ಜಿಟಿ.ದೇವೇಗೌಡರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳಲ್ಲ – ಕುಮಾರಸ್ವಾಮಿ
ಮೈಸೂರು : ಶಾಸಕ ಜಿಟಿ.ದೇವೇಗೌಡರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿರೋ ಅವರು ಹಳೆಯ ತಪ್ಪು ಮತ್ತೆ ಮರುಕಳಿಸುವಂತೆ ಮಾಡಲ್ಲ. ಹೆಚ್.ಡಿ.ದೇವೇಗೌಡರಿಗೆ ಅವರ ಮೇಲೆ ಸಾಫ್ಟ್ ಕಾರ್ನರ್ ಇದೆ. ಅವರಿಗೆ ಸಾಕಷ್ಟು ಜನ ತಪ್ಪು ಸಂದೇಶ ನೀಡುತ್ತಿದ್ದಾರೆ. ಈ ಬಾರಿ ನಾನು ಜಿಟಿಡಿ ವಿಚಾರವನ್ನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಇಲ್ಲಿ ಕ್ಷಮೆ ನೀಡುವ ಪ್ರಮೇಯ ಇಲ್ಲ.
ಸಿಡಿ ಕೇಸ್ : ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ – ಹೆಚ್ ಡಿಕೆ
ಅವರು ದೊಡ್ಡ ಆಲದ ಮರ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಸಹಕಾರ ಕ್ಷೇತ್ರದಲ್ಲಿ ನನ್ನನ್ನ ಯಾರು ಅಲುಗಾಡಿಸಲು ಸಾಧ್ಯವಿಲ್ಲ ಅಂತಿದ್ದಾರೆ. ಹೌದು ನನಗೆ ಸಹಕಾರ ಕ್ಷೇತ್ರ ಗೊತ್ತಿಲ್ಲ. ಆದರೆ ನಾನು ಈ ಬಾರಿ ಚುನಾವಣೆಯಲ್ಲಿ ಯಶಸ್ಸು ಗಳಿಸುವ ವಿಶ್ವಾಸ ಇದೆ. ಕಾರ್ಯಕರ್ತರಿಗಾಗಿ, ಪಕ್ಷ ಉಳಿಸಿಕೊಳ್ಳಲು ನಾನು ಚುನಾವಣೆಗೆ ಧುಮುಕಿದ್ದೇನೆ. 2006ರಲ್ಲೇ ನಾವು ಬುದ್ದಿ ಕಲಿಯಬೇಕಿತ್ತು. ಆಗಲೇ ನಾನು ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ.








