ಹಲಸಿನ ಹಣ್ಣಿನ ಮಂಗಳೂರು ಬನ್ಸ್
ಬೇಕಾಗುವ ಸಾಮಗ್ರಿಗಳು :
ಚಿಕ್ಕದಾಗಿ ಕತ್ತರಿಸಿದ ಹಲಸಿನ ಹಣ್ಣಿನ ತೊಳೆ – 1 ಕಪ್
ಸಕ್ಕರೆ – ಅಗತ್ಯವಿರುವಷ್ಟು
ಗೋದಿ ಹಿಟ್ಟು – ಅಗತ್ಯವಿರುವಷ್ಟು
ಜೀರಿಗೆ – 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
ಮಾಡುವ ವಿಧಾನ

ಮೊದಲಿಗೆ ಹಲಸಿನ ಹಣ್ಣು ಮತ್ತು ಸಕ್ಕರೆಯನ್ನು ಮಿಕ್ಸಿ ಜಾರಿನಲ್ಲಿ ಹಾಕಿ ನೀರು ಹಾಕದೆ ಚೆನ್ನಾಗಿ ನಯವಾಗಿ ರುಬ್ಬಿ.
ನಂತರ ಇದನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಅದಕ್ಕೆ ಬೇಕಾಗಿರುವಷ್ಟು ಗೋಧಿ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ. ಪೂರಿ ಹಿಟ್ಟಿನ ಹದಕ್ಕೆ ಬರುವವರೆಗೆ ನಾದಿ. ಬಳಿಕ 2 ಗಂಟೆಗಳ ಕಾಲ ಹಾಗೆಯೇ ಬಿಡಿ.
ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿ ತರ ಲಟ್ಟಿಸಿ ಇಟ್ಟುಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಒಂದೊಂದಾಗಿ ಪೂರಿಯನ್ನು ಕರಿದು ತೆಗೆಯಿರಿ. ರುಚಿಯಾದ ಹಲಸಿನ ಹಣ್ಣಿನ ಮಂಗಳೂರು ಬನ್ಸ್ ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1406802102706397185?s=19
https://twitter.com/SaakshaTv/status/1407164561485185026?s=19
https://twitter.com/SaakshaTv/status/1406829577209581569?s=19
https://twitter.com/SaakshaTv/status/1407181615835586561?s=19
#Saakshatv #cookingrecipe #jackfruit #Mangalorebuns








