50 ವರ್ಷದ ನಟನೊಬ್ಬ 21 ವರ್ಷದ ಯುವತಿಯೊಂದುಗೆ ವಿವಾಹವಾಗಿ ಸುದ್ದಿಯಾಗಿದ್ದಾರೆ.
ನಟ ಹಾಗೂ ಫಿಟ್ ನೆಸ್ ಟ್ರೈನರ್ ಸಾಹಿಲ್ ಖಾನ್ 21ನೇ ವಯಸ್ಸಿನ ಯುವತಿ ಜೊತೆ 2ನೇ ಮದುವೆಯಾಗಿದ್ದಾರೆ. ಸದ್ಯ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಬಗೆ ಬಗೆಯ ಕಮೆಂಟ್ ಮಾಡುತ್ತಿದ್ದಾರೆ.
ಸುಂದರ ಯುವತಿಯ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ನಟ, ಈಕೆ ನನ್ನ ಗೊಂಬೆʼ ಸಾಹಿಲ್ ಖಾನ್ ಎಂದು ಹೇಳಿದ್ದಾರೆ. ಅಲ್ಲದೇ, ಮಾಲ್ಡೀವ್ಸ್ನಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ನಟ ಮಾಹಿತಿ ನೀಡಿದ್ದಾರೆ.
ಸದ್ಯ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. 2003ರಲ್ಲಿ ನಿಗರ್ ಖಾನ್ ಎಂಬುವವರನ್ನು ಸಾಹಿಲ್ ಖಾನ್ ಮದುವೆಯಾಗಿದ್ದರು. 2005ರಲ್ಲಿ ಮೊದಲ ಪತ್ನಿಗೆ ನಟ ಡಿವೋರ್ಸ್ ನೀಡಿದರು. ಸಾಹಿಲ್ ಬಾಲಿವುಡ್ ನ ಕೆಲವು ಚಿತ್ರಗಳಲ್ಲಿ ನಟೆಸಿದ್ದಾರೆ.