ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾನು…. ನೇಹಾ ಗೋಯಲ್…! ಸೈಕಲ್ ಫ್ಯಾಕ್ಟರಿಯಿಂದ ಟೋಕಿಯೋ ಒಲಿಂಪಿಕ್ಸ್ ತನಕ ನಡೆದು ಬಂದ ನನ್ನ ಹಾದಿ..!

admin by admin
June 18, 2021
in Newsbeat, Sports, ಕ್ರೀಡೆ
neha goyal hockey india saakshatv
Share on FacebookShare on TwitterShare on WhatsappShare on Telegram

neha goyal hockey india saakshatvನಾನು…. ನೇಹಾ ಗೋಯಲ್…! ಸೈಕಲ್ ಫ್ಯಾಕ್ಟರಿಯಿಂದ ಟೋಕಿಯೋ ಒಲಿಂಪಿಕ್ಸ್ ತನಕ ನಡೆದು ಬಂದ ನನ್ನ ಹಾದಿ..!

ಇದು ಸುಮಾರು 13 ವರ್ಷಗಳ ಹಿಂದಿನ ನೈಜ ಕಥೆ. ಕೆಸರಿನಲ್ಲಿ ಅರಳುವ ಕಮಲದ ಹಾಗೇ. ಕಡುಬಡತನದಲ್ಲಿ ಬೆಳೆದು ತನ್ನ ಹಾಕಿ ಆಟದ ಬದುಕನ್ನು ರೂಪಿಸಿಕೊಂಡ ಆಟಗಾರ್ತಿಯ ಯಶಸ್ಸಿನ ಯಶೋಗಾಥೆ..

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

ಅದು ಹರಿಯಾಣದ ಸೋನೆಪತ್ ಹಾಕಿ ಅಕಾಡೆಮಿಯ ಮೈದಾನ. ಆ ಮೈದಾನದಲ್ಲಿ
ಪ್ರೀತಮ್ ರಾಣಿ ಸಿವಾಚ್ ಅವರು ಹಾಕಿ ತರಬೇತಿ ನಡೆಸುತ್ತಿದ್ದರು. ಪ್ರೀತಮ್ ರಾಣಿ ಸಿವಾಚ್ ಅವರು 2002ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಭಾರತ ಮಹಿಳಾ ತಂಡದ ಆಟಗಾರ್ತಿ. ಜೊತೆಗೆ ಅರ್ಜುನ ಪ್ರಶಸ್ತಿ ವಿಜೇತೆ ಕೂಡ. ಸಣ್ಣ ಮೈದಾನದಲ್ಲಿ ಹಾಕಿ ಅಕಾಡೆಮಿ ನಡೆಸುತ್ತಿದ್ದ ಪ್ರೀತಮ್ ರಾಣಿ ಸಿವಾಚ್ ಮುಂದೊಂದು ದಿನ ಭಾರತೀಯ ಹಾಕಿ ತಂಡಕ್ಕೆ ಅದ್ಭುತ ಆಟಗಾರ್ತಿಯನ್ನು ಕೊಡುಗೆ ನೀಡುತ್ತೇನೆ ಎಂದು ಅಂದುಕೊಂಡಿರಲಿಲ್ಲ.
ಆದ್ರೆ ಅದೊಂದು ದಿನ ಪ್ರೀತಮ್ ರಾಣಿ ಸಿವಾಚ್ ಅವರ ಕಣ್ಣಿಗೆ ಭರವಸೆಯ ಬೆಳಕೊಂದು ಕಂಡಿತ್ತು. ಪ್ರತಿ ದಿನ ಮೈದಾನದದ ಮೂಲೆಯಲ್ಲಿ ನಿಂತುಕೊಂಡು ಅಕಾಡೆಮಿಯಲ್ಲಿ ಹಾಕಿ ಆಡುತ್ತಿರುವುದನ್ನು ಒಬ್ಬಳು ಬಾಲಕಿ ಕುತೂಹಲದಿಂದ ನೋಡುತ್ತಿದ್ದಳು.
neha goyal hockey india saakshatv pritham raniಒಂದು ದಿನ ಪ್ರೀತಮ್ ರಾಣಿ ಸಿವಾಚ್ ಮನಸ್ಸಿಗೆ ಅದೇನು ತೋಚಿತ್ತೋ ಗೊತ್ತಿಲ್ಲ. ತಕ್ಷಣವೇ ಆ ಬಾಲಕಿಯನ್ನು ತನ್ನತ್ತ ಕರೆದ್ರು. ಅಲ್ಲದೆ ಕೈಗೆ ಸ್ಕಿಪಿಂಗ್ ಹಗ್ಗವನ್ನು ಕೊಟ್ಟು ಜಂಪ್ ಮಾಡು ಎಂದು ಆದೇಶ ಮಾಡಿದ್ದರು. ಅಲ್ಲಿಯವರೆಗೆ ಆ ಬಾಲಕಿಯ ಹೆಸರು ಕೂಡ ಪ್ರೀತಮ್ ರಾಣಿಗೆ ಗೊತ್ತಿರಲಿಲ್ಲ.
ಸ್ಕಿಪಿಂಗ್ ರೋಪ್ ನಲ್ಲಿ ಜಂಪು ಮಾಡುತ್ತಿದ್ದ ಆ ಬಾಲಕಿಯ ಸ್ಟೆಮಿನ ನೋಡಿ ಪ್ರೀತಮ್ ರಾಣಿ ಚಕಿತಗೊಂಡಿದ್ದರು. ಆಗ ಹೊಳೆದದ್ದೇ ಈ ಬಾಲಕಿಗೆ ನಾನು ಯಾಕೆ ಹಾಕಿ ತರಬೇತಿ ನೀಡಬಾರದು ? ಈಕೆಯನ್ನು ಹಾಕಿ ಆಟಗಾರ್ತಿಯನ್ನು ಮಾಡಬಾರದು ಎಂದು..!
ತಡ ಮಾಡದೇ ಆ ಬಾಲಕಿಯ ಹೆಸರು ಏನು ಕೇಳಿದಾಗ… ಆ ಬಾಲಕಿ ಹೆದರುತ್ತಲೇ ತನ್ನ ಹೆಸರು ಹೇಳಿದಳು. ಈ ಬಾಲಕಿಯೇ ಈಗ ಭಾರತ ಹಾಕಿ ತಂಡದ ಮಿಡ್ ಫೀಲ್ಡರ್ ನೇಹಾ ಗೋಯಲ್.
24 ವರ್ಷದ ನೇಹಾ ಗೋಯಲ್ ಅವರ ಜೀವನ ಕಥೆಯೇ ಒಂದು ರೋಚಕ. ಕತ್ತಲೆಯಿಂದ ಬೆಳಕಿನೆಡೆಗೆ ಅಂತರಲ್ಲ ಅದೇ ರೀತಿ. ಕತ್ತಲೆಯಲ್ಲಿ ಮಂಕಾಗಿದ್ದ ನೇಹಾ ಗೋಯಲ್ ಪ್ರತಿಭೆ ಸೂರ್ಯನಂತತೆ ಪ್ರಜ್ವಲಿಸಿ ಅನಾವರಣಗೊಂಡಿದ್ದು ಭಾರತ ಹಾಕಿ ತಂಡದ ಮಾಜಿ ಆಟಗಾರ್ತಿ ಪ್ರೀತಮ್ ರಾಣಿಯವರಿಂದ.
neha goyal hockey india saakshatvಅಂದು 11ವರ್ಷದ ನೇಹಾ ಗೋಯಲ್ ಅವರ ಫಿಟ್ ನೆಸ್ ಗಮನಿಸಿದ್ದ ಪ್ರೀತಮ್ ರಾಣಿ ಸೀದಾ ಹೋಗಿದ್ದು ಒಂದು ಕೊಳಗೇರಿಯಲ್ಲಿದ್ದ ಕತ್ತಲೆಯ ಮನೆಗೆ. ಆ ಮನೆಯನ್ನು ನೋಡಿದಾಗ ಪ್ರೀತಮ್ ರಾಣಿಗೆ ಆಘಾತವಾಗಿತ್ತು. ಸರಿಯಾಗಿ ಬೆಳಕು, ಬಾಗಿಲು ಇಲ್ಲದ ಮನೆ. ಒಂದು ಕೊಠಡಿ, ಒಂದು ಸಣ್ಣ ಟಿವಿ.. ಮನೆಯ ಮೂಲೆಯಲ್ಲಿರುವ ಅಡುಗೆ ಮನೆ. ಮನೆಯನ್ನು ನೋಡಿದಾಗಲೇ ಪ್ರೀತಮ್ ರಾಣಿ ಅವರಿಗೆ ನೇಹಾ ಗೋಯಲ್ ಅವರ ಆರ್ಥಿಕ ಪರಿಸ್ಥಿತಿ ಅರಿವಾಗಿತ್ತು. ನಿನಗೆ ನಾನು ಊಟ ಕೊಡುತ್ತೇನೆ. ಹಾಕಿ ಆಡುತ್ತಿಯಾ ಎಂದು ಕೇಳಿದಾಗ ನೇಹಾ ಗೋಯಲ್ ತಡ ಮಾಡದೇ “ಹುಂ” ಅಂದುಬಿಟ್ಟಳು.
ಯಾಕಂದ್ರೆ ನೇಹಾ ಗೋಯಲ್ ಅವರಿಗೆ ಬಡತನ ಏನು ಎಂಬುದು ಗೊತ್ತಾಗಿತ್ತು. ಅದಕ್ಕಿಂತ ಹೆಚ್ಚಾಗಿ ಕುಡುಕ ತಂದೆಯ ಭಯದಿಂದ ಹೊರಬೇಕಾಗಿತ್ತು. ಪ್ರತಿ ದಿನ ಕುಡಿದು ಬಂದು ರಂಪಾಟ ಮಾಡುತ್ತಿದ್ದ ತಂದೆ ಒಂದು ಕಡೆಯಾದ್ರೆ, ತಾಯಿ ಸಾವಿತ್ರಿ ದೇವಿ ಕಷ್ಟಪಟ್ಟು ಸಂಸಾರ ಸಾಗಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದ ನೇಹಾಗೆ ಮನೆಯಿಂದ ಹೊರಬರಲು ದಾರಿಯೊಂದು ಸಿಕ್ಕಿತ್ತು. ಇಬ್ಬರು ಅಕ್ಕಂದಿರ ಪ್ರೀತಿ ಇದ್ರೂ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ತಾಯಿಗೆ ನೆರವಿಗೆ ನಿಂತಿದ್ದಳು.
ಸ್ಥಳಿಯ ಸೈಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿತ್ರಿ ದೇವಿಗೆ ಹಾಕಿ ತರಬೇತಿಯ ಬಳಿಕ ನೆರವಿಗೆ ಧಾವಿಸುತ್ತಿದ್ದಳು. ತಿಂಗಳಿಗೆ 2000 ವೇತನ ಪಡೆದು ಇಡೀ ಸಂಸಾರದ ಜವಾಬ್ದಾರಿಯನ್ನು ಸಾವಿತ್ರಿ ದೇವಿ ನಿಭಾಯಿಸುತ್ತಿದ್ದರು.
neha goyal hockey india saakshatvಇನ್ನೊಂದು ಕಡೆ ಹಾಕಿ ಆಟವನ್ನು ಕರಗತ ಮಾಡಿಕೊಂಡ ನೇಹಾ ಗೋಯಲ್ ಕೋಚ್ ಪ್ರೀತಮ್ ರಾಣಿಯವರ ಅಚ್ಚುಮೆಚ್ಚಿನ ಶಿಷ್ಯೆಯಾದಳು.
ಕೊಟ್ಟ ಮಾತಿನಂತೆ ಪ್ರೀತಮ್ ರಾಣಿ ನೇಹಾ ಗೋಯಲ್ ಅವರನ್ನು ಹಾಕಿ ಆಟಗಾರ್ತಿಯಾಗಿ ರೂಪುಗೊಳಿಸಿದ್ರು. ರಾಜ್ಯಮಟ್ಟದ ಪಂದ್ಯವೊಂದರಲ್ಲಿ ನೇಹಾ ಸರಿಯಾಗಿ ಓಡುತ್ತಿರಲಿಲ್ಲ. ಆಟದ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದರು. ಆಗ ಕೋಚ್ ಏನಾಗಿದೆ ಎಂದು ಕೇಳಿದಾಗ ಕಾಲಿನ ಒಂದು ಶ್ಯೂನಲ್ಲಿ ದೊಡ್ಡ ರಂಧ್ರವಿತ್ತು. ಹೀಗಾಗಿ ನೇಹಾ ಗೋಯಲ್ ಸರಿಯಾಗಿ ಆಡಲು ಸಾಧ್ಯವಾಗಿರಲಿಲ್ಲ. ವಿರಾಮದ ವೇಳೆ ನೇಹಾ ಗೊಯಲ್ ಅವರನ್ನು ಪ್ರಿತಮ್ ರಾಣಿಯ ಅವರ ಪತಿ ಕುಲದೀಪ್ ಅವರು ಶ್ಯೂ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಶ್ಯೂ ಖರೀದಿಸಿದ್ದರು. ಆನಂತರ ನೇಹಾ ಗೋಯಲ್ ಆಟದ ಶೈಲಿಯೇ ಬದಲಾಗಿ ಹೋಯ್ತು. ಮಹತ್ವದ ಘಟ್ಟದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿಗೂ ಕಾರಣಳಾಗಿದ್ದಳು ಎಂಬುದನ್ನು ಕೋಚ್ ಪ್ರೀತಮ್ ರಾಣಿ ಈಗಲೂ ನೆನಪಿಸಿಕೊಳ್ಳುತ್ತಾರೆ.
neha goyal hockey india saakshatvಗೋಲು ಗಳಿಸುವ ಚಾಣಕ್ಯತೆ, ಆಟದಲ್ಲಿನ ವೇಗ ಹೀಗೆ ಹಾಕಿ ಆಟದ ಗ್ರಾಮರ್ ಗಳನ್ನು ಕಲಿತುಕೊಂಡ ನೇಹಾ ಗೋಯಲ್ ತನ್ನ 18ನೇ ಹರೆಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ರು. ನಂತರ ಹಿಂತಿರುಗಿ ನೋಡಲೇ ಇಲ್ಲ. ಭಾರತ ಹಾಕಿ ತಂಡದ ಕೋಚ್ ಜೋರೆಡ್ ಮರಿಂಜೆ ಅವರ ಗರಡಿಯಲ್ಲಿ ಪಳಗಿದ ನೇಹಾ ಗೋಯಲ್ ಭಾರತ ಹಾಕಿ ತಂಡದ ಪ್ರಮುಖ ಆಟಗಾರ್ತಿಯಾಗಿ ಹೊರಹೊಮ್ಮಿದ್ರು. ಇದೀಗ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತ ತಂಡದ ಪ್ರಮುಖ ಆಟಗಾರ್ತಿ ನೇಹಾ ಗೋಯಲ್.
ಕತ್ತಲ ಕೋಣೆಯಿಂದ ಹೊರಬಂದ ನೇಹಾ ಗೋಯಲ್ ತನ್ನ ಹಳೆಯ ಬದುಕನ್ನು ಇಂದೂ ಮರೆತಿಲ್ಲ. ಕಷ್ಟದ ಸಮಯದಲ್ಲಿ ತನ್ನ ಪ್ರತಿಭೆಯನ್ನು ಗುರುತಿಸಿ ಪೋಷಣೆ ಮಾಡಿದ ಪ್ರೀತಮ್ ರಾಣಿ ಅವರ ಅಕಾಡೆಮಿಗೆ ಸಹಾಯ ಮಾಡುತ್ತಿದ್ದಾರೆ.
neha goyal hockey india saakshatvಹಾಗೇ ತನ್ನ ತಾಯಿ ಸಾವಿತ್ರಿ ದೇವಿ ದೆಹಲಿ – ಚಂಢಿಗಡ ಹೈವೆಯ ಹೈಫೈ ಏರಿಯಾದಲ್ಲಿ ಬಹುಅಂತಸ್ತಿನ ಮಹಡಿಯಲ್ಲಿ ಮನೆ ಮಾಡಿ ಸುಖವಾಗಿ ಜೀವನ ಸಾಗಿಸುವಂತೆ ಮಾಡಿದ್ದಾರೆ. ಆದ್ರೆ ಮಗಳ ಯಶಸ್ಸನ್ನು ನೋಡುವ ಭಾಗ್ಯ ನೇಹಾ ಗೋಯಲ್ ಅವರ ತಂದೆಗೆ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದ ತಂದೆಯ ಬಗ್ಗೆ ಅನುಕಂಪವೂ ಇದೆ. ಆದ್ರೆ ಭಯ ಮಾತ್ರ ಹೋಗಿಲ್ಲ. ಮಗಳು ಆಡುತ್ತಿರುವುದನ್ನು ನೋಡಲು ಅಕಾಡೆಮಿಗೆ ಬಂದು ರಂಪಾಟ ಮಾಡುತ್ತಿದ್ದ ತಂದೆಯನ್ನು ಅಕಾಡೆಮಿಯತ್ತ ಸುಳಿಯಬೇಡ ಎಂದು ಹೇಳಿದ್ದರು ನೇಹಾ ಗೋಯಲ್.
4.9 ಅಡಿ ಎತ್ತರ ನೇಹಾ ಗೋಯಲ್ ಅವರು ಅದ್ಭುತವಾಗಿ ಗೋಲು ದಾಖಲಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತನ್ನ ಶಿಷ್ಯೆಯ ಸಾಧನೆಯ ಬಗ್ಗೆ ಕೋಚ್ ಪ್ರೀತಮ್ ರಾಣಿ ಅವರಿಗೆ ಹೆಮ್ಮೆ ಇದೆ.

ಒಟ್ಟಿನಲ್ಲಿ ಬಡತನ ಬೇಗೆಯಲ್ಲಿ ಅರಳಿದ ನೇಹಾ ಗೋಯಲ್, ಯುವ ಆಟಗಾರ್ತಿಯರಿಗೆ ಸ್ಪೂರ್ತಿಯ ಚಿಲುಮೆ. ಪ್ರತಿಭೆಗೆ ಅವಕಾಶ ನೀಡಿದ್ರೆ ಯಾವ ರೀತಿ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂಬುದಕ್ಕೆ ನೇಹಾ ಗೋಯಲ್ ಅವರ ಬದುಕು ಉತ್ತಮ ನಿದರ್ಶನ.

Tags: #saakshatvcycle factoryhariyanahockey academy in Sonepathockey indiaIndian hockey teamneha goyalPritam rani SiwachTokyo Olympics
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram