ಮಾ. 31ರ ಒಳಗಾಗಿ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸದೇ ಇದ್ದರೇ 1000 ರೂ. ದಂಡ..!
ನವದೆಹಲಿ: ಭಾರತದಲ್ಲಿ ಪ್ರಸ್ತುತ ಪ್ರತಿಯೊಬ್ಬರಿಗೂ ಬೇಕೇ ಬೇಕಾದ ಮಹತ್ವದ ಡಾಕ್ಯುಮೆಂಟ್ ಅಥವ ಪ್ರೂಫ್ ಅಂದ್ರೆ ಅದು ಆಧಾರ್ ಕಾರ್ಡ್, ಸಿಮ್, ಬ್ಯಾಂಕ್, ಇಂದ ಹಿಡಿದು ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿರಲೇಬೇಕು. ಇದೀಗ ಆದಾಯ ತೆರಿಗೆ ಇಲಾಖೆ ಪ್ಯಾನ್ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಇರುವವರಿಗೆ ವಾರ್ನಿಂಗ್ ಕೊಟ್ಟಿದೆ.
ಮಾರ್ಚ್ 31ರ ಒಳಗಾಗಿ ಆಧಾರ್ ಲಿಂಕ್ ಮಾಡಿಸದೆ ಇದ್ದಲ್ಲಿ 1,000 ರೂಪಾಯಿ ದಂಡ ವಿಧಿಸುದಾಗಿ ಶಾಕ್ ನೀಡಿದೆ. ಈಗಾಗಲೇ ಕೊಟ್ಟಿರುವ ಕಾಲಾವಕಾಶದ ಒಳಗಾಗಿ ಯಾರೂ ತಮ್ಮ ಪ್ಯಾನ್ಕಾರ್ಡಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡದೆ ಇರದವರಿಗೆ 1 ಸಾವಿರ ರೂಪಾಯಿ ದಂಡ ಹಾಕಿ ಅವರ ಪ್ಯಾನ್ ಕಾರ್ಡನ್ನು ಅಮಾನ್ಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
2021ನೇ ಹಣಕಾಸು ಮಸೂದೆಯಲ್ಲಿ ಹೊಸ ಸೆಕ್ಷನ್ 234 ಅನ್ನು ಆದಾಯ ತೆರಿಗೆ ಕಾಯ್ದೆಯಾಗಿ ರೂಪುಗೊಳಿಸಲಾಗಿದ್ದು, ಇದರ ಪ್ರಕಾರ ಮಾರ್ಚ್ 31ರ ಒಳಗಾಗಿ ಪ್ಯಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡದೆ ಇದ್ದರೆ ಅಂತವರಿಗೆ ದಂಡ ವಿಧಿಸಲಾಗುವುದು ಮತ್ತು ಪ್ಯಾನ್ ಕಾರ್ಡ್ ಅಮಾನ್ಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಕೊರೋನಾ 2ನೇ ಅಲೆ – 8 ರಾಜ್ಯಗಳ ಪೈಕಿ ಮಹಾರಾಷ್ಟ್ರದ್ದೇ ಸಿಂಹಪಾಲು – ಕರ್ನಾಟಕಕ್ಕೆ 2ನೇ ಸ್ಥಾನ..!
ನೇಪಾಳಕ್ಕೆ ಭಾರತದ ನೆರವು – 1 ಲಕ್ಷ ಲಸಿಕೆ ಪೂರೈಕೆ..!
ಭಾರತದಲ್ಲಿ 5 ದಿನಗಳಲ್ಲೇ ಕೋಟಿ ಕೋಟಿ ಬಾಚಿದೆ ವಿದೇಶಿ ಸಿನಿಮಾ..! ಆದ್ರೂ ನಿರೀಕ್ಷೆಯ ಹುಸಿಯಾಗಿದೆ…!