ತಮಿಳುನಾಡು ಸರ್ಕಾರದ್ದು ಕುಯುಕ್ತಿ ಬುದ್ಧಿ : ಸುಧಾಕರ್ Dr K Sudakar
ಚಿಕ್ಕಬಳ್ಳಾಪುರ : ತಮಿಳುನಾಡು ಸರ್ಕಾರ ಕುಯುಕ್ತಿ ಬುದ್ಧಿ ಅನುಸರಿಸುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಕ್ಯಾತೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸುಧಾಕರ್,ತಮಿಳುನಾಡು ಸರ್ಕಾರ ಕುಯುಕ್ತಿ ಬುದ್ಧಿ ಅನುಸರಿಸುತ್ತಿದೆ. ಕಾವೇರಿ ತೀರ್ಪಿಗಿಂತ ಹೆಚ್ಚಿಗೆ ನೀರು ಸರಬರಾಜು ಮಾಡ್ತಿದ್ದೇವೆ.
ಮೇಕೆದಾಟು ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೆ ಯಾವುದೆ ತೊಂದರೆಯಿಲ್ಲ. ಅನಗತ್ಯವಾಗಿ ತಮಿಳುನಾಡು ಸರ್ಕಾರ ಮೂಗು ತೂರಿಸುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ನಿರ್ಧಾರ ಸರಿಯಲ್ಲ ಎಂದು ಹೇಳಿದರು.
ಇನ್ನು ತಮಿಳುನಾಡು ಸರ್ಕಾರದ ನಿರ್ಧಾರ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ ಸುಧಾಕರ್, ಕರ್ನಾಟಕ ರಾಜ್ಯದ ಜೊತೆ ತಮಿಳುನಾಡು ಸರ್ಕಾರ ಅನೋನ್ಯತೆಯಿಂದ ವರ್ತಿಸಬೇಕು. ತಮಿಳುನಾಡು ಹಾಗೂ ಕರ್ನಾಟಕ ಒಂದೆ ತಾಯಿ ಮಕ್ಕಳಿದ್ದಂತೆ ಎಂದರು.