ ಸಿಕ್ಕಿಸುವ ತಯಾರಿಯಲ್ಲಿದೆ. ಚೀನಾ ಎಂಬ ಚಾಂಡಾಲ ದೇಶ ಲಡಾಖ್ ನ ಗಾಲ್ವಾನ ಕಣಿವೆಯ ಪಾನ್ ಗಾಂಗ್ ನಲ್ಲಿ ಚೀನಾ ಸೈನಿಕರು ಭಾರತದ ಒಳ ನುಸುಳಲು ಪ್ರಯತ್ನಿಸುತ್ತ, ಭಾರತದ ಸೈನಿಕರ ಮೇಲೆ ಹಲ್ಲೆ ಮಾಡಿ ಭಾರತ ಇಪ್ಪತ್ತು ವೀರ ಸೈನಿಕರನ್ನು ಕೊಂದರು. ದಿಟ್ಟತನದ
ಪ್ರತ್ಯುತ್ತರವಾಗಿ ಭಾರತವೂ ಚೀನಾದ ನಲವತ್ತ ಮೂರು ಸೈನಿಕರನ್ನು ಕಾಲನ ಅರಮನೆಗಟ್ಟಿ , ಅರವತ್ತೆರಡರ ನೆಹರು
ಸರಕಾರ ಇದಲ್ಲ,!!!
ಈಗಿನ ಭಾರತ ಬದಲಾದ ಭಾರತ ಅನ್ನುವುದನ್ನು ತೋರಿಸಿ ಕೊಟ್ಟಿದೆ.

ತನ್ನ ಬಳುವಳಿಯಾದ ಕೊರೊನಾ ಮಹಾಮಾರಿಯಿಂದ ಜಗತ್ತಿನ ಎಲ್ಲಾ ದೇಶಗಳು ತನ್ನನ್ನು ಹದ್ದುಬಸ್ತಿನಲ್ಲಿಡುತ್ತದೆ ಎನ್ನುವುದನ್ನು ಮನಗಂಡು ಬೀಸುವ ಭಯಂಕರವಾದ ಲಾಟಿ ಏಟನಿಂದ ಪಾರಾಗಲು ಈ ಕಮ್ಯೂನಿಸ್ಟ್ ಚೀನಾ ನಮ್ಮ ಮೇಲೆ ಆಕ್ರಮಣ ಕ್ಕೆ ಸಜ್ಜಾಗುತ್ತಿದೆ.
ಆದರೆ ಜಗತ್ತು ಕಣ್ಣು ಮುಚ್ಚಿಕೊಂಡಿಲ್ಲ. ಈ ಬಾರಿ ಮಾತ್ರ ಜಗತ್ತಿನ ಎಲ್ಲಾ ದೇಶಗಳು ಒಂದಾಗಿ ಚೀನಾದ ಹೆಡೆಮುಡಿ ಕಟ್ಟಲಿದ್ದಾರೆ.
ಕಟ್ಟದಿದ್ದರೆ ಈ ಲೋಕಕ್ಕೆ ಕಲುಷಿತ ಆಹಾರ,ಕಳಪೆ ದಿನಬಳಕೆ ವಸ್ತುಗಳನ್ನು ಮಾರುತ್ತಾ ಕ್ಯಾನ್ಸರ್ ಎಂಬ ಮಹಾಮಾರಿ ಹಂಚುವ ಚೀನಾದಿಂದ ನಮ್ಮ ಮುಂದಿನ ಬದುಕು ಜರ್ಜರಿತವಾಗಲಿದೆ.
ಇಂದಲ್ಲ ಅಂದರೆ ಮುಂದಲ್ಲ
ಇದೀಗಲೇ ನಾವು ಚೀನಾವನ್ನು ಸಂಹಾರ ಮಾಡಬೇಕು
ಅದಕ್ಕಾಗಿ ದೇಶದ ಗಡಿಗೆ ಹೋಗುವ ಅಗತ್ಯವಿಲ್ಲ
ನಿಮ್ಮ ಒಂದೇ ಒಂದು ನಿರ್ಧಾರದಿಂದ ಅದು ಸಾಧ್ಯ.
ಹೌದು ಚೀನಾದ ಯಾವುದೇ ವಸ್ತುಗಳನ್ನು ನಾವು ಖರೀದಿಸುವುದನ್ನು ನಿಲ್ಲಿಸಬೇಕು. ಚೀನಾದ ಅತಿ ದೊಡ್ಡ ಮಾರುಕಟ್ಟೆ ಭಾರತ.
ಇಲ್ಲಿನ ಸರಿಸುಮಾರು ಎಪ್ಪತ್ತು ಪ್ರತಿಶತ ಸಾಮಾನುಗಳು ಚೀನಾದ್ದಾಗಿದೆ. ಯಾವಾಗ ನಾವು ಅಲ್ಲಿನ ಸಾಮಾನುಗಳನ್ನು ಉಪಯೋಗಿಸುವುದು ನಿಲ್ಲಿಸುತ್ತೇವೋ ಅಲ್ಲಿಗೆ ಅರ್ಧ ಯುದ್ದ ಮುಗಿದಂತೆ. ನಮಗೆ ಸಾಮಾನುಗಳನ್ನು ಮಾರಿ ನಮ್ಮ ಹಣದಿಂದ ನಮ್ಮ ಸೈನಿಕರನ್ನು ಅವರು ಕೊಲ್ಲುವುದು ಎಂದೂ ಸಹಿಸಿಕೊಳ್ಳುವಂತಿಲ್ಲ.

ಅಂಗಡಿಗೆ ಹೋದಾಗ ನಾವು ಕೊಳ್ಳುವ ವಸ್ತುವಿನ expire date ನೋಡುತ್ತೇವೋ ಹಾಗೆಯೇ Made in China ಅನ್ನುವ ವಸ್ತುಗಳನ್ನು ನಾವು ಖರೀದಿಸುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡುವ.!!!!
ಸ್ವಾವಲಂಬಿ ಭಾರತೀಯರಾಗೋಣ.
ಪ್ರಧಾನ ಮಂತ್ರಿಯವರ ಲೋಕಲ್ ಕ ವೋಕಲ್ ಬನೋ ಪರಿಕಲ್ಪನೆಯನ್ನು ಶಿರಸಾ ಪರಿಪಾಲಿಸೋಣ
ಸ್ವದೇಶಿ ವಸ್ತುಗಳ ದಾಸರಾಗುವ.
ನಮ್ಮ ಯುವಜನರಿಗೆ ದೇಶದ ಇಂದಿನ ಪರಿಸ್ಥಿತಿಯ ಅರಿವು ಮೂಡಿಸಿ ಅವರಲ್ಲಿ ದೇಶದ ಮೇಲಿನ ಪ್ರೀತಿಯನ್ನು ಹೆಚ್ಚಿಸೋಣ.
ದಿನಕ್ಕೊಂದು ಬಾರಿಯಾದರೂ ಸಾಮಾಜಿಕ ಜಾಲತಾಣದಲ್ಲಿ ಚೀನಾ ದೇಶದ ಸಾಮಾನು ಖರೀದಿಸದಂತೆ ಜನರಲ್ಲಿ ಎಚ್ಚರಿಕೆ ಮೂಡಿಸುವ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಹತ್ತಿರದ ಅಂಗಡಿಗಳಿಗೆ ಹೋಗಿ ಬಹಳ ಪ್ರೀತಿಯಿಂದ ಚೀನಾದ ಸಾಮಾನುಗಳನ್ನು ಮಾರದಂತೆ ಕೈಮುಗಿದು ವಿನಂತಿಸುವ.
ಅವರು ಮಾರುವ ವಸ್ತುಗಳು ಹಾಗು ಆಹಾರದಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ವಿವರಿಸಲು ಪ್ರಯತ್ನಿಸುವ.
ಬಂಧುಗಳೇ….
ಸ್ವಾರ್ಥದ ಬದುಕಿಗೆ ಸ್ವಲ್ಪ ವಿರಾಮ ಇಟ್ಟು ಇನ್ನಾದರೂ ದೇಶಕ್ಕಾಗಿ ಬದುಕುವ ಕುರಿತು ಯೋಚಿಸುವ.
ಬರುವ ನಾಳೆಗಳು ನಮ್ಮ ಎಣಿಕೆಯಂತಿಲ್ಲ.ಮಹಾಮಾರಿಯ ಹೊಡೆತದಿಂದ ದೇಶದ ಪರಿಸ್ಥಿತಿ ಊಹಿಸಲು ಅಸಾಧ್ಯ ಎನ್ನುವಂತಾಗಿದೆ. ಇಂತಹ ಕಾಲಘಟ್ಟದಲ್ಲಿ ಎಷ್ಟು ಜಾಗ್ರತರಾಗಬೇಕು ಎನ್ನುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು.
ಮಹಾತ್ಮರ ಕನಸಿನ ಭಾರತ ಕಟ್ಟುವ ಕಾಯಕದಲ್ಲಿ ನಾವು ಒಂದಾಗಬೇಕು. ಇವತ್ತು ಜಗತ್ತು ಪ್ರಗತಿಪರ ಭಾರತವನ್ನು ಕಾಣುವ ದೃಷ್ಟಿ ಬದಲಾಗಿದೆ,ಭಾರತ ರಾಜಕೀಯ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕವಾಗಿ ಬಹಳಷ್ಟು ಮುಂದುವರಿದಿದೆ ಹಾಗೂ ಮುಂದುವರಿಯುತ್ತಾ ಇದೆ. ಅದನ್ನು ಸಹಿಸದ ಅಕ್ಕಪಕ್ಕದ ದೇಶಗಳು ನಮ್ಮಮೇಲೆ ಆಕ್ರಮಣಕಾರಿ ಹೋರಾಟಕ್ಕೆ ಸಿದ್ದವಾಗಿವೆ.

ಈಚೆ ಮನೆಯವಳು ಓಲೆ ಇಟ್ಕೊಂಡರೆ ಆಚೆ ಮನೆಯವಳು ಕಿವಿ ಕಿತ್ಕೊಂಡ್ಲು ಅಂದ ಹಾಗೆ ಭಾರತ ಇದೀಗ ಜಗತ್ತಿನ ಹೆಚ್ಚಿನ ದೇಶಗಳ ಪ್ರೀತಿ ಪಾತ್ರರಾಗಿರುವುದು ಚೀನಾಕ್ಕೆ ಸಹಿಸಲಾಗಲ್ಲ.
ಭಾರತದ ನೂರಾಮೂವತ್ತೈದು ಕೋಟಿ ಜನರು ಮನ. ಮಾಡಿದಲ್ಲಿ ಯಾರೂ ನಮ್ಮತ್ತ ಕಣ್ಣೆತ್ತಿ ಸಹ ನೋಡಲಾರರು.
ಸ್ನೇಹಿತರೇ ಚೀನಾ ನಮ್ಮ ಮೇಲೆ ಆಕ್ರಮಣ ಮಾಡುತ್ತೆ ಅಂತ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಅಲ್ಲಿನ ದೇಶದ ಸೈನಿಕರು ನಮ್ಮಂತೆ ದೇಶಪ್ರೇಮಿಗಳಲ್ಲ.ಅವರಲ್ಲಿ ಯುದ್ದ ಮಾಡುವ ಕೌಶಲ್ಯಗಳಿಲ್ಲ. ಅಲ್ಲಿನ ಸೈನಿಕರಿಗೆ ಯಾಕೆ ದೇಶಪ್ರೇಮ ಕಡಿಮೆ ಅಂದರೆ ಅವರುಗಳು ಸರಕಾರಿ ನೌಕರರಂತೆ ಸರಕಾರದ ಕೆಲಸ ಮಾಡುತ್ತಾರೆಯೇ ಹೊರತು ಭಾರತೀಯ ಸೈನಿಕರಂತೆ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಗಂಡೆದೆ ಅವರಿಗಿಲ್ಲ. ಅಲ್ಲಿನ ಸೈನಿಕರು ಹಾಗು ಪ್ರಜೆಗಳು ಕಮ್ಯೂನಿಸ್ಟ್ ಎಡಬಿಡಂಗಿ ಸರಕಾರದಿಂದ ರೋಸಿ ಹೋಗಿವೆ. ಅಲ್ಲಿನ ತಂದೆ ತಾಯಂದಿರಿಗೆ ಒಬ್ಬನೇ ಒಬ್ಬ ಮಗನಿರುವುದರಿಂದ ಅಲ್ಲಿನ ಜನರು ಯುದ್ದಕ್ಕೆ ಮನಮಾಡುವಂತಿಲ್ಲ ಅನ್ನುವುದು ಸಹ ಸತ್ಯ.
ಒಂದು ಕಟುವಾದ ಸತ್ಯವನ್ನು ಈ ಹೊತ್ತಲ್ಲಿ ನಾವುಗಳು ಅರಗಿಸಿಕೊಳ್ಳಬೇಕು ಅರವತ್ತೆರಡರಲ್ಲಿ ಚೀನಾ ಭಾರತದ ಯುದ್ಧ ಆದಾಗ ಇಲ್ಲಿನ ಕೆಲವು ಎಡಬಿಡಂಗಿ ಕಮ್ಯೂನಿಸ್ಟ್ ಪಾಪಿಗಳು ದೇಶದ ವಿರುದ್ದ ಕೆಲಸ ಮಾಡಿದ್ದರು. ಅವರ ಸಂತಾನ ಇವತ್ತಿಗೂ ಅಲ್ಲಲ್ಲಿ ಅಂದರೆ ನಮ್ಮ ಅಕ್ಕಪಕ್ಕ ಇದ್ದು ನಮ್ಮ ದೇಶದ ಸಿದ್ದಾಂತ ಹಾಗು ಸರಕಾರದ ವಿರುದ್ದ ಜನರನ್ನು ಎತ್ತಿ ಕಟ್ಟಲಿದ್ದಾರೆ.
ಅಂತಹ ನೀಚರಿಂದ ನಾವುಗಳು ಜಾಗರೂಕರಾಗುವುದು ಅಗತ್ಯ.
ಭಾರತೀಯರೇ,
ದೇಶ ಮೊದಲು – ಜಾತಿಯಲ್ಲ
ದೇಶ ಮೊದಲು – ಧರ್ಮವಲ್ಲ
ದೇಶ ಮೊದಲು – ಊರುಕೇರಿಯಲ್ಲ
ಭಾರತಾಂಭೆಯಯ ರಕ್ಷಣೆಯಲ್ಲಿ ಎಂದೂ ರಾಜಿ ಇಲ್ಲ.
ರಾಷ್ಟ್ರ ಪ್ರೇಮ ಸರ್ವ ಶ್ರೇಷ್ಠ ಪ್ರೇಮ.
ವಂದೇ ಮಾತರಂ
ಜೈ ಹಿಂದ್
🙏🙏🙏🙏🙏🙏🙏🙏








