ಸ್ವಿಸ್ ಬ್ಯಾಂಕ್ ಖಾತೆ ವಿವರಗಳ ಎರಡನೇ ಮಾಹಿತಿ ಪಟ್ಟಿ ಭಾರತಕ್ಕೆ ರವಾನೆ – Swiss bank account
ಸ್ವಿಟ್ಜರ್ಲೆಂಡ್, ಅಕ್ಟೋಬರ್10: ಭಾರತವು ತನ್ನ ರಾಷ್ಟ್ರೀಯರ ಮತ್ತು ಕಂಪನಿಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳ ಎರಡನೇ ಪಟ್ಟಿಯನ್ನು ಸ್ವಿಟ್ಜರ್ಲೆಂಡ್‌ನೊಂದಿಗಿನ ಸ್ವಯಂಚಾಲಿತ ಮಾಹಿತಿ ವಿನಿಮಯದಡಿಯಲ್ಲಿ ಪಡೆದುಕೊಂಡಿದೆ. ( Swiss bank account )

ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.
ಸ್ವಿಟ್ಜರ್ಲೆಂಡ್‌ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್‌ಟಿಎ) ಈ ವರ್ಷ ಎಇಒಐನಲ್ಲಿ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಹಣಕಾಸು ಖಾತೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡ 86 ದೇಶಗಳಲ್ಲಿ ಭಾರತವೂ ಸೇರಿದೆ.
ಪಾಪಿ ಪಾಕ್ ಗೆ ಯುದ್ಧ ವಿಮಾನಗಳ ರಹಸ್ಯ ಮಾಹಿತಿ ಒದಗಿಸುತ್ತಿದ್ದ ಎಚ್ಎಎಲ್ ಉದ್ಯೋಗಿ ಬಂಧನ
2019 ರ ಸೆಪ್ಟೆಂಬರ್‌ನಲ್ಲಿ ಭಾರತವೂ ಸೇರಿದಂತೆ 75 ದೇಶಗಳು ಎಇಒಐ (ಸ್ವಯಂಚಾಲಿತ ಮಾಹಿತಿ ವಿನಿಮಯ) ಅಡಿಯಲ್ಲಿ ಸ್ವಿಟ್ಜರ್ಲೆಂಡ್‌ನಿಂದ ಮೊದಲ ವಿವರಗಳನ್ನು ಪಡೆದುಕೊಂಡಿತ್ತು.
ಈ ವರ್ಷ ಮಾಹಿತಿ ವಿನಿಮಯವು ಸುಮಾರು 3.1 ಮಿಲಿಯನ್ (31 ಲಕ್ಷ) ಹಣಕಾಸು ಖಾತೆಗಳನ್ನು ಒಳಗೊಂಡಿದೆ ಎಂದು ಎಫ್‌ಟಿಎ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಎಷ್ಟು ಖಾತೆಗಳ ವಿವರ ಭಾರತಕ್ಕೆ ಸಿಕ್ಕಿದೆ ಹಾಗೂ ಹಣದ ಮೌಲ್ಯವೆಷ್ಟುಎಂಬ ಮಾಹಿತಿ ನೀಡಲು ಎಫ್‌ಟಿಎ ನಿರಾಕರಿಸಿದ್ದು, ಒಪ್ಪಂದದ ಪ್ರಕಾರ ಗೌಪ್ಯತೆ ಕಾಯ್ದುಕೊಳ್ಳಬೇಕಾಗಿದೆ ಎಂದಿದೆ.
ಪಾಕ್ ನಲ್ಲಿ ತಲೆದೋರಿದೆ ತೀವ್ರ ಆಹಾರ ಬಿಕ್ಕಟ್ಟು : ತನ್ನ ಅವ್ಯವಸ್ಥೆಗೆ ಭಾರತವನ್ನು ದೂಷಿಸಿದೆ ಹತಾಶ ಪಾಕಿಸ್ತಾನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








