ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆನೆ ತಜ್ಞ, ಪರಿಸರ ವಿಜ್ಞಾನಿ, ಅಡವಿ ಪ್ರೇಮಿ ಅಜಯ್ ದೇಸಾಯಿ ಎಂಬ ಪ್ರಕೃತಿ ಆರಾಧಕ ಇನ್ನು ಕೇವಲ ನೆನಪು ಮಾತ್ರ:

Shwetha by Shwetha
November 21, 2020
in Newsbeat, Samagra karnataka, ನ್ಯೂಸ್ ಬೀಟ್, ರಾಜ್ಯ
wildlife experts Ajay Desai
Share on FacebookShare on TwitterShare on WhatsappShare on Telegram

ಆನೆ ತಜ್ಞ, ಪರಿಸರ ವಿಜ್ಞಾನಿ, ಅಡವಿ ಪ್ರೇಮಿ ಅಜಯ್ ದೇಸಾಯಿ ಎಂಬ ಪ್ರಕೃತಿ ಆರಾಧಕ ಇನ್ನು ಕೇವಲ ನೆನಪು ಮಾತ್ರ: wildlife experts Ajay Desai

ಬೆಳಗಾವಿ, ನವೆಂಬರ್21: ಆನೆಗಳ ಕುರಿತು ಮಹತ್ವಪೂರ್ಣ ಅಧ್ಯಯನ ನಡೆಸಿ, ವನ್ಯಜೀವಿಗಳ ಕುರಿತು ಅಪಾರ ಕಾಳಜಿ ಹೊಂದಿದ್ದ ಕನ್ನಡಿಗ ಅಜಯ್ ಎ.ದೇಸಾಯಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಮಗ್ರ ವನ್ಯಜೀವಿ ಹೋರಾಟ, ಸುಸ್ಥಿರ ಪರಿಸರ ಚಳುವಳಿ, ಆನೆ ಕಾರಿಡಾರ್, ಪ್ರಾಜೆಕ್ಟ್ ಎಲಿಫೆಂಟ್, ಡಿಸ್ಕವರಿ ವಿಲೇಜ್ ಇತ್ಯಾದಿ ಪರಿಕಲ್ಪನೆಗಳ ಹರಿಕಾರರೆಂದೇ ಗುರುತಿಸಿಕೊಂಡಿದ್ದ ಅಜಯ್ ದೇಸಾಯಿಯವರು ಏಷ್ಯಾದ ಪ್ರಮುಖ ಮತ್ತು ಪ್ರಸಿದ್ಧ ವೈಲ್ಡ್ ಲೈಫ್ ಆಕ್ಟಿವಿಸ್ಟ್ ಎಂದು ಗುರುತಿಸಿಕೊಂಡಿದ್ದವರು. ಸದ್ಯ ಬೆಳಗಾವಿಯಲ್ಲಿ ವಾಸವಿದ್ದ 62 ವರ್ಷದ ಅಜಯ್ ದೇಸಾಯಿ ತಮ್ಮ ಸ್ವಗೃಹದಲ್ಲೇ ತೀವ್ರ ಹೃದಯಾಘಾತದಿಂದ ಇಹದ ವ್ಯಾಪಾರ ಮುಗಿಸಿದ್ದಾರೆ. wildlife experts Ajay Desai

Related posts

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

August 26, 2026
ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

August 26, 2026

wildlife experts Ajay Desai

ಬಾಗಲಕೋಟೆ ಜಿಲ್ಲೆಯ ಕೊಣ್ಣೂರು ಇವರ ಹುಟ್ಟೂರು. ಧಾರವಾಡ ವಿವಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದ ಅವರು ಅಮೆರಿಕದ ಸ್ಮಿತ್ ಸೋನಿಯನ್ ಸಂಸ್ಥೆಯಲ್ಲಿ ವನ್ಯಜೀವಿ ತರಬೇತಿ ಪಡೆದಿದ್ದರು. ದೇಶದ ಹಲವು ಕಾಡುಗಳ ಬಗ್ಗೆ ಅಪಾರವಾದ ಅನುಭವ ಹೊಂದಿದ್ದ ಅಜಯ್ ದೇಸಾಯಿಯವರ ನೆಚ್ಚಿನ ಕ್ಷೇತ್ರ ಆನೆಗಳ ಬದುಕು, ವರ್ತನೆ ಮತ್ತು ವಲಸೆ ಮಾರ್ಗ. ಹಿಂದೆ ಛತ್ತೀಸ್ ಘಡ ಸರ್ಕಾರ ಆನೆ ಹಾವಳಿಯಿಂದ ಬೇಸತ್ತು ಕೊನೆಗೆ ಅಜಯ್ ದೇಸಾಯಿಯವರನ್ನು ಸಂಪರ್ಕಿಸಿ ವರದಿ ಪಡೆದುಕೊಂಡಿತ್ತು. ಕೇವಲ 20 ದಿನಗಳಲ್ಲೆ ಅಲ್ಲಿನ ಆನೆಕಾಟದ ಅಸಲಿ ಕಾರಣ ಸಹಿತ ವರದಿ ಸಲ್ಲಿಸಿದ್ದರು ಅವರು.

ವಿಶ್ವ ವನ್ಯಜೀವಿ ನಿಧಿ (ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಎಂಡ್ ನೇಚರ್) ಸಲಹೆಗಾರರಾಗಿ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟದ ಸದಸ್ಯರಾಗಿ, ಏಷ್ಯಾ ಆನೆಗಳ ತಜ್ಞರ ಗುಂಪಿನ ಸಹ ಅಧ್ಯಕ್ಷರು ಆಗಿದ್ದ ಇವರು ಭಾರತ ಸರ್ಕಾರದ ಆನೆ ಯೋಜನೆಯ ಸಲಹೆಗಾರರಾಗಿ ಕೇಂದ್ರ ವಿಜ್ಞಾನ ಪರಿಸರ ಮತ್ತು ಅರಣ್ಯ ಇಲಾಖೆಯ ಮಾರ್ಗದರ್ಶಕರೂ ಸಹ ಆಗಿದ್ದರು. ಪಶ್ಚಿಮ ಘಟ್ಟಗಳ ಉಳಿವಿನ ಕುರಿತಾಗಿ ಅಪಾರ ಕಳಕಳಿ ಹೊಂದಿದ್ದ ಅವರು ಈ ಕುರಿತಾಗಿ ಅನೇಕ ಉಪನ್ಯಾಸಗಳನ್ನೂ ನೀಡಿದ್ದರು. ಜೊತೆಗೆ ಆನೇ ಕಾರಿಡಾರ್ ರಕ್ಷಣೆಯ ಕುರಿತಾಗಿಯೂ ಸಾಕಷ್ಟು ವಾದ ಸರಣಿ ಮಂಡಿಸಿದ್ದರು.

ಹೇರ್ ಕಟಿಂಗ್ ಮಾಡಿದ್ದಕ್ಕೆ ಸಾಮಾಜಿಕ ಬಹಿಷ್ಕಾರ: ಆತ್ಮಹತ್ಯೆಗೆ ನಿರ್ಧರಿಸಿತಾ ಕ್ಷೌರಿಕ ಕುಟುಂಬ..!

ಪರಿಸರ ಸಂರಕ್ಷಣೆ, ಆನೆಗಳ ಸಂರಕ್ಷಣೆಯ ಕುರಿತು ಅವರು ನಡೆಸಿದ ಅಧ್ಯಯನ ಹಲವಾರು ನೂತನ ಉಪಯುಕ್ತ, ಮಾರ್ಗದರ್ಶನವನ್ನು ಒಳಗೊಂಡಿತ್ತು. ಶ್ರೀಲಂಕಾ, ಕಾಂಬೋಡಿಯ, ವಿಯೆಟ್ನಾಂ, ಇಂಡೋನೇಷ್ಯಾ, ಭೂತಾನ್, ನೇಪಾಳ, ಲಾವೋಸ್, ಮಲೇಷಿಯಾ ದೇಶಗಳು ವನ್ಯಜೀವಿ ಸಂರಕ್ಷಣೆಯ ಇವರ ಅನುಭವದ ಪ್ರಯೋಜನವನ್ನು ಪಡೆದ ದೇಶಗಳಾಗಿದ್ದವು.
ಇತರ ವಿಜ್ಞಾನಿಗಳಂತಲ್ಲದೆ ಪರಿಸರ ಸಂರಕ್ಷಣೆಯೊಂದಿಗೆ ಕಾಡಿನ ಆದಿವಾಸಿಗಳ ಬದುಕನ್ನು ನೇರ್ಪಡಿಸುವ ಮಹತ್ತರ ಯೋಜನೆಗಳನ್ನು ಹಮ್ಮಿಕೊಂಡಿದ್ದ ಅಪರೂಪದ ವಿಜ್ಞಾನಿ ಇವರಾಗಿದ್ದರು.

wildlife experts Ajay Desai

ಇವರ ದೂರದರ್ಶಿತ್ವ, ಆಳವಾದ ಅಧ್ಯಯನ, ಸದಾ ಹೊಸತರ ಹುಡುಕಾಟದಲ್ಲಿ ಅನ್ವೇಷಣೆಯಲ್ಲಿ ತೊಡಗಿರುತ್ತಿದ್ದ ಇವರ ನಿರ್ಗಮನ ವನ್ಯಜೀವಿಗಳ ಅದರಲ್ಲೂ ಪ್ರಮುಖವಾಗಿ ಆನೆಗಳ ಸಂಕುಲಕ್ಕೆ ತುಂಬಲಾರದ ನಷ್ಟವೆಂಬುದು ಸರ್ವ ವಿದಿತ. ಕಾಡಿನ ಸಂರಕ್ಷಣೆ ಎಂದರೆ ಕಾನೂನು ಕಟ್ಟಳೆಗಳಿಂದ ಕಾಡಿನ ರಕ್ಷಣೆಯಲ್ಲ, ಬದಲಾಗಿ ಕಾಡಿನ ಜೀವ ಸಂಕುಲವನ್ನು ಉಳಿಸಿ ಬೆಳೆಸುವುದೇ ನಿಜವಾದ ಸಂರಕ್ಷಣೆ ಎಂದು ನಂಬಿದವರು ಅಜಯ್ ದೇಸಾಯಿ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1329830459920957440?s=19

https://twitter.com/SaakshaTv/status/1329830879460352001?s=19

 

Tags: wildlife experts Ajay Desai
ShareTweetSendShare
Join us on:

Related Posts

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

by Shwetha
August 26, 2026
0

ಆಂಧ್ರಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಸ್ಫೋಟಕ ಸತ್ಯವೊಂದು ಹೊರಬಂದಿದೆ. ಮೃತ ಎಂಜಿನಿಯರ್ ಬರೆದಿಟ್ಟಿರುವ ಡೆತ್ ನೋಟ್ ಇಡೀ ಪ್ರಕರಣಕ್ಕೆ...

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

by Shwetha
August 26, 2026
0

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ತರಗತಿಯಲ್ಲಿ ಹಿಜಾಬ್...

ಕರ್ನಾಟಕಕ್ಕೆ ಮತ್ತೆ ಶಾಕ್; CWRC ಶಿಫಾರಸು ಎತ್ತಿಹಿಡಿದ CWMA

ಕರ್ನಾಟಕಕ್ಕೆ ಮತ್ತೆ ಶಾಕ್; CWRC ಶಿಫಾರಸು ಎತ್ತಿಹಿಡಿದ CWMA

by Shwetha
August 26, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...

ಕೈ ಪಾಳಯದಲ್ಲಿ ಮುಗಿಯದ ಸಂಪುಟ ಪುನಾರಚನೆ ಸರ್ಕಸ್!: ಹಿರಿಯ ಸಚಿವರಿಗೆ ಕೊಕ್ ಹೊಸ ಮುಖಗಳಿಗೆ ಚಾನ್ಸ್ ದೆಹಲಿ ಪ್ರವಾಸದಲ್ಲಿ ನಿರ್ಧಾರವಾಗಲಿದೆ ಕೈ ನಾಯಕರ ಭವಿಷ್ಯ

ಕೈ ಪಾಳಯದಲ್ಲಿ ಮುಗಿಯದ ಸಂಪುಟ ಪುನಾರಚನೆ ಸರ್ಕಸ್!: ಹಿರಿಯ ಸಚಿವರಿಗೆ ಕೊಕ್ ಹೊಸ ಮುಖಗಳಿಗೆ ಚಾನ್ಸ್ ದೆಹಲಿ ಪ್ರವಾಸದಲ್ಲಿ ನಿರ್ಧಾರವಾಗಲಿದೆ ಕೈ ನಾಯಕರ ಭವಿಷ್ಯ

by Shwetha
August 26, 2026
0

ಬೆಂಗಳೂರು ಶಾಸಕರ ಬಂಡಾಯದ ಕಿಚ್ಚು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ರಾಜ್ಯ ಸಚಿವ ಸಂಪುಟ ಪುನಾರಚನೆಯ ಗುಸುಗುಸು ಈಗ ಜೋರಾಗಿ ಕೇಳಿಬರುತ್ತಿದೆ. ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು...

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

by Shwetha
August 26, 2026
0

ದೇಶದಲ್ಲಿ ಶಿಕ್ಷಣದ ಸ್ಥಿತಿಗತಿ ಮತ್ತು ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಾವಿರಾರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram