ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆಗೆ ನೀಚ ರಾಜ`ಕಾರಣ’..!!

Mahesh M Dhandu by Mahesh M Dhandu
December 29, 2020
in Newsbeat, Saaksha Special, ಎಸ್ ಸ್ಪೆಷಲ್
SL dharmegowda
Share on FacebookShare on TwitterShare on WhatsappShare on Telegram

ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆಗೆ ನೀಚ ರಾಜ`ಕಾರಣ’..!!

ವಿಧಾನ ಪರಿಷತ್ ನ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related posts

Luka Modric: Croatia

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

July 4, 2026
Romelu Lukaku

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

July 4, 2026

ಧರ್ಮೇಗೌಡರ ಆತ್ಮಹತ್ಯೆಗೆ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದ್ರೆ ಡಿಸೆಂಬರ್ 15 ರಂದು ಪರಿಷತ್ ನಲ್ಲಿ ನಡೆದ ಗಲಾಟೆಯೇ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಈಗಾಗಲೇ ಬಿಸಿಬಿಸಿ ಚರ್ಚೆಗಳು ಮಾಧ್ಯಮಗಳಲ್ಲಿ ಶುರುವಾಗಿವೆ.

ಆತ್ಮಹತ್ಯೆಗೆ ನೀಚ ರಾಜ`ಕಾರಣ’..!!

ಹೌದು..! ಧರ್ಮೇಗೌಡರ ಆತ್ಮಹತ್ಯೆ ಪ್ರಕರಣವನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ರೆ ಹಲವಾರು ವಿಚಾರಗಳು ನಮ್ಮ ತಲೆಗೆ ಬರುತ್ತವೆ. ಅವರೇ ಹೇಳಿಕೊಂಡಿರುವ ಪ್ರಕಾರ ಅಂದು ನಾನಾಗಿಯೇ ಸಭಾಪತಿ ಸ್ಥಾನದಲ್ಲಿ ಕುಳಿತುಕೊಳ್ಳಲಿಲ್ಲ. ನಾಯಕರ ಒತ್ತಡ ಮೇರೆಗೆ ನಾನು ಆ ರೀತಿ ಮಾಡ್ದೆ. ಆದ್ರೆ ಅಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ ಅಂತಾ ತಮ್ಮ ಆಪ್ತರ ಬಳಿ ಧರ್ಮೇಗೌಡರು ಹೇಳಿಕೊಂಡಿದ್ದಾರೆ.

ಅಂದ್ರೆ ವಿಧಾನ ಪರಿಷತ್ ನ ಘಟನೆಯಿಂದ ಖಿನ್ನತೆಗೆ ಒಳಗಾಗಿ ಅವರು ಈ ರೀತಿ ಮಾಡಿಕೊಂಡಿರುವುದು ನಿಜವಾಗಿದ್ದರೇ ಇದು ಇಡೀ ರಾಜಕೀಯ ವ್ಯವಸ್ಥೆ ತಲೆತಗ್ಗಿಸಲೇಬೇಕಾದ ಸಂದರ್ಭ ಹಾಗೂ ಅಧಿಕಾರದ ಲಾಲಸೆಗೆ ಬಿದ್ದಿರುವ ರಾಜಕಾರಣಿಗಳು ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ಳಬೇಕಾದ ಸಮಯ.

s l dharma gowda

ಯಾಕೆಂದ್ರ ಡಿಸೆಂಬರ್ 15 ರಂದು ಪರಿಷತ್ ನಲ್ಲಿ ನಡೆದ ಘಟನೆ ರಾಜ್ಯದ ಮಾನಮರ್ಯಾದೆಯನ್ನ ಹರಾಜು ಹಾಕಿತ್ತು. ಅದೇ ರೀತಿ ಅಂದು ನಡೆದ ಘಟನಾವಳಿಗಳನ್ನು ಗಮಸಿದ್ರೆ, ಧರ್ಮೇಗೌಡರು ಯಾರದ್ದೋ ಒತ್ತಡ, ಯಾರದ್ದೋ ಲಾಭಕ್ಕಾಗಿ ಸಭಾಪತಿ ಸ್ಥಾನದಲ್ಲಿ ಬಂದು ಕುತ್ಕೋತಾರೆ. ಆಗ ವಿರೋಧ ಪಕ್ಷಗಳು ಕನಿಷ್ಠ ಸೌಜನ್ಯವನ್ನ ಮರೆತು ಧರ್ಮೇಗೌಡರನ್ನು ಎಳೆದಾಡುತ್ತಾರೆ. ಇತ್ತ ಆಡಳಿತ ಪಕ್ಷದವರೂ ಕೂಡ ವಿರೋಧ ಪಕ್ಷದವರನ್ನ ತಡೆಯೋದನ್ನ ಬಿಟ್ಟು, ಧರ್ಮೇಗೌಡರನ್ನ ಬಲವಂತವಾಗಿ ಸಭಾಪತಿ ಸ್ಥಾನದಲ್ಲಿ ಕೂರಿಸುವ ಕೆಲಸ ಮಾಡ್ತಾರೆ. ಈ ಇಬ್ಬರ ಮಧ್ಯೆ ಧರ್ಮೇಗೌಡರು ಬಲಿಕಾ ಬರ್ಕ ಆಗ್ಬಿಟ್ಟಿರ್ತಾರೆ. ಅಂದ್ರೆ ಅಧಿಕಾರಕ್ಕಾಗಿ ಮೂರನ್ನೂ ಬಿಟ್ಟವರಂತೆ ವರ್ತಿಸುತ್ತಿದ್ದ ಅಲ್ಲಿನ ಕೆಲ ರಾಜಕಾರಣಿಗಳ ಮಧ್ಯೆ ಧರ್ಮೇಗೌಡರು ಸಿಕ್ಕಿ ಹಾಕಿಕೊಂಡಿರುತ್ತಾರೆ. ಅಯ್ಯೋ ಇದು ನನಗೆ ಬೇಕಿತ್ತಾ…? ಇದರಿಂದ ನನ್ನತನ ಹಾಳಾತ್ತಾ..? ಅನ್ನೋ ಯೋಚನೆಗಳು ಧಮೇಗೌಡರಲ್ಲಿ ಮೂಡಲು ರಾಜಕಾರಣಿಗಳ ವರ್ತನೆ ಕಾರಣವಾಗಿರುತ್ತೆ.

ಇನ್ನು ಪರಿಷತ್ ಘಟನೆ ಬಳಿಕ ತುಂಬಾ ನೊಂದಿದ್ದ ಧರ್ಮೇಗೌಡರು ತಮ್ಮ ಆಪ್ತರ ಬಳಿ ಕೂಡ ಈ ಬಗ್ಗೆ ಮಾತನಾಡಿ ಬೇಸರ ಹೊರಹಾಕಿದ್ದಾರೆ ಅಂತ ತಿಳಿದು ಬಂದಿದೆ.

ಇದಲ್ಲದೇ ಇದೀಗ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೂಡ ‘ಎಲ್ಲೋ ಒಂದು ಕಡೆ ಧಮೇಗೌಡ ಅವರ ಸಾವಿಗೆ ನಾವೂ ಕಾರಣವಾಗಿದ್ದೇವೆ. ಪರಿಷತ್ ನಲ್ಲಿ ನಡೆದ ಆ ಘಟನೆಯಿಂದಲೇ ಧರ್ಮೇಗೌಡರು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ.

s l dharma gowda

ಒಟ್ಟಾರೆ ಧಮೇಗೌಡರ ಆತ್ಮಹತ್ಯೆಗೆ ವಿಧಾನ ಪರಿಷತ್ ಘಟನೆಯೇ ಕಾರಣ ಅನ್ನೋದಾದ್ರೆ, ಇಲ್ಲಿ ನಿಜವಾಗಿಯೂ ಅವರ ಈ ನಿರ್ಧಾರಕ್ಕೆ ನೀಚ ರಾಜಕಾರಣವೇ ಕಾರಣ ಅನ್ನೋದು ನೂರಕ್ಕೆ ನೂರು ಸತ್ಯ. ಈ ಹಿಂದೆ ಸದನದಲ್ಲಿ ಆ ಚಿತ್ರಗಳನ್ನು ನೋಡಿ, ದೇಶದ ಮುಂದೆ ರಾಜ್ಯದ ಮಾನಮರ್ಯಾದೆಯನ್ನ ಹರಾಜು ಹಾಕಲಾಗಿತ್ತು. ಇದೀಗ ಈ ಘಟನೆ ಕರ್ನಾಟಕದ ಭವ್ಯ ರಾಜಕೀಯ ಪರಂಪರೆಗೆ ಕಪ್ಪುಚುಕ್ಕೆಯಾಗಿದೆ.

ಧಮೇಗೌಡರ ಆತ್ಮಹತ್ಯೆ ಕರ್ನಾಟಕ ರಾಜಕಾರಣದ ಪಾಲಿಗೆ ಕಪ್ಪುಚುಕ್ಕೆ ಮಾತ್ರವಲ್ಲ, ಕರಾಳ ದಿನವೂ ಕೂಡ ಹೌದು.. ಇಂದು ಮೌಲ್ಯಾಧಾರಿತ ರಾಜಕಾರಣದ ಸಮಾಧಿಯಾಗಿದಂತಾಗಿದೆ. ಸಿದ್ದಾಂತ, ಮೌಲ್ಯ, ಬದ್ಧತೆಗಳನ್ನು ಬದಿಗೊತ್ತಿ ಕೇವಲ ಅಧಿಕಾರದ ಆಸೆ, ತಮ್ಮ ಸ್ವಾರ್ಥಕ್ಕೆ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ಇಂತಹ ಘಟನೆಗಳಿಂದಾದರೂ ಬದಲಾಗಬೇಕಿದೆ.

“ರಾಜಕೀಯ ಎಂದ್ರೆ `ರಾ’ ಅಂದ್ರೆ ರಾಕ್ಷಸರಂತೆ, `ಜ’ ಅಂದ್ರೆ ಜನರನ್ನ, `ಕೀ’ ಅಂದ್ರೆ ಕಿತ್ತು ತಿನ್ನುವ, `ಯ’ ಅಂದ್ರೆ ಯಂತ್ರ”ದಂತಾಗಿರೋದು ದೃರದೃಷ್ಠಕರ ಸಂಗತಿ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJPJDSs l dharmegouda
ShareTweetSendShare
Join us on:

Related Posts

Luka Modric: Croatia

fifa world cup 2026- 35 ವರ್ಷಗಳ ಇತಿಹಾಸ, ವಿಶ್ವಕಪ್‌ನಲ್ಲಿ ಸೃಷ್ಟಿಸಿದ್ರು ಇತಿಹಾಸ! ಲೂಕಾ ಮಾಡ್ರಿಕ್ ಕಣ್ಣೀರ ವಿದಾಯದೊಂದಿಗೆ ಮುಗಿಯಿತೇ ಕ್ರೊವೇಶಿಯಾದ ಸುವರ್ಣ ಯುಗ?”

by admin
July 4, 2026
0

ಕ್ರೊವೇಶಿಯಾ..! ಜಗತ್ತಿನ ಒಂದು ಪುಟ್ಟ ರಾಷ್ಟ್ರ. ಅಂದಾಜು 42 -43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ದೇಶ. ಆದ್ರೆ ಈ ದೇಶಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವೂ ಇದೆ....

Romelu Lukaku

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

by admin
July 4, 2026
0

ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ...! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..? ಅಮ್ಮನ ಎದೆ ಹಾಲು.. ಅಪ್ಪನ ರಕ್ತದ ಬೆವರು... ಅಜ್ಜನ ಪ್ರೀತಿ..! ಆತನೇ ಹೇಳುವಂತೆ ಈ...

sadio mane

fifa worldcup2026- ಫುಟ್‍ಬಾಲ್ ಜಗತ್ತಿನ ಸರದಾರನೂ ಹೌದು.. ಮಾನವಿಯತೆಯ ಸಾಹುಕಾರನೂ ಹೌದು…! ಸ್ಯಾಡಿಯೊ ಮಾನೆ ಎಂಬ ಬಂಗಾರದ ಮನುಷ್ಯ..!

by admin
July 4, 2026
0

ಈತನ ಒಂದು ವರ್ಷದ ಸಂಪಾದನೆ 330 ಕೋಟಿಗೂ ಅಧಿಕ..! ಆದ್ರೆ ಕೈಯಲ್ಲಿರುವುದು ಒಡೆದು ಹೋಗಿರುವ ಹಳೆಯ ಮೊಬೈಲ್..! ಓಡಾಡಲು ಬಳಸುವುದು ಹಳೆಯ ಕಾರು..! ಯಾರವನು...? ಮನಸ್ಸು ಮಾಡಿದ್ರೆ...

argentina vs cabo verde

fifaworldcup:2026- ದೈತ್ಯರನ್ನು ಬೆಚ್ಚಿ ಬೀಳಿಸಿದ ಬ್ಲೂ ಬ್ಲೂ ಶಾರ್ಕ್ಸ್..! ಫಿಫಾ ವಿಶ್ವಕಪ್‍ನಲ್ಲಿ ಇತಿಹಾಸ ಬರೆದ ಕೇಪ್‍ವರ್ಡ್..!

by admin
July 4, 2026
0

ಕೆಲವೊಂದು ಸೋಲುಗಳು ಗೆಲುವಿಗಿಂತಲೂ ಹೆಚ್ಚು ಕಾಲ ನೆನಪಿನಲ್ಲಿರುತ್ತವೆ. ಅದು ಭಗ್ನಗೊಂಡ ಮೊದಲ ಪ್ರೀತಿಯ ಹಾಗೇ..! ಫಿಫಾ ವಿಶ್ವಕಪ್ 2026ರ ಟೂರ್ನಿಯ ನಾಕೌಟ್ ಪಂದ್ಯವೊಂದರಲ್ಲಿ ಆಗಿದ್ದು ಕೂಡ ಅದೇ..!...

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram