ಜಗತ್ತಿನಾದ್ಯಂತ ವೇಗವಾಗಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕುವೈಟ್ ಮತ್ತು ಕತಾರ್ ಭಾರತಕ್ಕೆ ತಾತ್ಕಾಲಿಕವಾಗಿ ವಿಮಾನ ಯಾನ ರದ್ದುಗೊಳಿಸಿದೆ.
ಕುವೈಟ್ ಭಾರತ, ಬಾಂಗ್ಲಾದೇಶ, ಫಿಲಿಪೈನ್ಸ್, ಶ್ರೀಲಂಕಾ, ಚೀನಾ, ಸಿರಿಯಾ, ಲೆಬನಾನ್ ಮತ್ತು ಈಜಿಪ್ಟ್ ಸೇರಿದಂತೆ 7 ದೇಶಗಳ ನಡುವಿನ ವಿಮಾನ ಯಾನ ಮುಂದಿನ ಆದೇಶ ಬರುವವರೆಗೂ ಸ್ಥಗಿತಗೊಳಿಸಿದೆ.
ಕತಾರ್ ಭಾರತ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಸಿರಿಯಾ, ನೇಪಾಳ, ಇರಾನ್, ಇರಾಕ್, ಈಜಿಪ್ಟ್, ಚೀನಾ, ಪಿಲಿಫಿನ್ಸ್, ಬಾಂಗ್ಲಾದೇಶ, ಲಿಬಾನನ್ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ 14 ದೇಶಗಳ ಪ್ರಯಾಣಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.
ಹಾಗೆಯೇ ದೇಶದಲ್ಲಿರುವ ಎಲ್ಲಾ ಜನರು ಬೇರೆ ದೇಶಗಳಿಗೆ ಪ್ರಯಾಣ ಮಾಡದಂತೆ ಸರ್ಕಾರ ಒತ್ತಾಯಿಸಿದೆ.








