ಭಾರತೀಯ ಸಿನಿಮಾ ಜಗತ್ತನ್ನು ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಅಂತ ಯಾರದ್ರೂ ಇದ್ರೆ, ಅದು ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿ ಮಾತ್ರ. ಬ್ಲಾಕ್ ಬಸ್ಟರ್ ಬಾಹುಬಲಿ ಸರಣಿಯ ಬಳಿಕ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂಬರುವ ಚಿತ್ರ ಖಖಖ ಸಿನಿಮಾಗೆ ಕೈ ಹಾಕಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ರಾಮ್ ಚರಣ್, ಜೂನಿಯರ್ ಎನ್ಟಿಆರ್, ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ರಂತಹ ಖ್ಯಾತ ತಾರಾಗಣವನ್ನೇ ಹೊಂದಿರೋ ಈ ಸಿನೆಮಾ ಜನವರಿ 8, 2021ಕ್ಕೆ ತೆರೆಯ ಮೇಲೆ ರಾರಾಜಿಸುವ ಅಂದಾಜು ಇದೆ.
ಬಿಡುಗಡೆಗೂ ಮುನ್ನವೇ ಸೌಂಡ್ ಮಾಡ್ತಿರೋ ಈ ಸಿನೆಮಾ ‘RRR’, ಕರ್ನಾಟಕದಲ್ಲಿ 50 ಕೋಟಿ ಸೇರಿದಂತೆ ಕೇರಳದಲ್ಲಿ 15 ಕೋಟಿಗೆ ಮಾರಾಟವಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಥಿಯೇಟರ್ ಹಂಚಿಕೆ ಕುರಿತು ಮಾತುಕತೆಗಳು ನಡೆಯುತ್ತಿದ್ದು ಬಾರೀ ಪೈಪೋಟಿ ಕಂಡುಬಂದಿದೆ, ಇನ್ನು, ಉತ್ತರ ಭಾರತದ ಮಾರುಕಟ್ಟೆಗಳಲ್ಲೂ ಸಹ ಈ ಚಿತ್ರವು ಅನೇಕ ದಾಖಲೆಗಳನ್ನು ಮುರಿಯುವ ಸಾಧ್ಯತೆಗಳಿದ್ದು ವಿದೇಶಗಳಲ್ಲಿ 70 ಕೋಟಿಗೆ ಸೇಲ್ ಆಗಿದೆ. ಸದ್ಯ ‘ಖಖಖ’ ಚಿತ್ರವು ಬಿಡುಗಡೆಗೂ ಮೊದಲೇ 400 ಕೋಟಿ ವ್ಯವಹಾರ ನಡೆಸಿದ್ದು ಮುಂದೆ ಮತ್ತಷ್ಟು ದಾಖಲೆ ಬರೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.







