ಡಾ. ರಾಜ್ ಕುಮಾರ್ ಬಾಲಕೃಷ್ಣ ರವರ ಕಾಲಿಗೆ ಅಡ್ಡ ಬಿದ್ದು ಕ್ಷಮೆಯಾಚಿಸಲು ಕಾರಣವಾದ ಆ ಘಟನೆ Rajkumar balakrishna
ಬೆಂಗಳೂರು, ನವೆಂಬರ್04: ಹಿಂದಿನ ಕಾಲದ ಚಿತ್ರನಟರು ಒಬ್ಬರಿಗೊಬ್ಬರು ಅತ್ಯಂತ ಆಪ್ತರಾಗಿದ್ದು, ಒಬ್ಬರನ್ನೊಬ್ಬರು ಬಿಟ್ಟುಕೊಡುತ್ತಿರಲಿಲ್ಲ. Rajkumar balakrishna

ಅನ್ಯೋನ್ಯತೆಯಿಂದ ಇರುತ್ತಿದ್ದ ಅವರಲ್ಲಿ ಯಾರಿಗೂ ಅಸೂಯೆ ಇರಲಿಲ್ಲ. ಅವರು ಒಬ್ಬರನೊಬ್ಬರು ಪರಸ್ಪರ ಗೌರವಿಸುತ್ತಿದ್ದ ರೀತಿ ಇಂದಿನ ಕಾಲದ ನಟರಿಗೆ ಮಾದರಿಯಾಗಿದೆ. ಅದರಲ್ಲೂ ಕನ್ನಡ ಚಿತ್ರರಂಗದ ವರನಟ ಡಾಕ್ಟರ್ ರಾಜಕುಮಾರ್ ತಮ್ಮ ಸರಳತೆಯಿಂದಲೇ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ರಾಜಕುಮಾರ್ ಅವರು ಚಲನಚಿತ್ರದಲ್ಲಿ ಮಾತ್ರವೇ ಒಬ್ಬ ಮಾನವೀಯ ವ್ಯಕ್ತಿಯಾಗಿ ಕಾಣಿಸಿಕೊಂಡಿರಲಿಲ್ಲ ಬದಲಾಗಿ ತಮ್ಮ ನಿಜಜೀವನದಲ್ಲಿ ಕೂಡ ಮಾನವೀಯತೆಯ ಗುಣಗಳನ್ನು ಅಳವಡಿಸಿಕೊಂಡಿದ್ದರು. ಹಿರಿಯ ಕಿರಿಯರೆಂಬ ಭೇಧಭಾವವಿಲ್ಲದೆ ಎಲ್ಲರೊಂದಿಗೂ ಪ್ರೀತಿಯಿಂದ ಅವರು ನಡೆದುಕೊಳ್ಳುತ್ತಿದ್ದರು.
ಒಮ್ಮೆ ಪರಿಹಾರ ನಿಧಿ ಸಂಗ್ರಹಣ ಕಾರ್ಯಕ್ರಮ ನಡೆಯುತ್ತಿತ್ತು. ಆಗ ಡಾ.ರಾಜ್ ಕುಮಾರ್ ಮತ್ತು ನಟ ಬಾಲಕೃಷ್ಣ ಅತ್ಯಂತ ಆಪ್ತರಾಗಿದ್ದರು. ಬಾಲಣ್ಣ ಅವರಿಗೆ ಯಾವುದೇ ಅವಮಾನ ಆಗಬಾರದೆಂಬ ಕಾರಣಕ್ಕೆ ಅವರನ್ನು ಮೆರವಣಿಗೆಯಲ್ಲಿ ತನ್ನೊಡನೆ ಇರಿಸಿಕೊಳ್ಳಲು ಡಾ. ರಾಜ್ ಕುಮಾರ್ ಬಯಸಿದ್ದರು.
ಆದರೆ ಅಂದು ಬಾಲಕೃಷ್ಣ ಬರುವಾಗ ತಡವಾಗಿ ಅವರು ಬೇರೆ ಕಲಾವಿದರ ವಾಹನದಲ್ಲಿ ಪ್ರಯಾಣಿಸಬೇಕಾಗಿ ಬಂತು.
ಪರಿಹಾರ ನಿಧಿ ಸಂಗ್ರಹಣ ಕಾರ್ಯಕ್ರಮದಲ್ಲಿ ಚಲನಚಿತ್ರರಂಗಕ್ಕೆ ಸಂಬಂಧಿಸಿದವರೊಬ್ಬರು ಬಾಲಕೃಷ್ಣ ಅವರು ಸಂಗ್ರಹಿಸಿದ ಹಣವನ್ನು ತನ್ನ ಕಿಸೆಗೆ ಹಾಕಿಕೊಂಡಾರೆಂಬ ಅನುಮಾನದಿಂದ ಅವರ ಮೇಲೆ ನಿಗಾ ಇಡಲು ಓರ್ವನನ್ನು ನೇಮಿಸಿದ್ದರಂತೆ.
ಇದು ಬಾಲಕೃಷ್ಣರವರಿಗೆ ಗೊತ್ತಾಗಿ ಅವರು ಡಾ.ರಾಜ್ ಕುಮಾರ್ ರಲ್ಲಿ ತಮ್ಮ ನೋವು ಹೇಳಿಕೊಂಡು ಅತ್ತರಂತೆ.ಇದರಿಂದ ನೊಂದ ಡಾ.ರಾಜ್ ಬಾಲಕೃಷ್ಣ ರವರ ಮೇಲೆ ನಿಗಾ ಇಟ್ಟಿದ್ದ ಹುಡುಗನನ್ನು ಕರೆಯಿಸಿ ವಿಚಾರಣೆ ನಡೆಸಿದರು. ಆದರೆ ಆತ ತನ್ನ ತಪ್ಪನ್ನು ಒಪ್ಪಿಕೊಂಡರು ತನಗೆ ಆ ಕೆಲಸವನ್ನು ವಹಿಸಿದ ವ್ಯಕ್ತಿಯ ಹೆಸರನ್ನು ಬಾಯಿ ಬಿಡಲಿಲ್ಲವಂತೆ.

ಆಗ ಡಾ. ರಾಜ್ ಕುಮಾರ್ ಆ ಹುಡುಗನ ಎದುರಲ್ಲಿ ಬಾಲಕೃಷ್ಣರವರ ಕಾಲಿಗೆ ಅಡ್ಡ ಬಿದ್ದು ನಿಮ್ಮನ್ನು ನೋಯಿಸಿದವರು ಯಾರೇ ಆಗಿದ್ದರೂ ಅವರನ್ನು ಕ್ಷಮಿಸಿ ಎಂದು ವಿನಂತಿಸಿದರು. ಇದನ್ನು ನೋಡಿ ಆ ಹುಡುಗ ಜೋರಾಗಿ ಅಳಲಾರಂಭಿಸಿದ ಹಾಗೂ ತನಗೆ ಹಾಗೆ ಮಾಡಲು ಹೇಳಿದ ಆ ವ್ಯಕ್ತಿಯ ಹೆಸರನ್ನು ತಿಳಿಸಿದನಂತೆ.
ಬಳಿಕ ಡಾ.ರಾಜ್, ಬಾಲಕೃಷ್ಣ ರವರ ನೋವಿಗೆ ಕಾರಣಕರ್ತ ನಾದ ಆ ವ್ಯಕ್ತಿ ಯನ್ನು ಕರೆಯಿಸಿ ಬಾಲಕೃಷ್ಣ ರವರಲ್ಲಿ ಕ್ಷಮೆಯಾಚಿಸುವಂತೆ ಮಾಡಿದರಾದರೂ, ಆ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಲಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








