ADVERTISEMENT
Monday, May 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಂಧುಗಳೇ, ದೇಶ ಮತ್ತೆ ಸಂಕಟದಲ್ಲಿದೆ ಒಂದಾಗುವ

admin by admin
June 24, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಬಂಧುಗಳೇ, ದೇಶ ಮತ್ತೆ ಸಂಕಟದಲ್ಲಿದೆ ಒಂದಾಗುವ

✍
ಪೇತ್ರಿ ವಿಶ್ವನಾಥ ಶೆಟ್ಟಿ

Related posts

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

May 17, 2026
ಎಸ್‌ಐಆರ್ ಎಂಬ ಗುಪ್ತ ಅಸ್ತ್ರದ ಬಗ್ಗೆ ಎಚ್ಚರ: ಪ್ರಧಾನಿ ಮೋದಿ ವೈಫಲ್ಯಗಳ ವಿರುದ್ಧ ಡಿಕೆ ಶಿವಕುಮಾರ್  ವಾಗ್ದಾಳಿ

ಎಸ್‌ಐಆರ್ ಎಂಬ ಗುಪ್ತ ಅಸ್ತ್ರದ ಬಗ್ಗೆ ಎಚ್ಚರ: ಪ್ರಧಾನಿ ಮೋದಿ ವೈಫಲ್ಯಗಳ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ

May 17, 2026

ಕಳೆದ ಮಳೆಗಾಲದ ಅತಿವೃಷ್ಟಿ, ತದ ನಂತರದ, ಚೀನಾದ ಕೊಡುಗೆಯಾಗಿ ಬಂದ ಮಹಾಮಾರಿಯಿಂದ ದೇಶ,ಜಗತ್ತು ತತ್ತರಿಸಿ ಹೋಗಿರುವ ಹೊತ್ತಲ್ಲಿ ಗಡಿ ವಿವಾದ ತಗಾದೆ ತೆಗೆದು ಭಾರತವನ್ನು ಸಂಕಷ್ಟಕ್ಕೆ ಸಿಕ್ಕಿಸುವ ತಯಾರಿಯಲ್ಲಿದೆ. ಚೀನಾ ಎಂಬ ಚಾಂಡಾಲ ದೇಶ ಲಡಾಖ್ ನ ಗಾಲ್ವಾನ ಕಣಿವೆಯ ಪಾನ್ ಗಾಂಗ್ ನಲ್ಲಿ  ಚೀನಾ ಸೈನಿಕರು ಭಾರತದ ಒಳ ನುಸುಳಲು ಪ್ರಯತ್ನಿಸುತ್ತ, ಭಾರತದ ಸೈನಿಕರ ಮೇಲೆ ಹಲ್ಲೆ ಮಾಡಿ ಭಾರತ ಇಪ್ಪತ್ತು ವೀರ ಸೈನಿಕರನ್ನು ಕೊಂದರು. ದಿಟ್ಟತನದ
ಪ್ರತ್ಯುತ್ತರವಾಗಿ ಭಾರತವೂ ಚೀನಾದ ನಲವತ್ತ ಮೂರು ಸೈನಿಕರನ್ನು ಕಾಲನ ಅರಮನೆಗಟ್ಟಿ , ಅರವತ್ತೆರಡರ ನೆಹರು
ಸರಕಾರ ಇದಲ್ಲ,!!!
ಈಗಿನ ಭಾರತ ಬದಲಾದ ಭಾರತ ಅನ್ನುವುದನ್ನು ತೋರಿಸಿ ಕೊಟ್ಟಿದೆ.

ತನ್ನ ಬಳುವಳಿಯಾದ ಕೊರೊನಾ ಮಹಾಮಾರಿಯಿಂದ ಜಗತ್ತಿನ ಎಲ್ಲಾ ದೇಶಗಳು ತನ್ನನ್ನು ಹದ್ದುಬಸ್ತಿನಲ್ಲಿಡುತ್ತದೆ ಎನ್ನುವುದನ್ನು ಮನಗಂಡು ಬೀಸುವ ಭಯಂಕರವಾದ ಲಾಟಿ ಏಟನಿಂದ ಪಾರಾಗಲು ಈ ಕಮ್ಯೂನಿಸ್ಟ್‌ ಚೀನಾ ನಮ್ಮ ಮೇಲೆ ಆಕ್ರಮಣ ಕ್ಕೆ ಸಜ್ಜಾಗುತ್ತಿದೆ.

ಆದರೆ ಜಗತ್ತು ಕಣ್ಣು ಮುಚ್ಚಿಕೊಂಡಿಲ್ಲ. ಈ ಬಾರಿ ಮಾತ್ರ ಜಗತ್ತಿನ ಎಲ್ಲಾ ದೇಶಗಳು ಒಂದಾಗಿ ಚೀನಾದ ಹೆಡೆಮುಡಿ ಕಟ್ಟಲಿದ್ದಾರೆ.
ಕಟ್ಟದಿದ್ದರೆ ಈ ಲೋಕಕ್ಕೆ ಕಲುಷಿತ ಆಹಾರ,ಕಳಪೆ ದಿನಬಳಕೆ ವಸ್ತುಗಳನ್ನು ಮಾರುತ್ತಾ ಕ್ಯಾನ್ಸರ್ ಎಂಬ ಮಹಾಮಾರಿ ಹಂಚುವ ಚೀನಾದಿಂದ ನಮ್ಮ ಮುಂದಿನ ಬದುಕು ಜರ್ಜರಿತವಾಗಲಿದೆ.
ಇಂದಲ್ಲ ಅಂದರೆ ಮುಂದಲ್ಲ
ಇದೀಗಲೇ ನಾವು ಚೀನಾವನ್ನು ಸಂಹಾರ ಮಾಡಬೇಕು

ಅದಕ್ಕಾಗಿ ದೇಶದ ಗಡಿಗೆ ಹೋಗುವ ಅಗತ್ಯವಿಲ್ಲ

ನಿಮ್ಮ ಒಂದೇ ಒಂದು ನಿರ್ಧಾರದಿಂದ ಅದು ಸಾಧ್ಯ.

ಹೌದು ಚೀನಾದ ಯಾವುದೇ ವಸ್ತುಗಳನ್ನು ನಾವು ಖರೀದಿಸುವುದನ್ನು ನಿಲ್ಲಿಸಬೇಕು. ಚೀನಾದ ಅತಿ ದೊಡ್ಡ ಮಾರುಕಟ್ಟೆ ಭಾರತ.
ಇಲ್ಲಿನ‌ ಸರಿಸುಮಾರು ಎಪ್ಪತ್ತು ಪ್ರತಿಶತ ಸಾಮಾನುಗಳು ಚೀನಾದ್ದಾಗಿದೆ. ಯಾವಾಗ ನಾವು ಅಲ್ಲಿನ ಸಾಮಾನುಗಳನ್ನು ಉಪಯೋಗಿಸುವುದು ನಿಲ್ಲಿಸುತ್ತೇವೋ ಅಲ್ಲಿಗೆ ಅರ್ಧ ಯುದ್ದ ಮುಗಿದಂತೆ. ನಮಗೆ ಸಾಮಾನುಗಳನ್ನು ಮಾರಿ ನಮ್ಮ ಹಣದಿಂದ ನಮ್ಮ ಸೈನಿಕರನ್ನು ಅವರು ಕೊಲ್ಲುವುದು ಎಂದೂ ಸಹಿಸಿಕೊಳ್ಳುವಂತಿಲ್ಲ.

ಅಂಗಡಿಗೆ ಹೋದಾಗ ನಾವು ಕೊಳ್ಳುವ ವಸ್ತುವಿನ expire date ನೋಡುತ್ತೇವೋ ಹಾಗೆಯೇ Made in China ಅನ್ನುವ ವಸ್ತುಗಳನ್ನು ನಾವು ಖರೀದಿಸುವುದಿಲ್ಲ ಎನ್ನುವ ಪ್ರತಿಜ್ಞೆ ಮಾಡುವ.!!!!
ಸ್ವಾವಲಂಬಿ ಭಾರತೀಯರಾಗೋಣ.

ಪ್ರಧಾನ ಮಂತ್ರಿಯವರ ಲೋಕಲ್ ಕ ವೋಕಲ್ ಬನೋ ಪರಿಕಲ್ಪನೆಯನ್ನು ಶಿರಸಾ ಪರಿಪಾಲಿಸೋಣ

ಸ್ವದೇಶಿ ವಸ್ತುಗಳ ದಾಸರಾಗುವ.

ನಮ್ಮ ಯುವಜನರಿಗೆ ದೇಶದ ಇಂದಿನ ಪರಿಸ್ಥಿತಿಯ ಅರಿವು ಮೂಡಿಸಿ ಅವರಲ್ಲಿ ದೇಶದ ಮೇಲಿನ ಪ್ರೀತಿಯನ್ನು ಹೆಚ್ಚಿಸೋಣ.

ದಿನಕ್ಕೊಂದು ಬಾರಿಯಾದರೂ ಸಾಮಾಜಿಕ ಜಾಲತಾಣದಲ್ಲಿ ಚೀನಾ ದೇಶದ ಸಾಮಾನು ಖರೀದಿಸದಂತೆ ಜನರಲ್ಲಿ ಎಚ್ಚರಿಕೆ ಮೂಡಿಸುವ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ಹತ್ತಿರದ ಅಂಗಡಿಗಳಿಗೆ ಹೋಗಿ ಬಹಳ ಪ್ರೀತಿಯಿಂದ ಚೀನಾದ ಸಾಮಾನುಗಳನ್ನು ಮಾರದಂತೆ ಕೈಮುಗಿದು ವಿನಂತಿಸುವ.

ಅವರು ಮಾರುವ ವಸ್ತುಗಳು ಹಾಗು ಆಹಾರದಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ವಿವರಿಸಲು ಪ್ರಯತ್ನಿಸುವ.

ಬಂಧುಗಳೇ….
ಸ್ವಾರ್ಥದ ಬದುಕಿಗೆ ಸ್ವಲ್ಪ ವಿರಾಮ ಇಟ್ಟು ಇನ್ನಾದರೂ ದೇಶಕ್ಕಾಗಿ ಬದುಕುವ ಕುರಿತು ಯೋಚಿಸುವ.

ಬರುವ ನಾಳೆಗಳು ನಮ್ಮ ಎಣಿಕೆಯಂತಿಲ್ಲ.ಮಹಾಮಾರಿಯ ಹೊಡೆತದಿಂದ ದೇಶದ ಪರಿಸ್ಥಿತಿ ಊಹಿಸಲು ಅಸಾಧ್ಯ ಎನ್ನುವಂತಾಗಿದೆ. ಇಂತಹ ಕಾಲಘಟ್ಟದಲ್ಲಿ ಎಷ್ಟು ಜಾಗ್ರತರಾಗಬೇಕು ಎನ್ನುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು.
ಮಹಾತ್ಮರ ಕನಸಿನ ಭಾರತ ಕಟ್ಟುವ ಕಾಯಕದಲ್ಲಿ ನಾವು ಒಂದಾಗಬೇಕು. ಇವತ್ತು ಜಗತ್ತು ಪ್ರಗತಿಪರ ಭಾರತವನ್ನು ಕಾಣುವ ದೃಷ್ಟಿ ಬದಲಾಗಿದೆ,ಭಾರತ ರಾಜಕೀಯ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕವಾಗಿ ಬಹಳಷ್ಟು ಮುಂದುವರಿದಿದೆ ಹಾಗೂ ಮುಂದುವರಿಯುತ್ತಾ ಇದೆ. ಅದನ್ನು ಸಹಿಸದ ಅಕ್ಕಪಕ್ಕದ ದೇಶಗಳು ನಮ್ಮಮೇಲೆ ಆಕ್ರಮಣಕಾರಿ ಹೋರಾಟಕ್ಕೆ ಸಿದ್ದವಾಗಿವೆ.

ಈಚೆ ಮನೆಯವಳು ಓಲೆ ಇಟ್ಕೊಂಡರೆ ಆಚೆ ಮನೆಯವಳು ಕಿವಿ ಕಿತ್ಕೊಂಡ್ಲು ಅಂದ ಹಾಗೆ ಭಾರತ ಇದೀಗ ಜಗತ್ತಿನ ಹೆಚ್ಚಿನ ದೇಶಗಳ ಪ್ರೀತಿ ಪಾತ್ರರಾಗಿರುವುದು ಚೀನಾಕ್ಕೆ ಸಹಿಸಲಾಗಲ್ಲ.

ಭಾರತದ ನೂರಾಮೂವತ್ತೈದು ಕೋಟಿ ಜನರು ಮನ. ಮಾಡಿದಲ್ಲಿ ಯಾರೂ ನಮ್ಮತ್ತ ಕಣ್ಣೆತ್ತಿ ಸಹ ನೋಡಲಾರರು.

ಸ್ನೇಹಿತರೇ ಚೀನಾ ನಮ್ಮ ಮೇಲೆ ಆಕ್ರಮಣ ಮಾಡುತ್ತೆ ಅಂತ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಅಲ್ಲಿನ ದೇಶದ ಸೈನಿಕರು ನಮ್ಮಂತೆ ದೇಶಪ್ರೇಮಿಗಳಲ್ಲ.ಅವರಲ್ಲಿ ಯುದ್ದ ಮಾಡುವ ಕೌಶಲ್ಯಗಳಿಲ್ಲ. ಅಲ್ಲಿನ ಸೈನಿಕರಿಗೆ ಯಾಕೆ ದೇಶಪ್ರೇಮ ಕಡಿಮೆ ಅಂದರೆ ಅವರುಗಳು ಸರಕಾರಿ ನೌಕರರಂತೆ ಸರಕಾರದ ಕೆಲಸ ಮಾಡುತ್ತಾರೆಯೇ ಹೊರತು ಭಾರತೀಯ ಸೈನಿಕರಂತೆ ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಗಂಡೆದೆ ಅವರಿಗಿಲ್ಲ. ಅಲ್ಲಿನ ಸೈನಿಕರು ಹಾಗು ಪ್ರಜೆಗಳು ಕಮ್ಯೂನಿಸ್ಟ್‌ ಎಡಬಿಡಂಗಿ ಸರಕಾರದಿಂದ ರೋಸಿ ಹೋಗಿವೆ. ಅಲ್ಲಿನ ತಂದೆ ತಾಯಂದಿರಿಗೆ ಒಬ್ಬನೇ ಒಬ್ಬ ಮಗನಿರುವುದರಿಂದ ಅಲ್ಲಿನ ಜನರು ಯುದ್ದಕ್ಕೆ ಮನಮಾಡುವಂತಿಲ್ಲ ಅನ್ನುವುದು ಸಹ ಸತ್ಯ.

ಒಂದು ಕಟುವಾದ ಸತ್ಯವನ್ನು ಈ ಹೊತ್ತಲ್ಲಿ ನಾವುಗಳು ಅರಗಿಸಿಕೊಳ್ಳಬೇಕು ಅರವತ್ತೆರಡರಲ್ಲಿ ಚೀನಾ ಭಾರತದ ಯುದ್ಧ ಆದಾಗ ಇಲ್ಲಿನ ಕೆಲವು ಎಡಬಿಡಂಗಿ ಕಮ್ಯೂನಿಸ್ಟ್‌ ಪಾಪಿಗಳು ದೇಶದ ವಿರುದ್ದ ಕೆಲಸ ಮಾಡಿದ್ದರು. ಅವರ ಸಂತಾನ ಇವತ್ತಿಗೂ ಅಲ್ಲಲ್ಲಿ ಅಂದರೆ ನಮ್ಮ ಅಕ್ಕಪಕ್ಕ ಇದ್ದು ನಮ್ಮ ದೇಶದ ಸಿದ್ದಾಂತ ಹಾಗು ಸರಕಾರದ ವಿರುದ್ದ ಜನರನ್ನು ಎತ್ತಿ ಕಟ್ಟಲಿದ್ದಾರೆ.
ಅಂತಹ ನೀಚರಿಂದ ನಾವುಗಳು ಜಾಗರೂಕರಾಗುವುದು ಅಗತ್ಯ.

ಭಾರತೀಯರೇ,

ದೇಶ ಮೊದಲು – ಜಾತಿಯಲ್ಲ

ದೇಶ ಮೊದಲು – ಧರ್ಮವಲ್ಲ

ದೇಶ ಮೊದಲು – ಊರುಕೇರಿಯಲ್ಲ

ಭಾರತಾಂಭೆಯಯ ರಕ್ಷಣೆಯಲ್ಲಿ ಎಂದೂ ರಾಜಿ ಇಲ್ಲ.

ರಾಷ್ಟ್ರ ಪ್ರೇಮ ಸರ್ವ ಶ್ರೇಷ್ಠ ಪ್ರೇಮ.

ವಂದೇ ಮಾತರಂ

ಜೈ ಹಿಂದ್
🙏🙏🙏🙏🙏🙏🙏🙏

Tags: ban china goodsChinacoronavirusIndia-China border
ShareTweetSendShare
Join us on:

Related Posts

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

by Shwetha
May 17, 2026
0

ದಾಖಲೆಗಳ ಸರದಾರ, ಟೀಮ್ ಇಂಡಿಯಾದ ರನ್ ಮಷಿನ್ ಮತ್ತು ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕಿಂಗ್ ವಿರಾಟ್ ಕೊಹ್ಲಿ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಕ್ರಿಕೆಟ್ ಭವಿಷ್ಯ...

ಎಸ್‌ಐಆರ್ ಎಂಬ ಗುಪ್ತ ಅಸ್ತ್ರದ ಬಗ್ಗೆ ಎಚ್ಚರ: ಪ್ರಧಾನಿ ಮೋದಿ ವೈಫಲ್ಯಗಳ ವಿರುದ್ಧ ಡಿಕೆ ಶಿವಕುಮಾರ್  ವಾಗ್ದಾಳಿ

ಎಸ್‌ಐಆರ್ ಎಂಬ ಗುಪ್ತ ಅಸ್ತ್ರದ ಬಗ್ಗೆ ಎಚ್ಚರ: ಪ್ರಧಾನಿ ಮೋದಿ ವೈಫಲ್ಯಗಳ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ

by Shwetha
May 17, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ವೈಫಲ್ಯಗಳ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ....

ನಾನೇ ಖುದ್ದಾಗಿ ಪಕ್ಷದ ಆಫೀಸ್ ಗೆ ಪೇಂಟ್ ಮಾಡ್ತೀನಿ : ಹೋಗುವವರು ಹೋಗಲಿ ಎಂದು ಗುಡುಗಿದ ದೀದಿ

ನಾನೇ ಖುದ್ದಾಗಿ ಪಕ್ಷದ ಆಫೀಸ್ ಗೆ ಪೇಂಟ್ ಮಾಡ್ತೀನಿ : ಹೋಗುವವರು ಹೋಗಲಿ ಎಂದು ಗುಡುಗಿದ ದೀದಿ

by Shwetha
May 17, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಎಂದೂ ಕಾಣದಂತಹ ಭಾರಿ ಹಿನ್ನಡೆಯನ್ನು ತೃಣಮೂಲ ಕಾಂಗ್ರೆಸ್ ಅನುಭವಿಸಿದೆ. ಬಂಗಾಳದ ಅಧಿಪತಿ ಎಂದೇ ಕರೆಯಲ್ಪಡುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈಗ...

ಮೇ 26ಕ್ಕೆ ಕೇರಳ ಪ್ರವೇಶಿಸಲಿದೆ ಮುಂಗಾರು

ಮೇ 26ಕ್ಕೆ ಕೇರಳ ಪ್ರವೇಶಿಸಲಿದೆ ಮುಂಗಾರು

by Shwetha
May 17, 2026
0

ದೇಶದ ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ...

SIR ಪ್ರಕ್ರಿಯೆ: ರಾಜ್ಯದಲ್ಲಿ 86% ಮ್ಯಾಪಿಂಗ್ ಕೆಲಸ ಪೂರ್ಣ  86%

SIR ಪ್ರಕ್ರಿಯೆ: ರಾಜ್ಯದಲ್ಲಿ 86% ಮ್ಯಾಪಿಂಗ್ ಕೆಲಸ ಪೂರ್ಣ 86%

by Shwetha
May 17, 2026
0

ಅನೂಪ್ ಕುಮಾರ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಶೇ.86 ರಷ್ಟು ಮ್ಯಾಪಿಂಗ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram