ಭೋಪಾಲ್: ಕಾಂಗ್ರೆಸ್ ಸರ್ಕಾರವಿರುವ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಗರಿಗೆದರಿದೆ. ಆಪರೇಷನ್ ಹೋಳಿ ಹೆಸರಿನಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಬಿಜೆಪಿ ತೆಕ್ಕೆಯಲ್ಲಿದ್ದ ಶಾಸಕರ ಪೈಕಿ ಆರು ಮಂದಿ ಕಾಂಗ್ರೆಸ್ ಶಾಸಕರು ವಾಪಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಮಧ್ಯ ಪ್ರದೇಶದ ಸರ್ಕಾರಕ್ಕೆ ಬೆಂಬಲ ನೀಡಿದ್ದ ಶಾಸಕರೂ ಸೇರಿದಂತೆ ಒಟ್ಟು ಆರು ಶಾಸಕರು ಐಟಿಸಿ ರೆಸಾರ್ಟ್ ಗೆ ವಾಪಸ್ ಆಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ ಉಳಿದ ಮೂರು ಕಾಂಗ್ರೆಸ್ ಶಾಸಕರು ಮತ್ತು ಓರ್ವ ಪಕ್ಷೇತರ ಶಾಸಕ ಸೇರಿದಂತೆ ಒಟ್ಟು ನಾಲ್ಕು ಶಾಸಕರು ಮಾತ್ರ ಇನ್ನು ನಾಪತ್ತೆಯಾಗಿದ್ದು, ಅವರು ಕರ್ನಾಟಕಕ್ಕೆ ಶಿಫ್ಟ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸದ್ಯ ಕಾಂಗ್ರೆಸ್ ಶಾಸಕರಿರುವ ರೆಸಾರ್ಟ್ ಗೆ ಸಾನಿವ್ ಸಿಂಗ್ ಕುಶ್ವಾ (ಬಿಎಸ್ಪಿ), ರಾಂಬೈ ಠಾಕೂರ್ (ಅಮಾನತುಗೊಂಡ ಬಿಎಸ್ಪಿ ಶಾಸಕ), ರಾಜೇಶ್ ಶುಕ್ಲಾ (ಎಸ್ಪಿ), ರಣವೀರ್ ಜಾತವ್, ಕಮಲೇಶ್ ಜಾತವ್ ಮತ್ತು ಐದಾಲ್ ಸಿಂಗ್ ಕನ್ಸಾನಾ (ಎಲ್ಲಾ ಕಾಂಗ್ರೆಸ್ ಶಾಸಕರು) ವಾಪಸ್ ಆಗಿದ್ದಾರೆ. ಈ ಎಲ್ಲರೂ ಗುರುಗ್ರಾಮದಲ್ಲಿರುವ ಪ್ರೀಮಿಯರ್ ಹೊಟೆಲ್ ನಲ್ಲಿ ಬಿಜೆಪಿ ನಾಯಕರ ತೆಕ್ಕೆಯಲ್ಲಿದ್ದರು ಎನ್ನಲಾಗಿದೆ.
ಉಳಿದಂತೆ ಎಚ್.ಎಸ್. ಡ್ಯಾಂಗ್, ಬಿಸಾಹು ಲಾಲ್ ಸಿಂಗ್ ಮತ್ತು ಇನ್ನೊಬ್ಬ ಕಾಂಗ್ರೆಸ್ ಶಾಸಕ ಮತ್ತು ಸ್ವತಂತ್ರ ಶಾಸಕ ಸುರೇಂದ್ರ ಸಿಂಗ್ ಶೇರಾ ಅವರನ್ನು ಬಿಜೆಪಿ ನಾಯಕರು ಕರ್ನಾಟಕ್ಕೆ ಕರೆದುಕೊಂಡು ಬಂದ್ದಿದ್ದು, ಬೆಂಗಳೂರು ಅಥವಾ ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ ಬಿಎಂಟಿಸಿ ದರ ಏರಿಕೆ ಬಗ್ಗೆ ಸಚಿವ ಬೈರತಿ ಸುರೇಶ್ ನೀಡಿದ್ರು ಶಾಕಿಂಗ್ ಸುದ್ದಿ
ಬೆಂಗಳೂರು: ರಾಜಧಾನಿಯ ಜನಸಾಮಾನ್ಯರ ಸಾರಿಗೆಯಾದ ಬಿಎಂಟಿಸಿ ಬಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದ ಬಸ್ ಟಿಕೆಟ್ ದರ...








