ಶಿವರಾತ್ರಿಯಂದು ಕಿಚ್ಚ ಸುದೀಪ್ ರನ್ನು ನೆನಪು ಮಾಡಿಕೊಂಡಿದ್ದೇಕೆ ರಾಗಿಣಿ..!
ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಜೈಲೂ ಸೇರಿ 145 ದಿನಗಳ ಬಳಿಕ ಬೇಲ್ ಮೇಲೆ ಹೊರಬಂದಿಇರುವ ರಾಗಿಣಿ ಸದ್ಯ ಕೆರಿಯರ್ ಕಡೆಎ ಫೋಕಸ್ ಮಾಡಿದ್ದಾರೆ. ನಿನ್ನೆ ಶಿವರಾತ್ರಿ ದಿನ ರಾಗಿಣಿ ದ್ವಿವೇದಿ ತಮ್ಮ ಸಿನಿಮಾ ಕೆರಿಯರ್ ನ ಮಹತ್ವದ ವಿಚಾರವನ್ನ ಶೇರ್ ಮಾಡಿಕೊಂಡಿದ್ದಾರೆ.
ಜೀವನದಲ್ಲಿ ಕಷ್ಟದ ಸಮಯ, ಒಳ್ಳೆಯ ಸಮಯ ಎರೆಡೂ ಸಹ ಬರುತ್ತೆ. ಅದರಂತೆ ಇಂದು ನನಗೆ ತುಂಬಾ ಸಂತೋಷದ ದಿನ. ಯಾಕಂದ್ರೆ ಇಂದು ನನ್ನ ಸಿನಿಮಾ ಜರ್ನಿ ಆರಂಭವಾಗಿ 10 ವರ್ಷವಾಗಿದೆ. ಅಂದ್ರೆ ಕೆಂಪೇಗೌಡ ಸಿನಿಮಾ ರಿಲೀಸ್ ಆಗಿಯೂ 10 ವರ್ಷ ಕಳೆದಿದೆ. ಹೀಗಾಗಿ ತುಂಬ ಖುಷಿಯಾಗಿದೆ ಎಂದು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಸೇರಲಿದ್ದಾರೆ ಗೀತಾ ಶಿವರಾಜ್ ಕುಮಾರ್
ಅಲ್ಲದೇ ಕೆಂಪೇಗೌಡ ಜರ್ನಿ ಬಗ್ಗೆ ಮಾತನಾಡುತ್ತಾ ಸುದೀಪ್ ರನ್ನ ನೆನೆದಿರುವ ತುಪ್ಪದ ಬೆಡಗಿ ಸುದೀಪ್ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಅವರು ಸಾಕಷ್ಟು ಪ್ರೀತಿ, ಸಹಕಾರವನ್ನು ನನಗೆ ಕೊಟ್ಟಿದ್ದಾರೆ. ಶೂಟಿಂಗ್ ನಲ್ಲಿ ಕಳೆದ ಒಂದೊಂದು ದಿನವು ನನಗೆ ಇಂದೂ ನೆನಪಿದೆ. ಸುದೀಪ್ ಅವರು ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದರು ಎಂದಿದ್ದಾರೆ.
ಪೈರೆಸಿ ವಿರುದ್ಧ ಧ್ವನಿ ಎತ್ತಿದ ರಿಷಬ್ ಶೆಟ್ಟಿಗೆ ಸಾಥ್ ಕೊಟ್ಟ ಪವರ್ ಸ್ಟಾರ್..!
ಅಲ್ಲದೇ ನಾನು ನಿಮ್ಮನ್ನು ನೋಡಿ ನಟನೆಯನ್ನು ಕಲಿತಿದ್ದೇನೆ. ಕೆಂಪೇಗೌಡ ಸಿನಿನಿಮಾದಿಂದ ಸಾಕಷ್ಟು ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ನನಗೆ ಮೊದಲು ಸಿನಿಮಾ ರಂಗಕ್ಕೆ ಬಂದಾಗ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ನನಗೆ ತುಂಬ ಒಳ್ಳೆಯ ಪಾತ್ರಕೊಟ್ಟು ನನ್ನ ಸಿನಿಮಾರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದರು. ಸುದೀಪ್ ಅವರು ಪ್ರತಿಯೊಬ್ಬರಿಗೂ ಸಪೋರ್ಟ್ ಮಾಡುತ್ತಾರೆ. ನನ್ನ ಕಡೆಯಿಂದ ಕಿಚ್ಚಾ ಸುದೀಪ್ ಅವರಿಗೆ ಧನ್ಯವಾದಗಳು ಎಂದು ಹೇಳಿ ಸುದೀಪ್ ಅವರ ಸರಳತೆ ಒಳ್ಳೆಯತನವನ್ನ ನೆನೆದಿದ್ದಾರೆ ರಾಗಿಣಿ.