ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ 3 ಮಂದಿಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿತ್ತು. ಇಂದು ಬಂದ ವರದಿಯಲ್ಲಿ ಮತ್ತೆ ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಿಗೆ ದೃಢಪಟ್ಟಿದೆ.
ಈ ವರದಿ ಬಂದಿರುವುದೂ ಕೂಡ ಒಂದು ವಾರದ ಬಳಿಕ. ಅಷ್ಟರೊಳಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಹರಡಿಲ್ಲವೇ ? ವಾರದ ಬಳಿಕ ಸೋಂಕಿತರನ್ನು ಪ್ರತ್ಯೇಕ ಮಾಡಲು ಹೊರಟಿರುವ ರಾಜ್ಯ ಸರ್ಕಾರ ತತ್ಕ್ಷಣಕ್ಕೆ ಎಚ್ಚೆತ್ತುಕೊಳ್ಳಲು ಏಕೆ ಆಗುತ್ತಿಲ್ಲ. ಕಳೆದಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಮಾಡಿದ ಯಡವಟ್ಟನ್ನೇ ಮತ್ತೆ ಮಾಡುತ್ತಿದೆಯಾ ? ಮುಂದಿನ ಜನವರಿ ತಿಂಗಳ ಮೊದಲ ವಾರದಲ್ಲಿ ಕೊರೊನಾ ಲಸಿಕೆ ಬರುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸದ ನಿರ್ಲಕ್ಷ್ಯವಾ ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ.

ರೂಪಾಂತರಿ ಬ್ರಿಟನ್ ವೈರಸ್ ಸೋಂಕು ಪತ್ತೆ ಮಾಡಲು ಜೆನೆಟಿಕ್ ಟೆಸ್ಟ್ನಿಂದಲೇ ಸಾಧ್ಯ. ಆದರೆ, ಎಲ್ಲರ ಗಂಟಲು ಮಾದರಿ ಪಡೆದು ಪುಣೆಯಿಂದ ವರದಿ ತರಿಸಿಕೊಳ್ಳುವುದರೊಳಗೆ ಸೋಂಕು ವ್ಯಾಪಕವಾಗಿ ಹರಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.
ಬ್ರಿಟನ್ ವೈರಸ್ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಒಟ್ಟು ಸೋಂಕಿತರ ಸಂಖ್ಯೆಯಲ್ಲೂ ಕರ್ನಾಟಕವೇ ಮುಂದಿದೆ. ಜತೆಗೆ ಇನ್ನೂ 100ಕ್ಕೂ ಹೆಚ್ಚು ಜನರ ಟೆಸ್ಟ್ ರಿಪೋರ್ಟ್ ಬರಬೇಕಿದೆ. ಬ್ರಿಟನ್ನಿಂದ ಬಂದ 204 ಮಂದಿ ಇನ್ನೂ ಬಿಬಿಎಂಪಿ ಹಾಗೂ ಸರ್ಕಾರದ ಸಂಪರ್ಕಕ್ಕೆ ಸಿಕ್ಕಿಲ್ಲ. ಇವರಿಂದ ಬ್ರಿಟನ್ ವೈರಸ್ ಬಾಂಬ್ ಬೆಂಗಳೂರಿನಲ್ಲಿ ಸ್ಪೋಟವಾಗುತ್ತಾ ? ಈ ವೇಳೆಯಲ್ಲಿ ಶಾಲೆ-ಕಾಲೇಜು ಆರಂಭ ನಿಜಕ್ಕೂ ಒಳ್ಳೆಯ ನಿರ್ಧಾರವೇ ? ಇದೇ ರೀತಿ ಮುಂದುವರೆದರೆ ಸಹಜವಾಗಿಯೇ ಬ್ರಿಟನ್ ಕೊರೊನಾ ವೈರಸ್ ರಾಕೆಟ್ ವೇಗದಲ್ಲಿ ಹಬ್ಬುವ ಆತಂಕ ಇದೆ.
ಬೆಂಗಳೂರಿನಲ್ಲಿ ವಲಯವಾರು ನಾಪತ್ತೆಯಾದವರು..!
ದಾಸರಹಳ್ಳಿ-2
ಬೆಂಗಳೂರು ಪೂರ್ವ-64
ಮಹದೇವಪುರ-43
ಆರ್.ಆರ್ ನಗರ-07
ಬೆಂಗಳೂರು ದಕ್ಷಿಣ-25
ಬೆಂಗಳೂರು ಪಶ್ಚಿಮ-32
ಯಲಹಂಕ-09
ಬ್ರಿಟನ್ ವೈರಸ್ನ ಲಕ್ಷಣಗಳು..!
* ವಿಪರೀತ ಜ್ವರ
* ಹಸಿವು ಆಗುವುದಿಲ್ಲ
* ಸ್ನಾಯು ನೋವು
* ಎದೆ ನೋವು
* ಒಣ ಕಫ
* ವಿಪರೀತ ತಲೆನೋವು
* ಮೈಮೇಲೆ ಗುಳ್ಳೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








