ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ವರ್ಷಾಂತ್ಯದ ಪ್ರವಾಸಕ್ಕೆ ಮೇಕ್‌ ಮೈ ಟ್ರಿಪ್ ಭರ್ಜರಿ ಆಫರ್: ನ.14ರಿಂದ ಟ್ರಾವೆಲ್ ಸೇಲ್ ಆರಂಭ!

admin by admin
November 16, 2026
in National, Newsbeat, ದೇಶ - ವಿದೇಶ
makemytrip-travel-ka-muhurat-sale-november-year-end-travel-offers

makemytrip-travel-ka-muhurat-sale-november-year-end-travel-offers

Share on FacebookShare on TwitterShare on WhatsappShare on Telegram

ಬೆಂಗಳೂರು: ಡಿಸೆಂಬರ್ ರಜೆ ಹಾಗೂ ವರ್ಷಾಂತ್ಯದ ಪ್ರವಾಸಕ್ಕೆ ತೆರಳುವವರಿಗೆ ಟಿಕೆಟ್ ಮತ್ತು ಹೋಟೆಲ್ ದರ ಏರಿಕೆಯ ಆತಂಕ ತಪ್ಪಿಸಲು ಮೇಕ್‌ಮೈಟ್ರಿಪ್ ಸಂಸ್ಥೆಯು ‘ಟ್ರಾವೆಲ್ ಕಾ ಮುಹೂರ್ತ್ ಸೇಲ್’ನ ಎರಡನೇ ಆವೃತ್ತಿಯನ್ನು ಘೋಷಿಸಿದೆ. ನವೆಂಬರ್ 14ರಿಂದ ಈ ಬೃಹತ್ ಟ್ರಾವೆಲ್ ಸೇಲ್ ಆರಂಭವಾಗಲಿದ್ದು, ದೇಶದ 30,000ಕ್ಕೂ ಹೆಚ್ಚು ಹಾಗೂ ವಿದೇಶದ 3,500ಕ್ಕೂ ಅಧಿಕ ಹೋಟೆಲ್, ರೆಸಾರ್ಟ್, ಹೋಮ್‌ಸ್ಟೇ ಮತ್ತು ವಿಲ್ಲಾಗಳು ಇದರಲ್ಲಿ ಭಾಗಿಯಾಗಿವೆ.

ಜೊತೆಗೆ 35 ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮತ್ತು 8 ಪ್ರಮುಖ ಬ್ಯಾಂಕ್‌ಗಳು ಕೈಜೋಡಿಸಿರುವುದರಿಂದ ಪ್ರಯಾಣಿಕರಿಗೆ ಭರ್ಜರಿ ರಿಯಾಯಿತಿ ಸಿಗಲಿದೆ.

Related posts

swiggy-eatright-healthy-food-orders-increased-40-percent-college-students

ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದ ‘ಹೆಲ್ದಿ ಫುಡ್’ ಕ್ರೇಜ್, ‘ಈಟ್‌ರೈಟ್’ ಆರ್ಡರ್‌ನಲ್ಲಿ ಬರೋಬ್ಬರಿ 40% ಏರಿಕೆ

November 16, 2026
jawa-yezdi-bsa-new-350cc-bobber-scrambler-bikes-features

ಎರಡು ಹೊಸ 350 ಸಿಸಿ ಬೈಕ್‌ಗಳನ್ನು ಅನಾವರಣಗೊಳಿಸಿದ ಜಾವಾ ಯೆಜ್ಡಿ, ಏನಿದರ ವಿಶೇಷತೆ?

November 16, 2026

ಈ ಸೇಲ್ ಮೂಲಕ ಪ್ರಯಾಣಿಕರು ಒಂದೇ ವೇದಿಕೆಯಲ್ಲಿ ವಿಮಾನ, ಬಸ್, ರೈಲು, ಕ್ಯಾಬ್, ಹೋಟೆಲ್, ಹೋಮ್‌ಸ್ಟೇ, ಹಾಲಿಡೇ ಪ್ಯಾಕೇಜ್‌ಗಳು ಮಾತ್ರವಲ್ಲದೆ ಫಾರೆಕ್ಸ್ (ವಿದೇಶಿ ವಿನಿಮಯ) ಮತ್ತು ವೀಸಾ ಸೇವೆಗಳ ಮೇಲೂ ಆಕರ್ಷಕ ಡೀಲ್‌ಗಳನ್ನು ಪಡೆಯಬಹುದು.

ದೇಶೀಯ ಪ್ರವಾಸಿ ತಾಣಗಳಾದ ಕರ್ನಾಟಕದ ಕೊಡಗು, ಗೋವಾ, ಕೇರಳ, ರಾಜಸ್ಥಾನ, ಅಂಡಮಾನ್, ಲಕ್ಷದ್ವೀಪ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಂದ ಹಿಡಿದು ವಿದೇಶದ ದುಬೈ, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಂ, ಜಪಾನ್, ಮಲೇಷ್ಯಾ, ಶ್ರೀಲಂಕಾ, ಯುಕೆ ಹಾಗೂ ಯುರೋಪ್ ಪ್ರವಾಸಕ್ಕೂ ವಿಶೇಷ ಕೊಡುಗೆಗಳಿವೆ.

ಅಲ್ಲದೆ, ಯುಎಇಯ ಫೆರಾರಿ ವರ್ಲ್ಡ್, ಸಿಂಗಾಪುರದ ಯೂನಿವರ್ಸಲ್ ಸ್ಟುಡಿಯೋಸ್, ಮ್ಯಾಡಮ್ ಟುಸ್ಸಾಡ್ಸ್, ನೈಟ್ ಸಫಾರಿ ಮತ್ತು ಸಿಂಗಾಪುರ ಝೂ ಹಾಗೂ ವಿಯೆಟ್ನಾಂನ ಸನ್ ವರ್ಲ್ಡ್ ಬಾ ನಾ ಹಿಲ್ಸ್‌ನಂತಹ ವಿಶ್ವಪ್ರಸಿದ್ಧ ತಾಣಗಳ ಟಿಕೆಟ್ ಮೇಲೂ ರಿಯಾಯಿತಿ ಲಭ್ಯವಿದೆ.

ಮೇಕ್‌ಮೈಟ್ರಿಪ್‌ನ ಲಾಯಲ್ಟಿ ಸದಸ್ಯರಾದ ‘ಎಂಎಂಟಿ ಬ್ಲ್ಯಾಕ್’ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 13ರಿಂದಲೇ ಸೇಲ್‌ಗೆ ಅವಕಾಶ ಸಿಗಲಿದ್ದು, ಪ್ರತಿ ಶುಕ್ರವಾರ ವಿಶೇಷ ‘ಬ್ಲ್ಯಾಕ್ ಫ್ರೈಡೇ ಡೀಲ್ಸ್’ ಕೂಡ ಇರಲಿದೆ.

ಇನ್ನು ಎಲ್ಲಾ ಗ್ರಾಹಕರಿಗಾಗಿ ಪ್ರತಿದಿನ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಸೀಮಿತ ಅವಧಿಯ ‘ಲೈಟ್ನಿಂಗ್ ಡ್ರಾಪ್ಸ್’ ಆಫರ್‌ಗಳು ಹಾಗೂ ‘ಒನ್‌ಸರ್ಕಲ್’ ರಿವಾರ್ಡ್ಸ್ ಸದಸ್ಯರಿಗೆ ಹೆಚ್ಚುವರಿ ಲಾಭ ಸಿಗಲಿದೆ.

ಈ ಅಭಿಯಾನಕ್ಕಾಗಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ‘ಅಬ್ ತೋ ಜಾನಾ ಪಡೇಗಾ’ ಎಂಬ ಆರು ಜಾಹೀರಾತುಗಳನ್ನೂ ‘ಟ್ಯಾಲೆಂಟೆಡ್’ ಸಂಸ್ಥೆ ರೂಪಿಸಿದೆ.

ಹಬ್ಬದ ಶಾಪಿಂಗ್ ಸೇಲ್‌ಗಳಂತೆಯೇ ಪ್ರವಾಸಕ್ಕೂ ಒಂದು ನಿಗದಿತ ಯೋಜನಾ ಸಮಯ ಇರಬೇಕು ಹಾಗೂ ಗ್ರಾಹಕರು ಡಿಸೆಂಬರ್ ದರ ಏರಿಕೆಯ ಭಯವಿಲ್ಲದೆ ಮುಂಚಿತವಾಗಿಯೇ ಆತ್ಮವಿಶ್ವಾಸದಿಂದ ಬುಕಿಂಗ್ ಮಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ಮೇಕ್‌ಮೈಟ್ರಿಪ್ ಸಿಒಒ ರಾಜ್ ರಿಷಿ ಸಿಂಗ್ ತಿಳಿಸಿದ್ದಾರೆ.

ಈ ಸೇಲ್‌ನಲ್ಲಿ ಏರ್ ಇಂಡಿಯಾ, ಇಂಡಿಗೋ, ಆಕಾಶ ಏರ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಎತಿಹಾದ್, ಕತಾರ್ ಏರ್‌ವೇಸ್, ಸಿಂಗಾಪುರ ಏರ್‌ಲೈನ್ಸ್, ಬ್ರಿಟಿಷ್ ಏರ್‌ವೇಸ್, ಲುಫ್ತಾನ್ಸಾ, ಏರ್ ಫ್ರಾನ್ಸ್, ಸ್ವಿಸ್, ಟರ್ಕಿಶ್ ಏರ್‌ಲೈನ್ಸ್ ಹಾಗೂ ವರ್ಜಿನ್ ಅಟ್ಲಾಂಟಿಕ್‌ನಂತಹ 35 ಏರ್‌ಲೈನ್ಸ್‌ಗಳು ಪಾಲ್ಗೊಂಡಿವೆ.

ಹಾಗೆಯೇ ತಾಜ್, ದಿ ಲೀಲಾ, ಐಟಿಸಿ, ಕ್ಲಬ್ ಮಹೀಂದ್ರಾ, ಲೆಮನ್ ಟ್ರೀ, ಜಿಂಜರ್, ರಾಯಲ್ ಆರ್ಕಿಡ್, ಸರೋವರ್, ಸ್ಟರ್ಲಿಂಗ್, ವಿಂಡ್‌ಹ್ಯಾಮ್ ಹೋಟೆಲ್ಸ್ ಜೊತೆಗೆ ಸ್ಟೇವಿಸ್ಟಾ, ಜೋಸ್ಟೆಲ್, ಸ್ಯಾಫ್ರನ್‌ಸ್ಟೇಸ್, ಲೋಹೊನೋ ಸ್ಟೇಸ್, ಅಮಾ ಸ್ಟೇಸ್ ಅಂಡ್ ಟ್ರೇಲ್ಸ್ ಮತ್ತು ಗೋಸ್ಟಾಪ್ಸ್‌ನಂತಹ ಜನಪ್ರಿಯ ಹೋಮ್‌ಸ್ಟೇ ಬ್ರ್ಯಾಂಡ್‌ಗಳೂ ಭಾಗಿಯಾಗಿವೆ.

ಬ್ಯಾಂಕಿಂಗ್ ಕೊಡುಗೆಗಳಿಗಾಗಿ ಎಚ್‌ಡಿಎಫ್‌ಸಿ, ಐಸಿಐಸಿಐ, ಆಕ್ಸಿಸ್, ಕೊಟಕ್ ಮಹೀಂದ್ರಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೆಸ್ ಬ್ಯಾಂಕ್, ಡಿಬಿಎಸ್ ಮತ್ತು ಆರ್‌ಬಿಎಲ್ ಬ್ಯಾಂಕ್‌ಗಳು ಕೈಜೋಡಿಸಿವೆ.

Tags: #MakeMyTrip #TravelSale #TravelKaMuhurat #ವರ್ಷಾಂತ್ಯದಪ್ರವಾಸ #ಪ್ರವಾಸಆಫರ್ #ಟ್ರಾವೆಲ್‌ಸೇಲ್ #ಹೋಟೆಲ್‌ಬುಕಿಂಗ್ #ವಿಮಾನಟಿಕೆಟ್ #HolidayOffers #TravelOffersIndia #YearEndTravel #KannadaNews
ShareTweetSendShare
Join us on:

Related Posts

swiggy-eatright-healthy-food-orders-increased-40-percent-college-students

ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಿದ ‘ಹೆಲ್ದಿ ಫುಡ್’ ಕ್ರೇಜ್, ‘ಈಟ್‌ರೈಟ್’ ಆರ್ಡರ್‌ನಲ್ಲಿ ಬರೋಬ್ಬರಿ 40% ಏರಿಕೆ

by admin
November 16, 2026
0

ಬೆಂಗಳೂರು: ಕಾಲೇಜು ಕ್ಯಾಂಪಸ್‌ಗಳೆಂದರೆ ಕೇವಲ ಜಂಕ್ ಫುಡ್‌ಗಳೇ ನೆನಪಾಗುತ್ತಿದ್ದ ಕಾಲವೊಂದಿತ್ತು. ಆದರೆ ಈಗ ವಿದ್ಯಾರ್ಥಿಗಳು ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರದತ್ತ ಮುಖ ಮಾಡಿದ್ದಾರೆ. ಆನ್‌ಲೈನ್ ಫುಡ್ ಡೆಲಿವರಿ...

jawa-yezdi-bsa-new-350cc-bobber-scrambler-bikes-features

ಎರಡು ಹೊಸ 350 ಸಿಸಿ ಬೈಕ್‌ಗಳನ್ನು ಅನಾವರಣಗೊಳಿಸಿದ ಜಾವಾ ಯೆಜ್ಡಿ, ಏನಿದರ ವಿಶೇಷತೆ?

by admin
November 16, 2026
0

ಬೆಂಗಳೂರು: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ‘ಜಾವಾ ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್ಸ್’ ಅಂತಾರಾಷ್ಟ್ರೀಯ ಇಐಸಿಎಂಎ ಮೇಳದಲ್ಲಿ ಸತತ ಮೂರನೇ ಬಾರಿಗೆ ಭಾಗವಹಿಸಿ ಜಾಗತಿಕ...

shiftlife-anti-spike-daily-modicare-glucose-control

ಇಷ್ಟದ ಆಹಾರ ಸೇವಿಸಿಯೂ ದೇಹದಲ್ಲಿ ಗ್ಲೂಕೋಸ್ ನಿಯಂತ್ರಣ: ಇದಕ್ಕಾಗಿ ಬಂದಿದೆ ವಿಶಿಷ್ಟ ‘ಶಿಫ್ಟ್‌ಲೈಫ್ ಆ್ಯಂಟಿ-ಸ್ಪೈಕ್ ಡೈಲಿ’

by admin
November 16, 2026
0

ಬೆಂಗಳೂರು: ಬಿಸಿ ಬಿಸಿ ಪರಾಠಾ, ಗರಿಗರಿಯಾದ ದೋಸೆ, ಘಮಘಮಿಸುವ ಬಿರಿಯಾನಿ ಹಾಗೂ ಸಿಹಿ ತಿನಿಸುಗಳೆಂದರೆ ಭಾರತೀಯರಿಗೆ ಅಚ್ಚುಮೆಚ್ಚು. ಆದರೆ ಕಾರ್ಬೋಹೈಡ್ರೇಟ್‌ಯುಕ್ತ ಇಂತಹ ಆಹಾರ ಸೇವಿಸಿದ ನಂತರ ರಕ್ತದಲ್ಲಿನ...

ashoka-university-admission-2027-500-scholarships-full-tuition-fee-waiver

ಪದವಿ ವಿದ್ಯಾರ್ಥಿಗಳಿಗೆ ಬಂಪರ್ ಅವಕಾಶ: 500 ಸ್ಕಾಲರ್‌ಶಿಪ್, ಪೂರ್ಣ ಶುಲ್ಕ ವಿನಾಯಿತಿಗೆ ಅರ್ಜಿ ಆಹ್ವಾನಿಸಿದ ಅಶೋಕ ವಿವಿ

by admin
November 16, 2026
0

ಹೊಸದಿಲ್ಲಿ: ಇಲ್ಲಿನ ಪ್ರತಿಷ್ಠಿತ ಸಂಶೋಧನಾ ಕೇಂದ್ರಿತ ಅಶೋಕ ವಿಶ್ವವಿದ್ಯಾಲಯವು 2027ನೇ ಸಾಲಿನ ಪದವಿ ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 7ರಿಂದಲೇ ಬಹು ಸುತ್ತಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು,...

vyapara-abhivruddhigagi-ondu-tantra-business-growth-remedies

Astro- ವ್ಯಾಪಾರ ಅಭಿವೃದ್ಧಿಗಾಗಿ ಈ ಒಂದು ತಂತ್ರ..!!

by admin
November 16, 2026
0

​"ನಮಸ್ತೆ, ಬಂಧುಗಳೇ. ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು, ಬಿಸಿನೆಸ್ ಗ್ರೋತ್ ಆಗ್ಬೇಕು ಅಪ್ಪಾ ಅಂದ್ರೆ, ಬಹಳಷ್ಟು ಜನರ ಕೆಟ್ಟ ಕಣ್ಣಿನ ದೃಷ್ಟಿ ಬಿದ್ದು ವ್ಯಾಪಾರದಲ್ಲಿ ಏಳಿಗೆ ಆಗ್ತಾ ಇಲ್ಲಪ್ಪಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram