ವಾಷಿಂಗ್ಟನ್ : ಮುಂದಿನ ಎರಡು ವಾರಗಳಲ್ಲಿ ಕೊರೊನಾ ಸೋಂಕು ಅಮೆರಿಕಾದಲ್ಲಿ ಮರಣಮೃದಂಗ ಬಾರಿಸಲಿದ್ದು, ವೈರಸ್‌ನಿಂದ ಸಾಯುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 518 ಮಂದಿ ಮೃತಪಟ್ಟಿದ್ದಾರೆ. ಶನಿವಾರ 453 ಮಂದಿ ಸಾವನ್ನಪ್ಪಿದ್ದರು. ಕೊರೊನಾ ವೈರಸ್‌ಗೆ ಅಮೆರಿಕದಲ್ಲಿ ಬಲಿಯಾದವರ ಸಂಖ್ಯೆ 2409ಕ್ಕೇರಿದೆ. ಹೀಗಾಗಿ ಟ್ರಂಪ್ ಸಾಮಾಜಿಕ ಅಂತರವನ್ನು ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಿದ್ದಾರೆ.ಜೊತೆಗೆ ಆಸ್ಪತ್ರೆ ಸಿಬ್ಬಂದಿ, ಟಾಸ್ಕ್ಫೋರ್ಸ್ಗಳಿಗೆ ಕೆಲವು ನಿರ್ದೇಶನಗಳನ್ನು ಕೂಡ ಅವರು ನೀಡಿದ್ದಾರೆ.
ಇನ್ನು ಕೊರೊನಾ ವೈರಸ್ ಅಮೆರಿಕದ ಆರ್ಥಿಕ ಕ್ಷೇತ್ರದ ಮೇಲೂ ಭಾರೀ ಹೊಡೆತ ನೀಡಿದೆ.








