ಮುಂಬೈ: ಮದುವೆಯಾದರೇ ಸಾಕಪ್ಪ ಎನ್ನುವಂತಹ ಕಾಲಮಾನದಲ್ಲಿ ಇಲ್ಲೊಬ್ಬ ಮಹಿಳೆಗೆ ಕೋಟಿಗೆ ಕೋಟಿ ಆದಾಯವೇ ಇರುವ ಹುಡುಗ ಬೇಕಂತೆ.
ಅಂಬರ್ ಎಂಬ ಜಾಲತಾಣ ಖಾತೆಯಲ್ಲಿ, ಮುಂಬೈನ 37 ವರ್ಷದ ಮಹಿಳೆ ತಮ್ಮನ್ನು ಮದುವೆಯಾಗುವ ವರ ಹೇಗಿರಬೇಕು ಎಂದು ನಡೆಸಿರುವ ಸಂಭಾಷಣೆ ಹಂಚಿಕೊಂಡಿದ್ದಾರೆ. ವರ್ಷಕ್ಕೆ 4 ಲಕ್ಷ ಆದಾಯವನ್ನು ಗಳಿಸುವ ಈ ವಧುವಿಗೆ ಕೋಟಿ ಆದಾಯದ ವರ ಬೇಕಂತೆ. ಇದು ಮತ್ತೊಂದು ಹಂತದ ಭ್ರಮೆ’ ಎಂದು ಬರೆದುಕೊಂಡಿದ್ದಾರೆ.
ವರ್ಷಕ್ಕೆ ಕನಿಷ್ಠ 1 ಕೋಟಿ ಆದಾಯ ಇರಬೇಕು. ಮುಂಬೈನಲ್ಲಿ ಸ್ವಂತ ಮನೆ ಇರಬೇಕು. ವರ ಎಂಬಿಬಿಎಸ್, ಚಾರ್ಟಡ್ ಅಕೌಂಟೆಂಟ್ ರೀತಿ ಉನ್ನತ ಶಿಕ್ಷಣ ಪಡೆದಿರಬೇಕು. ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರಬೇಕು. ಇಟಲಿಯಲ್ಲಿ ಇದ್ದರೆ ಹೆಚ್ಚು ಸೂಕ್ತ ಬರೆದುಕೊಂಡಿದ್ದಾರೆ. ಇಷ್ಟೊಂದು ವಾರ್ಷಿಕ ಆದಾಯ ಹೊಂದಿರುವವರು ಭಾರತದಲ್ಲಿ ಕಡಿಮೆ ಇದ್ದು, ಜನರು ನೋಡಿ ಸಮ್ಮನಾಗುತ್ತಿದ್ದಾರೆ.