ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ 59ನೇ ಹುಟ್ಟುಹಬ್ಬದ ಸಂಭ್ರಮ
ಓಂ ಮೂಲಕ ಸಿನಿಮಾ ರಂಗದಲ್ಲಿ ಪಾತಕ ಲೋಕ ಪರಿಚಯಿಸಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ‘ವಜ್ರಕಾಯ’ನಾಗಿ ನಾಗಿ ಮೆರೆದು, ಅಪಾರ ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸೂಪರ್ ಹಿಟ್ ಸಿನಿಮಾಗಳನ್ನ ನೀಡುತ್ತಾ ಸ್ಯಾಮಡಲ್ ವುಡ್ ನಲ್ಲಿ ಇಷ್ಟು ವರ್ಗಳ ಕಾಲ ಆಳಿರುವ ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು , ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕವೇ ವಿಶ್ ಮಾಡ್ತಾ ಇದ್ದಾರೆ..
ಕೋವಿಡ್ ಸಮಯವಾಗಿರೋದ್ರಿಂದ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ತಿದ್ದಾರೆ ಶಿವರಾಜ್ ಕುಮಾರ.. ಪರಿಸ್ಥಿತಿ ಮೊದಲಿನಂತೆ ಇದ್ದಿದ್ದರೆ ಶಿವಣ್ಣ ಅವರ ಬರ್ತ್ ಡೇ ಅನ್ನು ಅಭಿಮಾನಿಗಳು ಸಡಗರ ಸಂಭ್ರಮಿದಿಂದ ಅದ್ದೂರಿಯಾಗಿ ಆಚೃನೆ ಮಾಡ್ತಾ ಇದ್ರು. ಆದ್ರೆ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ವಿಡಿಯೋ ಮಾಡಿ ಯಾರೂ ಕೂಡ ಮನೆ ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದರು. 
ಖಾಸಗಿ ವಾಹಿನಿಯಿಂದ ರಕ್ಷಿತ್ ಶೆಟ್ಟಿ ತೇಜೋವಧೆ : ಸಿಂಪಲ್ ಸ್ಟಾರ್ ಪ್ರತಿಕ್ರಿಯೆ
ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭ ಇಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ವಿಜಯ್ ಮಿಲ್ಟನ್ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾದ ಹೆಸರು ಇಂದು ಘೋಷಣೆ ಆಗಲಿದೆ. ಈ ಸಿನಿಮಾದಲ್ಲಿ ನಟ ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ.
ರಿಷಬ್ ಶೆಟ್ಟಿ, ಶಿವಣ್ಣನಿಗಾಗಿ ನಿರ್ದೇಶಿಸಲಿರುವ 126ನೇ ಹೊಸ ಸಿನಿಮಾದ ಟೈಟಲ್ ಸಹ ಇಂದೇ ಘೋಷಣೆ ಆಗಲಿದೆ. ಶಿವಣ್ಣನಿಗಾಗಿ ಅನಿಲ್ ರವಿಪುಡಿ ನಿರ್ದೇಶಿಸಲಿರುವ ಸಿನಿಮಾ, ಹರ್ಷಾ ನಿರ್ದೇಶಿಸಲಿರುವ ವೇದ ಸಿನಿಮಾಗಳ ಬಗ್ಗೆಯೂ ಅಪ್ಡೇಟ್ ಇಂದು ಹೊರಬೀಳುವ ಸಾಧ್ಯತೆ ಇದೆ. ಶಿವರಾಜ್ ಕುಮಾರ್ ಅವರು ಅನೇಕ ಎವರ್ ಗ್ರೀನ್ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಜೋಗಿ , ಓಂ , ಭಜಜರಂಗಿ , ವಜ್ರಕಾಯ , ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.








