ADVERTISEMENT
Wednesday, July 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಯಾವ ಮುಖ ಇಟ್ಟುಕೊಂಡು ನಿಲೇಕಣಿ ನೇತೃತ್ವದ ಕಾರ್ಯಪಡೆ ರಚಿಸಿದ್ದೀರಿ? ಹಳೆ ಶಿಫಾರಸುಗಳೇ ಜಾರಿಯಾಗಿಲ್ಲ- ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡ

Shwetha by Shwetha
July 29, 2026
in ದೇಶ - ವಿದೇಶ, National, Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಎಸಗಿರುವ ಸಾಲು ಸಾಲು ಅಕ್ರಮಗಳ ಬೆನ್ನಲ್ಲೇ ಕೇಂದ್ರ ಸರ್ಕಾರವು ನಂದನ್ ನಿಲೇಕಣಿ ನೇತೃತ್ವದಲ್ಲಿ ನೂತನ ಕಾರ್ಯಪಡೆ ರಚಿಸಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಟೀಕಿಸಿದೆ. ಹಳೆಯ ಸಮಿತಿಗಳ ಶಿಫಾರಸುಗಳನ್ನೇ ಜಾರಿ ಮಾಡದ ಸರ್ಕಾರ, ಈಗ ಹೊಸ ಸಮಿತಿ ರಚಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಿಡಿಕಾರಿದೆ.

ಹಳೆಯ ಶಿಫಾರಸುಗಳು ಕಸದ ಬುಟ್ಟಿಗೆ

Related posts

SIR ಅವಧಿ ವಿಸ್ತರಣೆ; ಚುನಾವಣಾ ಆಯೋಗದ ನಿರ್ಧಾರ ಎಂದ ಹೈಕೋರ್ಟ್

SIR ಅವಧಿ ವಿಸ್ತರಣೆ; ಚುನಾವಣಾ ಆಯೋಗದ ನಿರ್ಧಾರ ಎಂದ ಹೈಕೋರ್ಟ್

July 29, 2026
guru-purnima-veda-vyasa-jayanthi-katil-jnaneshwar-tantri-2026

Astro- ಗುರುಪೂರ್ಣಿಮೆಯ‌ಲ್ಲಿ “ವೇದವ್ಯಾಸರ” ಸ್ಮರಣೆ…!

July 29, 2026

ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ಹಿಂದೆ ಕೆ ರಾಧಾಕೃಷ್ಣನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ್ದ ಶಿಫಾರಸುಗಳ ಬಗ್ಗೆ ಪ್ರಶ್ನಿಸಿದ್ದಾರೆ. ಆ ಸಮಿತಿಯು ಒಟ್ಟು 101 ಮಹತ್ವದ ಶಿಫಾರಸುಗಳನ್ನು ನೀಡಿತ್ತು. ಅದರಲ್ಲಿ 60 ಶಿಫಾರಸುಗಳನ್ನು ತಕ್ಷಣವೇ ಜಾರಿಗೆ ತರಬೇಕಿತ್ತು ಮತ್ತು 30 ಸಲಹೆಗಳನ್ನು ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಿತ್ತು. ಆದರೆ ಮೋದಿ ಸರ್ಕಾರ ಈ ವರದಿಗಳನ್ನು ಕಸದ ಬುಟ್ಟಿಗೆ ಹಾಕಿದೆ. ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಈಗ ನಂದನ್ ನಿಲೇಕಣಿ ನೇತೃತ್ವದಲ್ಲಿ ಹೊಸ ಕಾರ್ಯಪಡೆ ರಚಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೊಟ್ಟ ಮಾತು ತಪ್ಪಿದ ಕೇಂದ್ರ ಸರ್ಕಾರ

ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು 2024ರ ಡಿಸೆಂಬರ್‌ನಲ್ಲಿ ಒಂದು ಘೋಷಣೆ ಮಾಡಿದ್ದರು. ಸಮಿತಿಯ ಶಿಫಾರಸಿನಂತೆ ಎನ್‌ಟಿಎ ಇನ್ನು ಮುಂದೆ ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದರು. ಆದರೆ ವಾಸ್ತವದಲ್ಲಿ 2025 ರಿಂದ 2026ರ ಅವಧಿಯಲ್ಲಿ ಎನ್‌ಟಿಎ ಹಲವು ನೇಮಕಾತಿ ಪರೀಕ್ಷೆಗಳನ್ನು ನಡೆಸಿದೆ. ಸರ್ಕಾರದ ಮಾತಿಗೆ ಮತ್ತು ಕೃತಿಗೆ ಯಾವುದೇ ಸಂಬಂಧವಿಲ್ಲದಂತಾಗಿದೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.

ಎನ್‌ಟಿಎ ಸಂಸ್ಥೆಗೆ ಇಂದಿಗೂ ಒಬ್ಬ ಪೂರ್ಣಾವಧಿ ಮಹಾನಿರ್ದೇಶಕರನ್ನು ನೇಮಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಮರ್ಪಕ ನಾಯಕತ್ವವಿಲ್ಲದೆ ಸಂಸ್ಥೆಯು ಹಳ್ಳ ಹಿಡಿಯುತ್ತಿದೆ. ಸುಧಾರಣೆಗಳ ಹೆಸರಿನಲ್ಲಿ ಕೇವಲ ಸಮಿತಿಗಳನ್ನು ರಚಿಸುವ ಮೂಲಕ ಕಾಲಹರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕೇಂದ್ರ ಸರ್ಕಾರ, ಮೊದಲು ಹಳೆಯ ಶಿಫಾರಸುಗಳನ್ನು ಜಾರಿ ಮಾಡಲಿ ಎಂದು ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

ShareTweetSendShare
Join us on:

Related Posts

SIR ಅವಧಿ ವಿಸ್ತರಣೆ; ಚುನಾವಣಾ ಆಯೋಗದ ನಿರ್ಧಾರ ಎಂದ ಹೈಕೋರ್ಟ್

SIR ಅವಧಿ ವಿಸ್ತರಣೆ; ಚುನಾವಣಾ ಆಯೋಗದ ನಿರ್ಧಾರ ಎಂದ ಹೈಕೋರ್ಟ್

by Shwetha
July 29, 2026
0

SIR ಪ್ರಕ್ರಿಯೆಯ ಅವಧಿ ವಿಸ್ತರಣೆ ಮಾಡಬೇಕೇ ಬೇಡವೇ ಎಂಬುದು ಚುನಾವಣಾ ಆಯೋಗದ (ECI) ವಿವೇಚನೆಗೆ ಬಿಟ್ಟ ವಿಷಯ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ದೇವನೂರು...

guru-purnima-veda-vyasa-jayanthi-katil-jnaneshwar-tantri-2026

Astro- ಗುರುಪೂರ್ಣಿಮೆಯ‌ಲ್ಲಿ “ವೇದವ್ಯಾಸರ” ಸ್ಮರಣೆ…!

by admin
July 29, 2026
0

29-07-2026 ಬುಧವಾರ ಗುರು ಪೂರ್ಣಿಮೆ. ಈ ಶುಭ ದಿನದಂದು ಮಹರ್ಷಿ ವೇದ ವ್ಯಾಸರು ಜನಿಸಿದ ಕಾರಣ ಇದನ್ನು ವ್ಯಾಸ ಜಯಂತಿ ಅಥವಾ ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ....

ಕೊಟ್ಟ ಮಾತು ತಪ್ಪಿದ್ರೆ ನಿಮ್ಮ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಿಜೆಪಿ ಸೆನ್ಸೇಷನ್ ಇರ್ಫಾನ್ ನೇರ ಎಚ್ಚರಿಕೆ

ಕೊಟ್ಟ ಮಾತು ತಪ್ಪಿದ್ರೆ ನಿಮ್ಮ ವಿರುದ್ಧವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ: ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸಿಜೆಪಿ ಸೆನ್ಸೇಷನ್ ಇರ್ಫಾನ್ ನೇರ ಎಚ್ಚರಿಕೆ

by Shwetha
July 29, 2026
0

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯ ಮೂಲಕ ಇಡೀ ದೇಶದ ಗಮನ ಸೆಳೆದಿರುವ ಬೀದಿಬದಿ ವ್ಯಾಪಾರಿ ಮೊಹಮ್ಮದ್ ಇರ್ಫಾನ್ ಈಗ ವಿಪಕ್ಷ...

ಮುಖ್ಯಮಂತ್ರಿ ಸೂಚನೆಗೆ ಖಾಸಗಿ ಶಾಲೆಗಳ ಆಕ್ಷೇಪ; ಶಿಕ್ಷಣ ವಲಯದಲ್ಲಿ ಚರ್ಚೆ

ಮುಖ್ಯಮಂತ್ರಿ ಸೂಚನೆಗೆ ಖಾಸಗಿ ಶಾಲೆಗಳ ಆಕ್ಷೇಪ; ಶಿಕ್ಷಣ ವಲಯದಲ್ಲಿ ಚರ್ಚೆ

by Shwetha
July 29, 2026
0

ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ಅದರಂತೆ, ನಗರ ಪ್ರದೇಶದಲ್ಲಿ ವಾರ್ಷಿಕ ₹50,000ಕ್ಕಿಂತ ಹೆಚ್ಚು ಶುಲ್ಕ...

ಕನ್ನಡಿಗರ ತೆರಿಗೆ ಹಣದಲ್ಲಿ ಪೆರಿಯಾರ್ ಹೆಸರೇ? ಕನ್ನಡಪರ ಸಂಘಟನೆಗಳ ಉಗ್ರ ಹೋರಾಟಕ್ಕೆ ಮಣಿದ ಜಿಬಿಎ: ಭವನದ ಹೆಸರು ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್ ಎಂದು ಮರುನಾಮಕರಣ

ಕನ್ನಡಿಗರ ತೆರಿಗೆ ಹಣದಲ್ಲಿ ಪೆರಿಯಾರ್ ಹೆಸರೇ? ಕನ್ನಡಪರ ಸಂಘಟನೆಗಳ ಉಗ್ರ ಹೋರಾಟಕ್ಕೆ ಮಣಿದ ಜಿಬಿಎ: ಭವನದ ಹೆಸರು ಇಂದಿರಾ ಗಾಂಧಿ ಕನ್ವೆನ್ಷನ್ ಹಾಲ್ ಎಂದು ಮರುನಾಮಕರಣ

by Shwetha
July 29, 2026
0

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಸಮುದಾಯ ಭವನವೊಂದಕ್ಕೆ ತಮಿಳುನಾಡಿನ ನಾಯಕ ಪೆರಿಯಾರ್ ಹೆಸರಿಟ್ಟಿದ್ದ ಜಿಬಿಎ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram