ಚೀನಾ, ಪಾಕ್ ನೊಂದಿಗೆ ಭಾರತ ಯಾವಾಗ ಯುದ್ಧ ನಡೆಸಬೇಕು ಎಂದು ಪ್ರಧಾನಿ ನಿರ್ಧರಿಸಿದ್ದಾರೆ – ಸ್ವತಂತ್ರ ದೇವ್ ಸಿಂಗ್ war China Pak
ಬಲ್ಲಿಯಾ, ಅಕ್ಟೋಬರ್26: ಚೀನಾ ಮತ್ತು ಪಾಕಿಸ್ತಾನದೊಂದಿಗೆ ಭಾರತ ಯಾವಾಗ ಯುದ್ಧಕ್ಕೆ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.

ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಅವರ ಈ ವಿವಾದಾತ್ಮಕ ಹೇಳಿಕೆಗಳು ಬಂದಿವೆ. war China Pak
ಬಿಜೆಪಿಯ ಹಿರಿಯ ಮುಖಂಡ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಷಯ ಮತ್ತು ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪನ್ನು ತಮ್ಮ ಹೇಳಿಕೆಗೆ ಸೇರಿಸಿ ಮಾತನಾಡಿದ್ದಾರೆ.
ಆಯುಧ ಪೂಜೆ ಪ್ರಯುಕ್ತ ಶಸ್ತ್ರಾಸ್ತ್ರಗಳ ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬಲ್ಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವತಂತ್ರ ಸಿಂಗ್ ದೇವ್, ರಾಮ್ ಮಂದಿರ ಮತ್ತು 370 ನೇ ವಿಧಿಯ ನಿರ್ಧಾರಗಳಂತೆ, ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯಾವಾಗ ಯುದ್ಧ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಜಯ್ ಯಾದವ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ದೇವ್ ಸಿಂಗ್ ಈ ಹೇಳಿಕೆ ನೀಡಿದ್ದು, ವಿಡಿಯೋವನ್ನು ಬಿಜೆಪಿ ಶಾಸಕ ಸಂಜಯ್ ಯಾದವ್ ಹಂಚಿಕೊಂಡಿದ್ದಾರೆ.

ಸಿಕಂದರ್‌ಪುರ ಪ್ರದೇಶದ ಕಥೌಡಾ ಗ್ರಾಮದಲ್ಲಿರುವ ಕೃಷ್ಣ ದೇವಸ್ಥಾನದ ಭೂಮಿ ಪೂಜನ್ ಕಾರ್ಯಕ್ರಮದಲ್ಲಿ ಸ್ವತಂತ್ರ ದೇವ್ ಸಿಂಗ್ ಭಾಗವಹಿಸುತ್ತಿರುವುದನ್ನು ಬಿಜೆಪಿ ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಮಾಡಿದ ವಿಡಿಯೋ ತೋರಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








