ವಿದ್ಯಾರ್ಥಿಗಳೇ ಗಮನಿಸಿ : ಈ ಕಾಲೇಜುಗಳ ಓಪನ್ ಗೆ ಗ್ನೀನ್ ಸಿಗ್ನಲ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಗಳಿಗೆ ಸಂಬಂಧಿಸಿದ ಮೆಡಿಕೆಲ್ ಕಾಲೇಜುಗಳ ಓಪನ್ ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಈ ಸಂಬಂಧ ಸರ್ಕಾರದಿಂದ ಆದೇಶ ಬಂದಿದ್ದು, ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ( ಮೆಡಿಕಲ್, ಡೆಂಟಲ್ ಕಾಲೇಜ್, ಆಯುಷ್ ಕಾಲೇಜು ಮತ್ತು ಇನ್ಸಿಟಿಟ್ಯೂಷನ್ನ್, ನಸಿರ್ಂಗ್ ಕಾಲೇಜು ಮತ್ತು ಹೆಲ್ತ್ ಕೇರ್ ಅಕಾಡೆಮಿಕ್ ಇನ್ಟಿಟ್ಯೂಷನ್, ಕಾಲೇಜು ಇತರೆ) ಸಂಸ್ಥೆಗಳು ಕೂಡಲೇ ತೆರೆಯಲು ಷರತ್ತುಗಳೊಂದಿಗೆ ಅನುಮತಿಸಲಾಗಿದೆ.
ಷರತ್ತುಗಳು ಏನು..?
ಕಾಲೇಜುಗಳಿಗೆ ಆಗಮಿಸುವಂತ ವಿದ್ಯಾರ್ಥಿಗಳು, ಟೀಚಿಂಗ್ ಸ್ಟಾಫ್, ನಾನ್ ಟೀಚಿಂಗ್ ಸ್ಟಾಪ್, ಇತರೆ ಸಿಬ್ಬಂದಿಗಳು ಕನಿಷ್ಠ ಮೊದಲ ಡೋಸ್ ಕೊರೋನಾ ಲಸಿಕೆ ಪಡೆದಿರಬೇಕು.
ಕಾಲೇಜು, ಇನ್ಟಿಟ್ಯೂಟ್ ಗಳಲ್ಲಿ ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಬೇಕು.
ಈ ಮೇಲ್ಕಂಡ ಷರತ್ತುಗಳೊಂದಿಗೆ ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ಕಾಲೇಜುಗಳನ್ನು ತೆರೆಯೋದಕ್ಕೆ ಅನುಮತಿಸಲಾಗಿದೆ. ಈ ಮಾರ್ಗಸೂಚಿಯನ್ನು ಪಾಲಿಸದೇ ಇದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ತಿಳಿಸಿದೆ.









