Mysore dasara
ಮೈಸೂರು : ಕೊರೊನಾ ಸಂಕಷ್ಟದ ನಡುವೆ ಈ ಬಾರಿ ಐತಿಹಾಸಿ ನಾಡಹಬ್ಬ ದಸಾರವನ್ನ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿದೆ. ಮೈಸೂರಿನಲ್ಲಿ ತೀರ ಸರಳವಾಗಿ ಆದ್ರೆ ಸಂಭ್ರಮದಿಂದ ದಸರಾ ಮಹೋತ್ಸವ ಆಚರಣೆ ಮಾಡಲಾಗಿದೆ. ಈ ವೇಳೆ ಈ ವರ್ಷ ದಸರಾಗೆ ಖರ್ಚಾಗಿರುವ ಒಟ್ಟು ಹಣದ ಲೆಕ್ಕಾಚಾರ ನಡೆದಿದೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ದಸರಾ ಲೆಕ್ಕ ಪತ್ರ ಮಂಡನೆ ಮಾಡಿದ್ದಾರೆ.
ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಶೇಖರ್ ಅವರು 2020 ನೇ ಸಾಲಿನ ದಸರಾ ಮಹೋತ್ಸವ ಖರ್ಚಿನ ಮಾಹಿತಿ ನೀಡಿದ್ದಾರೆ. ದಸರಾ ಆಚರಣೆಗೆ ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆ ಮಾಡಿತ್ತು. ಮಹೋತ್ಸವಕ್ಕೆ 2,91,83,167 ರೂ. ವೆಚ್ಚವಾಗಿದ್ದು, 7,08,833 ರೂಪಾಯಿ ಉಳಿತಾಯವಾಗಿದೆ ಎಂದಿದ್ದಾರೆ. ಹೌದು. ಕೊರೊನಾ ಹಾವಳಿ ನಡುವೆ ಅತ್ಯಂತ ಸರಳವಾಗಿ ದಸರಾ ಆಚರಣೆ ಮಾಡಲಾಗಿದ್ದು, ಕೋಟ್ಯಾಂತರ ರೂಪಾಯಿ ಮೊತ್ತವನ್ನ ಉಳಿತಾಯ ಮಾಡಲಾಗಿದೆ.
ಪ್ರತಿ ಬಾರಿ ಐತಿಹಾಸಿಕ ದಸರಾವನ್ನ ಅತ್ಯಂತ ವಿಜೃಂಭಣೆ ಹಾಗೂ ಆಡಂಬರದಿಂದ ಆಚರಣೆ ಮಾಡಲಾಗುತ್ತಿತ್ತು. ದೇಶ ವಿದೇಶದಿಂದ ಲಕ್ಷಾಂತರ ಜನರು ಬಂದು ಅಂಬಾರಿ ವೀಕ್ಷಣೆ ಮಾಡುತ್ತಿದ್ದರು. ನವರಾತ್ರಿ ಯಲ್ಲಿ ನಾಡ ಅಧಿದೇವತೆಗೆ ಸಲ್ಲಿಸಲಾಗುವ ವಿಶೇಷ ಪೂಜೆ ಪುನಸ್ಕಾರಗಳು, ಅರಮನೆ ಆವರಣದಲ್ಲಿ ನವರಾತ್ರಿ ವೇಳೆ ನಡೆಯುವ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಕಣ್ತುಂಬಿಕೊಳ್ತಿದ್ದರು. ಆದರೆ ಈ ವರ್ಷ ಅಷ್ಟೊಂದು ಅದ್ಧೂರಿಯಾಗಿ ದಸರಾ ಆರಛನೆ ಮಾಡಲಾಗಲಿಲ್ಲ. ಕೊರೊನಾ ಇಡೀ ವಿಶ್ಯಾದ್ಯಂತ ತಲ್ಲಣ ಸೃಷ್ಟಿಮಾಡಿರುವ ರಣಭೀಕರ ಹೆಮ್ಮಾರಿ ಕೊರೊನಾ.. ಆದರೂ ಸಹ ಸರಳವಾಗಿ ಸಂಭ್ರಮದಿಂದಲೇ ದಸರಾ ಆಚರಣೆ ಮಾಡಲಾಗಿದೆ.
Mysore dasara
ಈರುಳ್ಳಿ ಬಳಿಕ, ಗಗನಕ್ಕೇರಿದ ಆಲೂಗಡ್ಡೆ ಬೆಲೆ..! ಗ್ರಾಹಕರಿಗೆ ಗಾಯದ ಮೇಲೆ ಬರೆ..
ಉತ್ತರ ಪ್ರದೇಶ – ಇಲ್ಲಿ ಹುಡುಗರು ಸಹ ಸಾರ್ವಜನಿಕವಾಗಿ ಹಾಫ್ ಪ್ಯಾಂಟ್ ಧರಿಸುವಂತಿಲ್ಲ
ರಾಷ್ಟ್ರ ರಾಜಧಾನಿಯಲ್ಲಿ 58 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು..!
ರಾಷ್ಟ್ರೀಯ ಏಕತೆ ದಿನಾಚರಣೆ – ಫಿಟ್ ಇಂಡಿಯಾ ವಾಕಥಾನ್ ಉದ್ಘಾಟಿಸಿದ ಕ್ರೀಡಾ ಸಚಿವ
2 ಗಂಟೆಯಲ್ಲೇ ಪದವಿ ಪರೀಕ್ಷೆ ಫಲಿತಾಂಶ; ದಾವಣಗೆರೆ ವಿವಿ ವಿಶೇಷ ದಾಖಲೆ..!
ಕನ್ನಡ ನಿತ್ಯೋತ್ಸವವಾಗಬೇಕು : ಬಿ.ಸಿ.ಪಾಟೀಲ್
ತಂತ್ರಜ್ಞಾನದಿಂದ ಕನ್ನಡ ಬೆಳೆಸೋಣ, ಮುಂದಿನ ವರ್ಷ `ಕನ್ನಡ ಕಾಯಕ ವರ್ಷ’; ಬಿಎಸ್. ಯಡಿಯೂರಪ್ಪ ಘೋಷಣೆ
ಇಂದಿನಿಂದ ಎಲ್ಪಿಜಿ ಸಿಲಿಂಡರ್ನಿಂದ ರೈಲ್ವೆವರೆಗೆ ಕೆಲವು ಹೊಸ ನಿಯಮಗಳು – ಇಲ್ಲಿದೆ ಮಾಹಿತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel