ಅತ್ಯಂತ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಹೊಸ ಮಾದರಿಯ ಎರಡು ಕಾರುಗಳ ಬಿಡುಗಡೆ ಮಾಡಲು ಯೋಜಿಸುತ್ತಿದೆ. 5 ಲಕ್ಷ ರೂ ಗಳಿಗಿಂತ ಕಡಿಮೆ ವೆಚ್ಚದಲ್ಲಿ ಈ ಕಾರು ಮಾರುಕಟ್ಟೆಗೆ ಬಿಡುಗಡೆ ಆಗಲಿದ್ದು, ಕಾರುಗಳಲ್ಲಿ ಒಂದು 800 ಸಿಸಿ ಆಗಿದ್ದರೆ, ಇನ್ನೊಂದು ಕಾರು 1-ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆರಂಭಿಕ ಹಂತದ ಕಾರುಗಳ ಉತ್ಪಾದನೆ ಮಾಡುವುದರ ಬಗ್ಗೆ ಹ್ಯುಂಡೈ ಮೋಟಾರ್ ಇಂಡಿಯಾ ಮತ್ತು ಟಾಟಾ ಮೋಟರ್ಸ್ ಸದ್ಯ ಆಸಕ್ತಿ ವಹಿಸದೇ ಇರುವುದರಿಂದ ಮಾರುತಿ ಸುಜುಕಿ ಈ ಅವಕಾಶವನ್ನು ಸದುಪಯೋಗ ಮಾಡಲು ಯೋಜಿಸುತ್ತಿದೆ.
ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ, ಹೊಸ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು ಕಾರನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಸುಜುಕಿ ಮೋಟಾರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯುಕವಾ ಹೇಳಿದ್ದಾರೆ.
800 ಸಿಸಿ ಸಾಮರ್ಥ್ಯದ ಕಾರು ಮೊದಲನೆಯದು ಮತ್ತು ಎರಡನೆಯ ಕಾರು 1ಲೀಟರ್ ಎಂಜಿನ್ ಸಾಮರ್ಥ್ಯದ್ದು. 800 ಸಿಸಿ ಸಾಮರ್ಥ್ಯದ ಹೊಸ ಮಾದರಿಯ ಕಾರು ಅಭಿವೃದ್ಧಿಯ ಬಗ್ಗೆ ಕಂಪನಿಯು ಕೆಲಸ ಶುರು ಮಾಡಿದೆ ಎಂದಿರುವ ಅಯುಕವಾ ಎರಡನೆಯ ಕಾರಿನ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.
ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..
ಆಪರೇಷನ್ ಸಿಂಧೂರ... ಈ ರಣಬೇಟೆ..ಪಾಕಿಸ್ತಾನದ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡ್ಬಿಟ್ಟಿದೆ.. ತಮ್ಮದು ಕೆಚ್ಚೆದೆ.. ಕೆಚ್ಚೆದೆ ಅಂತಿದ್ದವರ ಗುಂಡಿಗೆ ಗಢಗಢನೇ ಅಲ್ಲಾಡಿ ಹೋಗಿದೆ... ಹೃದಯ ಒಂದ್ಸಾರಿ.. ಬಲಕ್ಕೆ ಓಡಿ...








