ಕೆನ್ನೆಗೆ ಹೊಡೆದರೆ ನೆಲಕಚ್ಚುವಂತೆ ತಿರುಗಿಸಿ ಬಾರಿಸುತ್ತೇವೆ : ಬಿಜೆಪಿಗೆ ಮಾತಿನ ಏಟು ಕೊಟ್ಟ ಉದ್ಧವ್
ಮಹಾರಾಷ್ಟç ಸಿಎಂ ಉದ್ಧವ್ ಠಾಕ್ರೆ ಬಿಜೆಪಿ ಮೇಲೆ ಮಾತಿನ ಚಾಟಿ ಪ್ರಯೋಗ ಮಾಡಿದ್ದಾರೆ. ಬೆದರಿಕೆಯ ಮಾತುಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ. ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಪ್ರತ್ಯುತ್ತರ ಕೊಡುತ್ತೇವೆ ಎಂದಿರುವ ಉದ್ಧವ್ , ಅಗತ್ಯ ಬಿದ್ದರೆ ಮುಂಬೈ ಸೆಂಟ್ರಲ್ನಲ್ಲಿ ಇರುವ ಶಿವಸೇನಾದ ಕೇಂದ್ರ ಕಚೇರಿ ಸೇನಾ ಭವನ್ ಅನ್ನೂ ಕೆಡವಲಾಗುವುದು ಎಂಬ ಬಿಜೆಪಿ ಶಾಸಕ ಪ್ರಸಾದ್ ಲಾಡ್ ಅವರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.. ಅಲ್ಲದೇ ಕೆನ್ನೆಗೆ ಹೊಡೆದರೆ ನೆಲಕಚ್ಚುವಂತೆ ತಿರುಗಿಸಿ ಬಾರಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
‘ದಬಾಂಗ್’ ಚಿತ್ರದ ‘ತಪ್ಪಡ್ಸೇ ಡರ್ ನಹೀ ಲಗ್ತಾ’ ಎಂಬ ಸಂಭಾಷಣೆ ಉಲ್ಲೇಖಿಸಿರುವ ಅವರು, ಕಪಾಳಕ್ಕೆ ಹೊಡೆದರೆ ನಾವು ಹೆದರುವುದಿಲ್ಲ. ಹೊಡೆದವರು ನೆಲಕಚ್ಚುವಂತೆ ಪ್ರತಿಯಾಗಿ ಕಪಾಳಕ್ಕೆ ಬಾರಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೇ ವಸತಿ ಪುರ‍್ವಸತಿ ಯೋಜನೆಗಳ ಸಂರ‍್ಭದಲ್ಲಿ ಮರಾಠಿ ಸಂಸ್ಕೃತಿಯನ್ನು ರಕ್ಷಿಸಬೇಕು. ಮರಾಠಿ ಸಂಸ್ಕೃತಿಯ ಇತಿಹಾಸದಲ್ಲಿ ಸಂಯುಕ್ತ ಮಹಾರಾಷ್ಟ್ರ ಆಂದೋಲನದಲ್ಲಿ ಹೋರಾಡಿದವರ ಹೆಜ್ಜೆಗಳಿವೆ. ಮರಾಠಿ ಸಂಸ್ಕೃತಿ ಉಳಿಸಬೇಕು, ಚಾಳ್ಗಳಲ್ಲಿ (ವಸತಿ ಸಂಕರ‍್ಣ) ವಾಸವಿರುವ ಮರಾಠಿಗರಿಗೆ, ಮರು ನರ‍್ಮಾಣ ಮಾಡಿದ ವಸತಿಗಳಲ್ಲಿ ವಾಸವಿರಲು ಅವಕಾಶ ಇರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.








