ಸೂರತ್: ಭಿಕ್ಷುಕನೊಬ್ಬ ತನ್ನ ಬಳಿ ಸಾಕಷ್ಟು ಹಣ ಇದ್ದರೂ ಹಸಿವಿನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎರಡು ದಿನಗಳಿಂದ ಗಾಂಧಿ ಗ್ರಂಥಾಲಯದ ಹತ್ತಿರ ಭಿಕ್ಷುಕನೊಬ್ಬ ರಸ್ತೆ ಬದಿ ಬಿದ್ದಿರುವುದನ್ನು ಅಂಗಡಿ ಮಾಲೀಕರು ಗಮನಿಸಿ, ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಭಿಕ್ಷುಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ, ಆತ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೊಲೀಸರಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತನಿಖೆಯ ವೇಳೆ ಮೃತ ಭಿಕ್ಷುಕನ ಜೇಬಿನಲ್ಲಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ. ಆದರೂ ಆತ ಹಸಿವಿನಿಂದ ಸಾವನ್ನಪ್ಪಿರುವ ಕುರಿತು ಸಂಶಯ ವ್ಯಕ್ತವಾಗಿದೆ.
ಭಿಕ್ಷುಕನ ಬಳಿ ರೂ.1.14 ಲಕ್ಷ ನಗದು ಪತ್ತೆಯಾಗಿದೆ. 10- 20ರೂಪಾಯಿಯಿಂದ ಹಿಡಿದು ಸಾಕಷ್ಟು ನೋಟುಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಪ್ಯಾಂಟ್ ನಲ್ಲಿ ಇರಿಸಲಾಗಿತ್ತು. ಈ ಹಣವನ್ನು ವಲ್ಸಾದ್ ಪಟ್ಟಣದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ’ ಎಂದು ಹೇಳಿದ್ದಾರೆ.